ಬೆಂಗಳೂರು: ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವದ ವೇದಿಕೆ ಕಾರ್ಯಕ್ರಮದ ರೂಪುರೇಷೆ ಎಐಸಿಸಿ ಸೂಚನೆಯಂತೆ ನಡೆಯುವ ಸಾಧ್ಯತೆ ಇದೆ.
Advertisement
ರಾಹುಲ್ ಗಾಂಧಿ ಭಾಗವಹಿಸುವ ಸಮಾವೇಶದಲ್ಲಿ ಹೈಕಮಾಂಡ್‍ಗೆ ಆಗಲಿ ಪಕ್ಷಕ್ಕಾಗಲಿ ಮುಜುಗರ ಆಗದಂತೆ ನೋಡಿಕೊಳ್ಳಲು ಸ್ವತಃ ಎಐಸಿಸಿಯೇ ಒಂದಷ್ಟು ಸೂಚನೆಗಳನ್ನು ಅಮೃತ ಮಹೋತ್ಸವ ಸಮಿತಿಗೆ ನೀಡಿದೆ ಎನ್ನಲಾಗುತ್ತಿದೆ. ಏನಿರಬೇಕು? ಏನಿರಬಾರದು ಎಂಬ ಮೌಖಿಕ ಸಂದೇಶ ರವಾನಿಸಿದೆ. ಸಿದ್ದರಾಮಯ್ಯ ಸಿಎಂ, ಅವರನ್ನು ಕೈ ಹಿಡಿಯಿರಿ, ಅವರ ಕೈ ಬಲಪಡಿಸಿ, ಮುಂದೆ ಅವರಿಗೆ ಅವಕಾಶ ಇದೆ. ಈ ರೀತಿಯ ಮಾತು, ನಡವಳಿಕೆ ಇದ್ಯಾವುದಕ್ಕೂ ವೇದಿಕೆ ಮೇಲೆ ಅವಕಾಶ ಇಲ್ಲ. ಓನ್ಲಿ ಪಾರ್ಟಿ… ನಾಟ್ ಎ ಪರ್ಸನ್ ಎಂಬ ಸಂದೇಶ ರವಾನಿಸಲು ಎಐಸಿಸಿ ಸೂಚಿಸಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನಾಳೆಯಿಂದ ದುಬಾರಿ ದುನಿಯಾ – ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿ
Advertisement
Advertisement
ಅಭಿಮಾನಿಗಳು, ಬೆಂಬಲಿಗರು ಸಹಾ ಮುಜುಗರ ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ವತಃ ಸಿದ್ದರಾಮಯ್ಯ ಹೆಗಲಿಗೆ ಹೊರಿಸಲಾಗಿದೆ. ಹೀಗೆ ಮುಂದಿನ ರಾಜಕೀಯ ಬೆಳವಣಿಗೆಯ ಯಾವುದೇ ಮಾತು ಅಥವಾ ಸನ್ನಿವೇಶ ಎದುರಾಗದಂತೆ ಕಾರ್ಯಕ್ರಮ ನಿರ್ವಹಿಸುವಂತೆ ಎಐಸಿಸಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತಡೆಗೋಡೆ ಕುಸಿತ : ಮಡಿಕೇರಿ- ಮಂಗಳೂರು ರಸ್ತೆ ಸಂಚಾರ ಬಂದ್