ಜಕಾರ್ತ: ಇಂಡೋನೇಷ್ಯಾದಲ್ಲಿ (Indonesia) ಶನಿವಾರ ರಾತ್ರಿ ನಡೆದ ಫುಟ್ಬಾಲ್ (Football) ಪಂದ್ಯವೊಂದರಲ್ಲಿ ಉಂಟಾದ ಗಲಭೆಯಿಂದಾಗಿ 127 ಇದ್ದ ಮೃತರ ಸಂಖ್ಯೆ 174ಕ್ಕೆ ಏರಿಕೆಯಾಗಿದೆ.
#WATCH | At least 127 people died after violence at a football match in Indonesia, last night. The deaths occurred when angry fans invaded a football pitch after a match in East Java
(Video source: Reuters) pic.twitter.com/j7Bet6f9mE
— ANI (@ANI) October 2, 2022
Advertisement
ಇಂಡೋನೇಷ್ಯಾದ (Indonesia) ಪೂರ್ವ ಜಾವಾದ ಪ್ರಾಂತ್ಯದ ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ಆಯೋಜಿಸಲಾಗಿತ್ತು. ಈ ವೇಳೆ ತವರು ಮೈದಾನದಲ್ಲಿ ಅರೆಮಾ ಫುಟ್ಬಾಲ್ ಅಕಾಡೆಮಿ (Arema Football Academy) ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತು. ಈ ಸೋಲು ಅಭಿಮಾನಿಗಳು ರೊಚ್ಚಿಗೇಳಲು ಕಾರಣವಾಯಿತು. ಅರೆಮಾ ಫುಟ್ಬಾಲ್ ಅಕಾಡೆಮಿ ತಂಡದ ಅಭಿಮಾನಿಗಳು ಗ್ರೌಂಡ್‌ಗೆ ಇಳಿದು ಗಲಭೆ ನಡೆಸಿದ್ದಾರೆ. ಇದನ್ನೂ ಓದಿ: ನೆಚ್ಚಿನ ಫುಟ್‌ಬಾಲ್ ತಂಡ ಸೋತಿದ್ದಕ್ಕೆ ಸ್ಟೇಡಿಯಂನಲ್ಲಿ ಅಭಿಮಾನಿಗಳ ಗಲಭೆ – ಮಕ್ಕಳು, ಪೊಲೀಸರು ಸೇರಿ 127 ಮಂದಿ ಸಾವು
Advertisement
Advertisement
ಘಟನೆಯಲ್ಲಿ ಇಂದು ಬೆಳಿಗ್ಗೆ 9:30ರ ವರೆಗೆ 158 ಮಂದಿ ಮೃತಪಟ್ಟಿದ್ದರು. ಆದರೆ 10:30ರ ವೇಳೆಗೆ 174 ಮಂದಿ ಮೃತಪಟ್ಟಿದ್ದಾರೆ. 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಪೊಲೀಸರು (Police), ಸಾರ್ವಜನಿಕರು ಹಾಗೂ ಮಕ್ಕಳೂ ಇದ್ದಾರೆ.
Advertisement
ಜನರನ್ನು ಚದುರಿಸಲು ಘಟನಾ ಸ್ಥಳದಲ್ಲಿ ಅಶ್ರುವಾಯು ಸಿಡಿಸಲಾಯಿತು. ಸಾಕರ್ ಮೈದಾನದಲ್ಲಿ ಗಲಭೆ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಬೀದಿಗಳಲ್ಲಿ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಕಾಲ್ತುಳಿತಕ್ಕೆ ಸಾಕಷ್ಟು ಮಂದಿ ಸಾವನ್ನಪ್ಪಿದರು. ಇಬ್ಬರು ಪೊಲೀಸರು ದುರ್ಮರಣಕ್ಕೀಡಾದರು. ಇದನ್ನೂ ಓದಿ: ಸಾನ್ಯ – ರೂಪೇಶ್ ಶೆಟ್ಟಿ ಮಧ್ಯೆ ಬರಲು ಕಾವ್ಯಶ್ರೀಗೆ ಸಲಹೆ ಕೊಟ್ಟಿದ್ಯಾರು ಗೊತ್ತಾ? ದೊಡ್ಮನೆಯಲ್ಲಿ ಬಿಗ್ ಟ್ವಿಸ್ಟ್
ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ (Joko Widodo) ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಭದ್ರತಾ ಕ್ರಮಗಳು ಪೂರ್ಣಗೊಳ್ಳುವವರೆಗೂ ಇಲ್ಲಿ ನಡೆಯುವ ಎಲ್ಲಾ ಪಂದ್ಯಗಳನ್ನು ಅಮಾನತ್ತುಗೊಳಿಸುವಂತೆ ಫುಟ್ಬಾಲ್ ಫೆಡೆರೇಷನ್‌ಗೆ ನಿರ್ದೇಶನ ನೀಡಿದ್ದಾರೆ.
ಅಲ್ಲದೇ ಈ ದುರಂತಕ್ಕೆ ನಾನು ತೀವ್ರವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಇದೇ ನಮ್ಮ ದೇಶದಲ್ಲಿ ಕೊನೆಯ ದುರಂತವಾಗಬೇಕು ಎಂದು ಮನವಿ ಮಾಡಿದ್ದಾರೆ.