ಟಿವಿ ಬಿಗ್ ಬಾಸ್ (Bigg Boss Kannada) ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆಯುತ್ತಾ ಮುಂದೆ ಸಾಗುತ್ತಿದೆ. ಮನೆಯ ಸಾಕಷ್ಟು ವಿಚಾರಗಳು ಹೈಲೆಟ್ ಆಗುತ್ತಿದೆ. ದೊಡ್ಮನೆಯಲ್ಲಿ ಸಾನ್ಯ ಮತ್ತು ರೂಪೇಶ್ ಜೋಡಿ ಗಮನ ಸೆಳೆಯುತ್ತಿದೆ. ಈ ಜೋಡಿಯ ಮಧ್ಯೆ ಕಾವ್ಯಶ್ರೀ ಬರಲು ಸಲಹೆ ಕೊಟ್ಟಿದ್ದೆ ಗುರೂಜಿ ಎಂಬುದು ವೀಕೆಂಡ್‌ನಲ್ಲಿ ರಿವೀಲ್ ಆಗಿದೆ. ಕಾವ್ಯಶ್ರೀ ಮತ್ತು ತನ್ನ ಜೋಡಿ ದರ್ಶ್ ಚಂದ್ರಪ್ಪ ಗುರೂಜಿ ಕೊಟ್ಟಿರುವ ಸಲಹೆ ನೋಡುಗರನ್ನ ಮೋಡಿ ಮಾಡಿದೆ.
Advertisement
ಬಿಗ್ ಬಾಸ್ ಮನೆಯ ಆಟ ಒಂದು ವಾರ ಕಳೆದು ಎರಡನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳು ಜೋಡಿಯಾಗಿ ಮೊದಲ ವಾರದ ಟಾಸ್ಕ್ ಅನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಸ್ಪರ್ಧಿಗಳಿಗೆ ಗುರೂಜಿ ಕೊಟ್ಟಿರುವ ಟಿಪ್ಸ್ ವೀಕೆಂಡ್ ಪಂಚಾಯಿತಿಯಲ್ಲಿ ಸಖತ್ ಚರ್ಚೆ ಆಗಿದೆ. ಈ ಕುರಿತು ಸ್ವತಃ ಸುದೀಪ್ (Actor Sudeep) ಅವರೇ ಮಾತನಾಡಿದ್ದಾರೆ. ಇದನ್ನೂ ಓದಿ:ರಾಕೇಶ್ ಅಡಿಗ ಮಾಡಿದ ಎಡವಟ್ಟಿಗೆ ಸಿಡಿದೆದ್ದ ಸಂಬರ್ಗಿ
Advertisement
Advertisement
ಓಟಿಟಿಯಿಂದ ಟಿವಿ ಬಿಗ್ ಬಾಸ್‌ನಲ್ಲೂ ಆರ್ಯವರ್ಧನ್ ಗುರೂಜಿ(Aryavardhan Guruji) ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ದರ್ಶ್ ಚಂದ್ರಪ್ಪ ಮತ್ತು ಕಾವ್ಯಶ್ರೀಗೆ ಗುರೂಜಿ ನೀಡಿರುವ ಸಲಹೆ ಮನೆಯವರ ನಗುವಿಗೆ ಕಾರಣವಾಗಿದೆ. ದರ್ಶ್ ನೀವು ನೋಡಲು ಚೆನ್ನಾಗಿದ್ದೀರಾ. ನೀವು ಹುಡುಗಿರ ಹಿಂದೆ ಹೋಗಬೇಡಿ. ಹುಡುಗಿಯರೇ ನಿಮ್ಮ ಹಿಂದೆ ಬರುತ್ತಾರೆ. ಮನೆಯಲ್ಲಿ ಹೈಲೆಟ್ ಆಗಲು ಯಾವುದಾದರೂ ಹುಡುಗಿಯನ್ನ ಕ್ಯಾಚ್ ಹಾಕಿಕೊಳ್ಳಿ. ಹೀಗೆ ಮಾಡಿದ್ದರೆ ನೀವು ಸಾಕಷ್ಟು ದಿನ, ಈ ಮನೆಯಲ್ಲಿ ಉಳಿದುಕೊಳ್ಳಬಹುದು ಎಂದಿದ್ದಾರೆ. ಜೊತೆಗೆ ಹುಡುಗಿರೇ ಮೊದಲು ಕೈ ಕೊಟ್ಟು ಹೋಗುತ್ತಾರೆ ಎಂಬ ಸಲಹೆಯನ್ನ ಕೂಡ ನೀಡಿದ್ದಾರೆ.
Advertisement
ಇನ್ನೂ ಕಾವ್ಯಶ್ರೀಗೆ, ನೀನು ರೂಪೇಶ್ (Roopesh) ಮತ್ತು ಸಾನ್ಯ (Sanya) ಜೊತೆ ಇರಲು ಬಿಡಬೇಡ. ಅವನ ಜೊತೆ ಇದ್ದು ಸಾನ್ಯಗೆ ಕೋಪ ಬರಿಸು ಎಂದು ಟಿಪ್ಸ್ ಕೊಟ್ಟಿದ್ದಾರೆ. ಅವರಿಬ್ಬರು ಹತ್ತಿರವಾಗದಂತೆ ನೋಡಿಕೋ ಎಂದಿದ್ದಾರೆ ಈ ಬಗ್ಗೆ ಸ್ವತಃ ಕಾವ್ಯ ವೀಕೆಂಡ್‌ನಲ್ಲಿ ಕಿಚ್ಚನ ಮುಂದೆ ರಿವೀಲ್ ಮಾಡಿದ್ದಾರೆ. ಗುರೂಜಿ ಹೇಳಿಕೊಟ್ಟ ಟಿಪ್ಸ್ ಕೇಳಿ, ಸಾನ್ಯ ಅಯ್ಯರ್ ಜೋರಾಗಿ ಚಪ್ಪಾಳೆ ಹೊಡೆದಿದ್ದಾರೆ. ಇನ್ನೂ ಗುರೂಜಿ ಸರಿಯಾದ ಟಿಪ್ಸ್ ಕೊಟ್ಟಿದ್ದಾರೆ ಎಂದು ರೂಪೇಶ್‌ಗೆ ಹೇಳಿ ಕಿಚಾಯಿಸಿದ್ದಾರೆ. ಈ ವೇಳೆ ರೂಪೇಶ್ ಜೊತೆ ಮನೆಮಂದಿ ಎಲ್ಲರೂ ನಕ್ಕಿದ್ದಾರೆ.