ರಾಯಚೂರು: ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಇಂದು ರಾಯಚೂರು (Raichur) ಮೂಲಕ ತೆಲಂಗಾಣಕ್ಕೆ (Telangana) ಕಾಲಿಟ್ಟಿದೆ. ಈ ಮೂಲಕ ರಾಜ್ಯದಲ್ಲಿನ ಯಾತ್ರೆ ಮುಕ್ತಾಯವಾಗಿದೆ.
ರಾಯಚೂರಿನಲ್ಲಿ 3ನೇ ದಿನದ ಯಾತ್ರೆ ಯರಮರಸ್ ನಿಂದ ಬೆಳಗ್ಗೆ 6 ಗಂಟೆಗೆ ಆರಂಭವಾಗಿ ಶಕ್ತಿನಗರ ಮಾರ್ಗವಾಗಿ ಕೃಷ್ಣಾ ನದಿ ಸೇತುವೆ ಮೂಲಕ ತೆಲಂಗಾಣಕ್ಕೆ ಪ್ರವೇಶಿಸಿತು. ಪಾದಯಾತ್ರೆ ವೇಳೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ರಾಜ್ಯದ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ರಾಜ್ಯದಲ್ಲಿ ಸುಮಾರು 500 ಕಿ.ಮೀ ಪಾದಯಾತ್ರೆ ನಡೆದಿದೆ.
ರಾಯಚೂರು ಗಡಿ ಮೂಲಕ ಈಗ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಮಕ್ತಲ್‌ಗೆ ಪಾದಯಾತ್ರೆ ತೆರಳಿದೆ. ತೆಲಂಗಾಣದ ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಜೋಡೋ ಯಾತ್ರೆಯನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಆನಂದ ಮಾಮನಿ ನಿಧನ- ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ
ಮಕ್ತಲ್ ತಲುಪಿದ ಬಳಿಕ ರಾಹುಲ್ ಗಾಂಧಿ ದೀಪಾವಳಿ ಬ್ರೇಕ್ ಪಡೆಯಲಿದ್ದಾರೆ. ಅಕ್ಟೋಬರ್ 24 ರಿಂದ 26 ರ ವರೆಗೆ ದೀಪಾವಳಿ ಬ್ರೇಕ್ ಇದೆ. ನಂತರ ಅಕ್ಟೋಬರ್ 27 ರಿಂದ ಮಕ್ತಲ್ ನಿಂದ ಪಾದಯಾತ್ರೆ ಆರಂಭಿಸಲಿದ್ದಾರೆ. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ಸೋಮಣ್ಣ