LatestLeading NewsMain PostNational

ಬಿಜೆಪಿ ಮಾಜಿ ಸಂಸದ ಚೌಹಾಣ್‌ ಕಾಂಗ್ರೆಸ್‌ ಸೇರ್ಪಡೆ

ಗಾಂಧೀನಗರ: ಹಾಲೋಲ್ ಲೋಕಸಭಾ ಕ್ಷೇತ್ರದ ಬಿಜೆಪಿ (BJP) ಮಾಜಿ ಸಂಸದ ಪ್ರಭಾತ್‌ಸಿನ್ಹ ಚೌಹಾಣ್ (Prabhatsinh Chauhan) ಅವರು ಫಗ್‌ವೆಲ್‌ನಲ್ಲಿ ನಡೆದ ಪರಿವರ್ತನ್ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಗೊಂಡರು.

2017 ರಿಂದ ಚೌಹಾಣ್ ಬಿಜೆಪಿಯೊಂದಿಗೆ ಅಸಮಾಧಾನ ಹೊಂದಿದ್ದರು. ಪಕ್ಷವು ಅವರ ಸೊಸೆ ಸುಮನ್ ಚೌಹಾಣ್ ಅವರನ್ನು ಕಲೋಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿತು. ಚೌಹಾಣ್ ಅವರ ಪತ್ನಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಚೌಹಾಣ್ ಅವರನ್ನು ಪಕ್ಷ ಬದಿಗೊತ್ತಿತ್ತು. ಇದನ್ನೂ ಓದಿ: 4 ದಿನದ ಛತ್ ಪೂಜೆಯಲ್ಲಿ 53 ಜನ ಸಾವು- ಆರ್ಥಿಕ ನೆರವು ಘೋಷಿಸಿದ ನಿತೀಶ್ ಕುಮಾರ್

ಹಿರಿಯ ನಾಯಕ ಸಚಿನ್ ಪೈಲಟ್, ಅಮಿತ್ ಚಾವ್ಡಾ, ನರನ್ ರಥ್ವಾ, ಜಗದೀಶ್ ಠಾಕೂರ್, ಸುಖರಾಮ್ ರಥ್ವಾ ಮತ್ತು ಸಿದ್ಧಾರ್ಥ್ ಪಟೇಲ್ ಅವರ ಸಮ್ಮುಖದಲ್ಲಿ ಚೌಹಾಣ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಚೌಹಾಣ್ ಅವರು ಮುಂಬರುವ ಚುನಾವಣೆಯಲ್ಲಿ ಕಲೋಲ್ ಅಥವಾ ಗೋದ್ರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಂಚಮಹಲ್, ಮಹಿಸಾಗರ್ ಮತ್ತು ಖೇಡಾ ಜಿಲ್ಲೆಗಳಲ್ಲಿ ಪ್ರಭಾವಿ ನಾಯಕರಾಗಿರುವ ಚೌಹಾಣ್ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಸೊಸೆ ಸುಮನ್ ಅವರ ಉಮೇದುವಾರಿಕೆ ಬಗ್ಗೆ ಅಸಮಾಧಾನ ಹೊಂದಿದ್ದರು.

ಮಾಜಿ ಮುಖ್ಯಮಂತ್ರಿ ಶಂಕರಸಿನ್ಹ ವಘೇಲಾ ಅವರ ನಿಕಟವರ್ತಿಯಾಗಿರುವ ಚೌಹಾಣ್ ಅವರು 1980 ರಲ್ಲಿ ಕಲೋಲ್‌ನಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದರು. ನಂತರ 1991 ರಲ್ಲಿ ಬಿಜೆಪಿ ಸೇರಿದರು. ಅವರು 1998 ಮತ್ತು 2002 ರಲ್ಲಿ ಕಲೋಲ್‌ನಿಂದ ಬಿಜೆಪಿ ಶಾಸಕರಾಗಿದ್ದರು. ರಾಜ್ಯ ಸಚಿವರೂ ಆಗಿದ್ದರು. 2009 ಮತ್ತು 2014ರಲ್ಲಿ ಪಂಚಮಹಲ್‌ನಿಂದ ಸತತ ಎರಡು ಬಾರಿ ಸಂಸದರಾಗಿ ಸ್ಪರ್ಧಿಸಿ ಗೆದ್ದಿದ್ದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್- ಪ್ರಕರಣ ರದ್ದು ಕೋರಿ ಡಿಕೆಶಿ ಅರ್ಜಿ

Live Tv

Leave a Reply

Your email address will not be published. Required fields are marked *

Back to top button