ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಇಂದು 54ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲಾಯಿತು. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೊಂದಿಗೆ ರಾಹುಲ್ ಗಾಂಧಿ ಕೇಕ್ ಕತ್ತರಿಸಿದರು.
ಇದೇ ವೇಳೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ರಾಹುಲ್ ಗಾಂಧಿಯವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು. ಇದನ್ನೂ ಓದಿ: ವೋಟ್ ಮಾಡಿದ ಮೋದಿ ಕೈ ಬೆರಳು ನೋಡಿದ ನಿತೀಶ್ ವೀಡಿಯೋ ವೈರಲ್
Warm birthday greetings to Shri @RahulGandhi.
Your unwavering commitment to the values espoused in the Constitution of India and your emphatic compassion for the millions of unheard voices, are the qualities which sets you apart.
Congress party’s ethos of unity in diversity,…
— Mallikarjun Kharge (@kharge) June 19, 2024
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದು, ಅಧಿಕಾರಕ್ಕೆ ಸತ್ಯದ ಕನ್ನಡಿಯನ್ನು ತೋರಿಸುವ ಮೂಲಕ ಕೊನೆಯ ವ್ಯಕ್ತಿಯ ಕಣ್ಣೀರನ್ನು ಒರೆಸುವ ನಿಮ್ಮ ಧ್ಯೇಯದಲ್ಲಿ ನೀವು ಮುಂದುವರಿದಿರುವಾಗ, ವಿವಿಧತೆ, ಸಾಮರಸ್ಯ ಮತ್ತು ಸಹಾನುಭೂತಿಯಲ್ಲಿ ಏಕತೆ ಎಂಬ ಕಾಂಗ್ರೆಸ್ ಪಕ್ಷದ ತತ್ವವು ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಗೋಚರಿಸುತ್ತದೆ. ನಾನು ನಿಮಗೆ ದೀರ್ಘ, ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ಬಯಸುತ್ತೇನೆ ಎಂದಿದ್ದಾರೆ.