ಲಂಡನ್: ಈಗಿನ ಭಾರತದ ವಿದೇಶಾಂಗ ನೀತಿಯೂ ಸಂಪೂರ್ಣವಾಗಿ ಬದಲಾಗಿದೆ. ಅಲ್ಲಿನ ಅಧಿಕಾರಿಗಳು ಯಾರ ಮಾತನ್ನು ಕೇಳುವುದಿಲ್ಲ, ಸೊಕ್ಕಿನಿಂದ ನಡೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದರು.
ಲಂಡನ್‍ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಡೆದ ಇಡಿಯಾಸ್ ಫಾರ್ ಇಂಡಿಯಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತೀಯ ವಿದೇಶಾಂಗ ಸೇವೆಯನ್ನು ಟೀಕಿಸಿದ್ದಾರೆ. ನಾನು ಯುರೋಪಿನ ಕೆಲವು ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ. ಅವರು ವಿದೇಶಾಂಗ ಸಚಿವಾಲಯ ಸಂಪೂರ್ಣವಾಗಿ ಬದಲಾಗಿದೆ ಮತ್ತು ಏನನ್ನೂ ಕೇಳುವುದಿಲ್ಲ. ಯಾವುದೇ ಸಂಭಾಷಣೆಯೂ ಇಲ್ಲ ಎಂದು ಹೇಳಿದ್ದರು ಎಂದರು.
Advertisement
Democracy in India is a global public good. We’re the only people who have managed democracy at our unparalleled scale.
Had an enriching exchange on a wide range of topics at the #IdeasForIndia conference in London. pic.twitter.com/QyiIcdFfjN
— Rahul Gandhi (@RahulGandhi) May 20, 2022
ಉಕ್ರೇನ್‍ನಲ್ಲಿ ರಷ್ಯಾದ ಕ್ರಮಗಳನ್ನು ಲಡಾಖ್ ಮತ್ತು ಡೋಕ್ಲಾಮ್‍ನಲ್ಲಿ ಚೀನಾದ ಕ್ರಮಗಳಿಗೆ ಹೋಲಿಸಿದರು. ಲಡಾಖ್ ಮತ್ತು ಡೋಕ್ಲಾಮ್‍ನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಚೀನಾದ ಸೈನಿಕರು ಭಾರತದೊಳಗೆ ಕುಳಿತಿದ್ದಾರೆ. ಅವರು ತಮ್ಮ ಮೂಲಸೌಕರ್ಯಗಳನ್ನು ಸ್ಥಾಪಿಸುತ್ತಿದ್ದಾರೆ ಮತ್ತು ನಿಸ್ಸಂಶಯವಾಗಿ ಏನನ್ನಾದರೂ ಸಿದ್ಧಪಡಿಸುತ್ತಿದ್ದಾರೆ. ಇಷ್ಟೇಲ್ಲಾ ನಡೆಯುತ್ತಿದ್ದರೂ ಸರ್ಕಾರವು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ನಾನು ಕೇಳಲು ಬಯಸುತ್ತೇನೆ ಎಂಬ ಮನೋಭಾವವನ್ನು ಪ್ರಧಾನಿ ಹೊಂದಿರಬೇಕು, ಆದರೆ ಅದು ನಮ್ಮ ದೇಶದ ಪ್ರಧಾನಿಗೆ ಇಲ್ಲ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕಲಾಗುತ್ತಿದೆ. ಸಂವಾದಗಳನ್ನು ನಡೆಸಲು ಅನುಮತಿ ನೀಡುವ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಭಾರತದ ಪ್ರಜಾಪ್ರಭುತ್ವವು ಜಾಗತಿಕವಾಗಿ ಒಳ್ಳೆಯದು. ಇಲ್ಲಿನ ಪ್ರಜಾಪ್ರಭುತ್ವವು ಬೇರೆ ಯಾರಿಗೂ ಸಾಟಿಯಿಲ್ಲದ ಪ್ರಮಾಣದಲ್ಲಿ ನಿರ್ವಹಿಸಿದ ಏಕೈಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಬಿರುಕು ಬಿಟ್ಟರೆ, ಸಮಸ್ಯೆ ನಮಗೆ ಉಂಟಾಗುತ್ತದೆ. ಆದರೆ ಇದೀಗ ಭಾರತ ಉತ್ತಮ ಸ್ಥಾನದಲ್ಲಿಲ್ಲ. ಬಿಜೆಪಿಯವರು ಎಲ್ಲಾ ಕಡೆ ಸೀಮೆಎಣ್ಣೆ ಎರಚಿದ್ದಾರೆ ಎಂದು ಕಿಡಿಕಾರಿದರು.
ಭಾರತವೆಂದರೆ ಅದರ ಜನರು ಎಂದು ನಂಬುತ್ತೇವೆ. ಆದರೆ ಆರ್‍ಎಸ್‍ಎಸ್, ಬಿಜೆಪಿ ಅವರು ಭಾರತವೆಂದರೆ ಅದರ ಭೌಗೋಳಿಕ ಎಂದು ನಂಬುತ್ತದೆ ಎಂದು ಕಿಡಿಕಾರಿದ ಅವರು ನಮ್ಮ ಹೋರಾಟ ಬಿಜೆಪಿಯಾಗಲಿ, ಶುದ್ಧ ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿದೆ. ಬಿಜೆಪಿಯು ಮಾಧ್ಯಮಗಳ ಮೇಲೆ ಶೇ.100ರಷ್ಟು ಹಿಡಿತವನ್ನು ಹೊಂದಿದೆ ಎಂದರು.
ಕಾಂಗ್ರೆಸ್ ಭಾರತವನ್ನು ಮರಳಿ ಪಡೆಯಲು ಹೋರಾಡುತ್ತಿದೆ. ಇದು ಸೈದ್ಧಾಂತಿಕ ಯುದ್ಧವಾಗಿದೆ. ನಾವು ಆಳವಾಗಿ ಚಿಂತಿಸಿದಾಗ ಪಾಕಿಸ್ತಾನದಲ್ಲಿ ಏನಾಯಿತೋ ಅದೇ ರೀತಿ ಭಾರತದ ರಾಜ್ಯಗಳಲ್ಲೂ ಆಗುತ್ತಿದೆ ಎಂದರು. ಇದನ್ನೂ ಓದಿ: ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು: ರಾಘವೇಂದ್ರ ಹಿಟ್ನಾಳ್
ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಘಟನೆಗಳನ್ನು ಅಮೆರಿಕ ಎತ್ತುತ್ತಿರುವ ಬಗ್ಗೆ ಮಾತನಾಡಿದ ಅವರು, ಭಾರತದ ಬಗ್ಗೆ ಅಮೆರಿಕ ನಮಗೆ ಹೇಳುವ ಅಗತ್ಯವಿಲ್ಲ. ನಾವು ಈ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದೇವೆ. ಅದನ್ನು ಕಾಂಗ್ರೆಸ್ ಮಾಡುತ್ತಿದೆ. ಪ್ರತಿಪಕ್ಷಗಳು ಅದನ್ನು ಮಾಡುತ್ತಿವೆ ಎಂದರು. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ