ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಇಂದು ಬೆಳಿಗ್ಗೆ ಮಂತ್ರಾಲಯದ ಅಭಯ ಆಂಜನೇಯ ದೇವಾಲಯದಿಂದ ಭಾರತ್ ಜೋಡೋ ಯಾತ್ರೆ(Bharat Jodo Yatra) ಆರಂಭಿಸಿ ರಾಜ್ಯವನ್ನು ಮರುಪ್ರವೇಶ ಮಾಡಿದರು.
ಮಂತ್ರಾಲಯದಿಂದ ಆಂಧ್ರಪ್ರದೇಶದ ಚಟ್ನಿಪಲ್ಲಿ, ಮಾಧವರಂ ಮೂಲಕ ರಾಯಚೂರಿನ ತುಂಗಭದ್ರಾ ಸೇತುವೆ ಮೂಲಕ ರಾಜ್ಯ ಪ್ರವೇಶಿಸಿದರು. ಮಾಧವರಂನಲ್ಲಿ ದಲಿತ ಮಹಿಳೆ ಲಕ್ಷ್ಮಮ್ಮ ಮನೆಯಲ್ಲಿ ಉಪಹಾರ ಸೇವಿಸಿದರು. ಬಳಿಕ ತುಂಗಭದ್ರಾ ಸೇತುವೆ ಬಳಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಹಾಗೂ ಕೆಪಿಸಿಸಿ ನಾಯಕರು ರಾಹುಲ್ ಗಾಂಧಿಯಯನ್ನು ವಿವಿಧ ಕಲಾ ತಂಡಗಳೊಂದಿಗೆ ಭರ್ಜರಿಯಾಗಿ ಸ್ವಾಗತಿಸಿದರು.
Advertisement
राघवेंद्र स्वामी मठ, मंत्रालयम
मन को शक्ति, सुख और शांति का केंद्र।#BharatJodoYatra pic.twitter.com/UXAYXblMgF
— Bharat Jodo (@bharatjodo) October 20, 2022
Advertisement
ಗಿಲ್ಲೆಸುಗೂರುವರೆಗೆ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ ವಿಶ್ರಾಂತಿಗೆ ತೆರಳಿದರು. ಗಿಲ್ಲೆಸುಗೂರು ಗ್ರಾಮದಲ್ಲಿ ರೈತರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ಸಂಜೆ 4 ರಿಂದ ಕೆರೆಬೂದುರಿನಿಂದ ಯರಗೇರಾದವರೆಗೆ ಪಾದಯಾತ್ರೆ ಆರಂಭಿಸಲಿದ್ದಾರೆ. ಸಂಜೆ ಕಾರ್ನರ್ ಮೀಟಿಂಗ್ ಬಳಿಕ ಯರಗೇರಾದಲ್ಲಿ ತಂಗಲಿದ್ದಾರೆ.
Advertisement
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಾಲಕಿಯನ್ನ ಹೆಗಲ ಮೇಲೆ ಹೊತ್ತು ಕೆಲಕಾಲ ರಾಹುಲ್ ಗಾಂಧಿ ನಡೆದರು.ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಮಾರ್ಗದುದ್ದಕ್ಕೂ ಸಾವಿರಾರು ಜನ ಭಾಗವಹಿಸಿದ್ದರು . ಕಾಂಗ್ರೆಸ್ ನಾಯಕರಾದ ಸುಜ್ರೆವಾಲ್, ಡಿಕೆ ಶಿವಕುಮಾರ್, ಕೃಷ್ಣಬೈರೇಗೌಡ, ಹೆಚ್.ಕೆ.ಪಾಟೀಲ್, ಯುಟಿ ಖಾದರ್, ಆರ್.ವಿ.ದೇಶಪಾಂಡೆ, ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.