ಹೈದರಾಬಾದ್: ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಡೋಲು ಬಡಿದು ಕಾಂಗ್ರೆಸ್ ಬೆಂಬಲಿಗರೊಂದಿಗೆ ನೃತ್ಯ ಮಾಡಿ ಬೋನಾಲು ಹಬ್ಬವನ್ನು ಆಚರಿಸಿದರು.
ಕಾಂಗ್ರೆಸ್‍ನ (Congress) ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ನೃತ್ಯ ಮಾಡುತ್ತಿದ್ದವರ ಜೊತೆ ರಾಹುಲ್ ಗಾಂಧಿ ಅವರು ಮಹಾಕಾಳಿಯನ್ನು ಪೂಜಿಸುವ ಬೋನಾಲು ಹಬ್ಬವನ್ನು ಆಚರಿಸಿದ್ದಾರೆ. ಜೊತೆಗೆ ಡೋಲು ಬಡಿದಿದ್ದಾರೆ ಎಂದು ತಿಳಿಸಿದ್ದಾರೆ.
#BharatJodoYatra लोक कलाओं का संगम स्थल बनती जा रही है।
भारतवासी अभी हर सुबह @RahulGandhi जी के जरिए तेलंगाना के रंगों से रूबरू हो रहे हैं। pic.twitter.com/PE3z65s5iY
— Congress (@INCIndia) November 2, 2022
ಮಂಗಳವಾರ ರಾಹುಲ್ ಗಾಂಧಿ ಅವರು ಚಾರ್‌ಮಿನಾರ್‌ನಲ್ಲಿ ಧ್ವಜಾರೋಹಣ ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಹಿರಿಯ ನಾಯಕ ದಿಗ್ವಿಜಯ ಸಿಂಗ್ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ರೇವಂತ್ ರೆಡ್ಡಿ ಉಪಸ್ಥಿತರಿದ್ದರು. ಇದನ್ನೂ ಓದಿ: ಬಿಜೆಪಿ ಮಾಜಿ ಸಂಸದ ಚೌಹಾಣ್ ಕಾಂಗ್ರೆಸ್ ಸೇರ್ಪಡೆ
Supporters in Telangana showcasing colours of Bonalu festival, celebrated to worship Goddess Mahakali.#BharatJodoYatra pic.twitter.com/8ryx30x9Hu
— Congress (@INCIndia) November 2, 2022
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಹಲವು ರಾಜ್ಯಗಳಲ್ಲಿ ಸಂಚರಿಸಿ ತೆಲಂಗಾಣ ತಲುಪಿದೆ. ಸೆ.7ರಂದು ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ 56ನೇ ದಿನಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಪೊಲೀಸರಿಂದ ದೂಡಲ್ಪಟ್ಟ ಕಾಂಗ್ರೆಸ್ ನಾಯಕ – ಕಣ್ಣಿಗೆ ಗಂಭೀರ ಪೆಟ್ಟು