ನವದೆಹಲಿ: ಎಲ್‍ಪಿಜಿ ದರ ಏರಿಕೆಯಾಗಿದ್ದನ್ನು ಖಂಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್‍ಪಿಜಿ ದರ ಏರಿಕೆ ಖಂಡಿಸಿ ಸ್ಮೃತಿ ಇರಾನಿ ರಸ್ತೆಯಲ್ಲಿ ಸಿಲಿಂಡರ್ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ಈಗ ರಾಹುಲ್ ಗಾಂಧಿ, ಅದೇ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ದರ ಏರಿಕೆಯನ್ನು ಖಂಡಿಸಿದ್ದಾರೆ. ಎಲ್‍ಪಿಜಿ ಸಿಲಿಂಡರ್ ಬೆಲೆ 150 ರೂ. ಏರಿಕೆಯಾಗಿದ್ದನ್ನು ಖಂಡಿಸಿ ಬಿಜೆಪಿ ಸದಸ್ಯರ ನಡೆಸುತ್ತಿರುವ ಈ ಪ್ರತಿಭಟನೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. #RollBackHike ಟ್ಯಾಗ್ ಮೂಲಕ ಬೆಲೆ ಇಳಿಸುವಂತೆ ಆಗ್ರಹಿಸಿದ್ದಾರೆ.
Advertisement
Advertisement
2010ರ ಫೋಟೋ: ಜುಲೈ 1, 2010ರ ಸ್ಮೃತಿ ಇರಾನಿ ಪ್ರತಿಭಟನೆ ನಡೆಸಿದ್ದರು. ಅಂದು ಅವರು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿದ್ದರು. 2010ರ ಜುಲೈ 1ರಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ರಾಹುಲ್ ಸಿನ್ಹಾ ನೇತೃತ್ವದ ಪ್ರತಿಭಟನೆಯಲ್ಲಿ ಸ್ಮೃತಿ ಇರಾನಿ ಭಾಗಿಯಾಗಿದ್ದರು.
Advertisement
I agree with these members of the BJP as they protest the astronomical 150 Rs price hike in LPG cylinders. #RollBackHike pic.twitter.com/YiwpjPdTNX
— Rahul Gandhi (@RahulGandhi) February 13, 2020
Advertisement
ದೆಹಲಿ ಚುನಾವಣೆ ಮುಗಿಯುತ್ತಿದ್ದಂತೆ ಬುಧವಾರ ದೇಶದ ಜನತೆಗೆ ಬೆಲೆ ಏರಿಕೆಯ ಬಿಸಿ ಕೊಂಚ ಜೋರಾಗಿಯೇ ತಟ್ಟಿದೆ. 14.2 ಕೆಜಿಯ ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು 150 ರೂ.ರಷ್ಟು ಏರಿಕೆ ಕಂಡಿದೆ. ಸಬ್ಸಡಿ ರಹಿತ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಾಗಿದೆ.
ದೆಹಲಿಯಲ್ಲಿ 14 ಕೆಜಿ ಸಿಲಿಂಡರ್ ಬೆಲೆ 858.50 ರೂ. (144.50 ರೂ.ಏರಿಕೆ), ಬೆಂಗಳೂರು-862.50 ರೂ, ಕೋಲ್ಕತ್ತಾ-896.50 (149 ರೂ.ಏರಿಕೆ), ಮುಂಬೈ-829.50 ರೂ(145 ರೂ.ಏರಿಕೆ), ಚೆನ್ನೈ 881.00 ರೂ (147 ರೂ.ಏರಿಕೆ) ಬೆಲೆ ಹೆಚ್ಚಾಗಿದ್ದು, ಇಂದಿನಿಂದ ಪರಿಷ್ಕೃತ ದರ ಅನ್ವಯವಾಗಲಿದೆ.