29 ವರ್ಷಗಳ ನಂತ್ರ ವೈಷಮ್ಯ ಶಮನ – ವೀರಶೈವ, ದಲಿತರೊಂದಿಗೆ ರಾಹುಲ್ ಸಹಭೋಜನ

Advertisements

ಮೈಸೂರು: ಗಾಂಧಿ ಜಯಂತಿ ಹಿನ್ನೆಲೆ ಮೈಸೂರಿನ ಬದನವಾಳು ಗ್ರಾಮದಲ್ಲಿ (Badanavalu Village) ಭಜನಾ ಕಾರ್ಯಕ್ರಮದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಭಾಗಿಯಾಗಿದ್ದರು. ನಂತರ ಬದನವಾಳು ಗ್ರಾಮದಲ್ಲಿ ವೀರಶೈವ – ದಲಿತ ಸಮುದಾಯದ ಜನರೊಂದಿಗೆ ಕುಳಿತು ಸಹಭೋಜನ (Lunch) ಮಾಡಿದ್ದಾರೆ.

Advertisements

1993ರಲ್ಲಿ ದೇವಸ್ಥಾನ ಲೋಕಾರ್ಪಣೆ ವಿಚಾರವಾಗಿ ವೀರಶೈವ ಹಾಗೂ ದಲಿತರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಮೂವರು ದಲಿತರ ಹತ್ಯೆಯಾಗಿತ್ತು. ಈ ಘಟನೆ ಹಿನ್ನಲೆಯಲ್ಲಿ ಎರಡು ಸಮುದಾಯದ ನಡುವೆ ವೈಷಮ್ಯ ಮೂಡಿತ್ತು. ಆದರೆ ಜೋಡೋ ಯಾತ್ರೆಯ (Bharat Jodo Yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸಹಭೋಜನ ನಡೆಸುವ ಮೂಲಕ ಇಪ್ಪತ್ತೊಂಬತ್ತು ವರ್ಷಗಳ ನಂತರ ಈ ಹಳೇ ವೈಷಮ್ಯವನ್ನು ಶಮನ ಮಾಡಿದ್ದಾರೆ. ಇದನ್ನೂ ಓದಿ: ಕಲಾವಿದರ ಕೋಟಾದಲ್ಲಿ ಎಂಎಲ್ಸಿ ಆಗಿರೋ ಯೋಗೇಶ್ವರ್‌ಗೆ 50 ಕೋಟಿ ಅನುದಾನ ಹೇಗೆ ಕೊಡ್ತಾರೆ: ನಿಖಿಲ್‌ ಪ್ರಶ್ನೆ

Advertisements

ದಲಿತರು, ಹಿಂದುಳಿದ ವರ್ಗ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ 28 ಜನರೊಂದಿಗೆ ಒಟ್ಟಿಗೆ ಕುಳಿತು ಸಹಭೋಜನ ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ (Siddaramaiah, ಡಿ.ಕೆ ಶಿವಕುಮಾರ್ (D.K.Shivakumar) , ಕೆ.ಸಿ ವೇಣುಗೋಪಾಲ್ (K.C.Venugopal) ಮತ್ತಿತರ ನಾಯಕರ ಉಪಸ್ಥಿತರಿದ್ದರು.  ಇದನ್ನೂ ಓದಿ: ಫುಟ್ಬಾಲ್ ತಂಡ ಸೋತಿದಕ್ಕೆ ಸ್ಟೇಡಿಯಂನಲ್ಲೇ ಗಲಭೆ – ಸಾವಿನ ಸಂಖ್ಯೆ 174ಕ್ಕೆ ಏರಿಕೆ, 180 ಮಂದಿಗೆ ಗಾಯ

Live Tv

Advertisements
Exit mobile version