ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ – ವಯನಾಡ್‌ನಿಂದಲೇ ಸ್ಪರ್ಧೆ ಯಾಕೆ?

Public TV
3 Min Read
rahul gandhi nomination wayanad

ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ (Rahul Gandhi) ಕೇರಳದ ವಯನಾಡ್‌ನಿಂದ ಎರಡನೇ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. ಕಳೆದ ಬಾರಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದ ಅವರು ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಇಂದು ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಕಾರ್ಯಕರ್ತರು, ಬೆಂಬಲಿಗರ ಸಮೂಹದಲ್ಲಿ ವಯನಾಡಿನ ಕಲ್ಪೆಟ್ಟಾದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ, ಕೆಸಿ ವೇಣುಗೋಪಾಲ್, ಕೇರಳದ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಎಂಎಂ ಹಾಸನ್, ಪಕ್ಷದ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಸೇರಿದಂತೆ ಇತರ ರಾಜ್ಯ ನಾಯಕರು ಸಾಥ್ ನೀಡಿದರು. ಇದನ್ನೂ ಓದಿ: ಇವಿಎಂ ಜೊತೆಗೆ ವಿವಿಪ್ಯಾಟ್ ಮತ ಎಣಿಕೆಗೆ ಆಗ್ರಹ – ವಿಚಾರಣೆಗೆ ಒಪ್ಪಿದ ಸುಪ್ರೀಂ

rahul gandhi wayanad

ಬೃಹತ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ಅವರು ಸಂಸತ್‌ನಲ್ಲಿ ವಯನಾಡ್ ಪ್ರತಿನಿಧಿಸುವುದು ಗೌರವ ತಂದಿದೆ. ನಾನು ಚುನಾಯಿತ ಪ್ರತಿನಿಧಿಯಲ್ಲ. ನಾನು ನಿಮ್ಮ ಕುಟುಂಬ ಸದಸ್ಯನಂತೆ. ನನ್ನ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಹೇಗೆ ನೋಡುತ್ತೇನೆ ಹಾಗೇಯೇ ನಾನು ನಿಮ್ಮನ್ನು ನೋಡುತ್ತೇನೆ. ಹೀಗಾಗೀ ಕ್ಷೇತ್ರದಲ್ಲಿ ತಂದೆ-ತಾಯಿ ಸಹೋದರಿಯರಿದ್ದಾರೆ ಎಂದರು.

ಮುಂದುವರಿದು, ಕ್ಷೇತ್ರದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ರಾಷ್ಟ್ರ ಹಾಗೂ ವಿಶ್ವದ ಗಮನಕ್ಕೆ ತರಲು ನಾನು ಸದಾ ಸಿದ್ಧ. ಮನುಷ್ಯ-ಪ್ರಾಣಿ ಸಂಘರ್ಷ, ವೈದ್ಯಕೀಯ ಕಾಲೇಜು ಸಮಸ್ಯೆಗಳು ಈ ಹೋರಾಟದಲ್ಲಿ ನಾನು ವಯನಾಡು ಜನರೊಂದಿಗೆ ನಿಲ್ಲುತ್ತೇನೆ. ನಾವು ವೈದ್ಯಕೀಯ ಕಾಲೇಜಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದೇವೆ. ನಾನು ಸಿಎಂಗೆ ಪತ್ರ ಬರೆದಿದ್ದೇನೆ. ಆದರೆ, ದುರದೃಷ್ಟವಶಾತ್ ಅವರು ಮುಂದೆ ಹೋಗಲಿಲ್ಲ. ಇದನ್ನೂ ಓದಿ: ಬರ ಪರಿಹಾರ; ಕೇಂದ್ರ V/S ಕರ್ನಾಟಕ ಸರ್ಕಾರ – ರಾಜ್ಯ ‘ಸುಪ್ರೀಂ’ ಮೆಟ್ಟಿಲೇರಿದ್ಯಾಕೆ?

rahul gandhi wayanad 1

ದೆಹಲಿಯಲ್ಲಿ ನಮ್ಮ ಸರ್ಕಾರವಿದ್ದರೆ ಮತ್ತು ಕೇರಳದಲ್ಲಿ ನಮ್ಮ ಸರ್ಕಾರ ಬಂದಾಗ, ಇವೆರಡನ್ನೂ ನಾವು ಮಾಡುತ್ತೇವೆ. ನಾವು ಈ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ನನಗೆ ಸಂಪೂರ್ಣವಾಗಿ ಭರವಸೆ ಇದೆ. ನಾನು ಕೇವಲ ರಾಜಕೀಯ ಭಾಷಣ ಮಾಡುತ್ತಿಲ್ಲ. ಪಕ್ಷಗಳು, ಸಮುದಾಯಗಳು, ವಯಸ್ಸಿನ ಹೊರತಾಗಿಯೂ, ವಯನಾಡಿನ ಪ್ರತಿಯೊಬ್ಬ ವ್ಯಕ್ತಿಯೂ ನನಗೆ ಪ್ರೀತಿ, ಮಮತೆ, ಗೌರವವನ್ನು ನೀಡಿದ್ದಾರೆ. ನನ್ನನ್ನು ಅವರವರಂತೆ ನೋಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಅಭ್ಯರ್ಥಿ ಅನ್ನಿ ರಾಜಾ ಅವರು ಇಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ವಯನಾಡ್‌ಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ತನ್ನ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ವಯನಾಡಿನಿಂದ ಕಣಕ್ಕಿಳಿಸಿದೆ. ಇದನ್ನೂ ಓದಿ: ಜೈಲು ಸೇರಿದ ಕೇಜ್ರಿವಾಲ್‌ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್‌ ಗಂಭೀರ ಆರೋಪ

ರಾಹುಲ್ ಗಾಂಧಿಗೆ ವಯನಾಡು ಯಾಕೆ ಭದ್ರ
ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸುತ್ತಿದ್ದ ರಾಹುಲ್ ಗಾಂಧಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದಲೂ ಸ್ಪರ್ಧಿಸಲು ನಿರ್ಧರಿಸಿದರು. ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ತೀವ್ರ ಪೈಪೋಟಿ ಹಿನ್ನಲೆ ಕೇರಳದ ವಯನಾಡಿನಿಂತಹ ಭದ್ರ ಕ್ಷೇತ್ರವನ್ನು ರಾಹುಲ್ ಗಾಂಧಿ ಹುಡುಕಿಕೊಂಡರು.

ವಯನಾಡಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯ ಹೊಂದಿದೆ. ವಯನಾಡಿನ ಜನಸಂಖ್ಯೆಯಲ್ಲಿ ಮುಸ್ಲಿಮರು 32% ಮತ್ತು ಕ್ರಿಶ್ಚಿಯನ್ನರು 13% ರಷ್ಟಿದ್ದಾರೆ. ಈ ಕಾರಣಕ್ಕೆ ಕಳೆದ ಬಾರಿ ನಾಲ್ಕು ಲಕ್ಷ ಅಧಿಕ ಮತಗಳ ಅಂತರದಲ್ಲಿ ರಾಹುಲ್ ಗಾಂಧಿ ಗೆದ್ದು ಬೀಗಿದ್ದರು. ಇದನ್ನೂ ಓದಿ: ಮಹುವಾ ಮೊಯಿತ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಿಸಿದ ಇ.ಡಿ

ಆದರೆ ಈ ಬಾರಿ ಪರಿಸ್ಥಿತಿ ಕಳೆದ ಬಾರಿಯಂತಿಲ್ಲ. ಸಿಪಿಐ ನಿಂದ ಸ್ಪರ್ಧಿಸಿರುವ ಅನ್ನಿ ರಾಜಾ ಜನಪ್ರಿಯ ನಾಯಕಿಯಾಗಿದ್ದು ತೀವ್ರ ಪೈಪೊಟಿ ಕೊಡಲಿದ್ದಾರೆ. 6%-9% ಗೆ ಮತ ಪ್ರಮಾನ ಏರಿಸಿಕೊಂಡಿರುವ ಬಿಜೆಪಿ ಕೂಡಾ ಒಂದಷ್ಟು ಸೆಳೆಯುವ ಪ್ರಯತ್ನ ನಡೆಸಿದೆ. ಈ ನಡುವೆ ರಾಹುಲ್ ಗಾಂಧಿ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಚಾರ ಮಾಡಿದ್ದಾರೆ.

Share This Article