ಗಾಂಧಿನಗರ್: ರಾಹುಲ್ ಗಾಂಧಿ ಇತ್ತೀಚೆಗೆ ಗುಜರಾತ್‍ನಲ್ಲಿ ಕ್ಯಾಂಪೇನ್ ಮಾಡುತ್ತಾ, ಮೋದಿ ಸರ್ಕಾರವನ್ನು ಟೀಕಿಸುತ್ತಾ ಸುದ್ದಿಯಲ್ಲಿದ್ದಾರೆ. ಆದ್ರೆ ಛೋಟಾ ಉದೇಪುರ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅಕಸ್ಮಾತಾಗಿ ಲೇಡೀಸ್ ಟಾಯ್ಲೆಟ್‍ಗೆ ಎಂಟ್ರಿ ಕೊಟ್ಟು ಎಡವಟ್ಟು ಮಾಡಿದ್ದಾರೆ.
ಯುವಕರ ಜೊತೆ ಚರ್ಚೆ ನಡೆಸಲು ‘ಸಮ್ವಾದ್’ ಕಾರ್ಯಕ್ರಮಕ್ಕಾಗಿ ರಾಹುಲ್ ಗಾಂಧಿ ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ಟೌನ್ ಹಾಲ್‍ನಿಂದ ಹೊರಗೆ ಬಂದ ರಾಹುಲ್, ಲೇಡೀಸ್ ಟಾಯ್ಲೆಟ್ ಗೆ ಹೋಗಿದ್ದಾರೆ. ಅಲ್ಲಿ ಪುರಷ ಮತ್ತು ಮಹಿಳೆಯರ ಟಾಯ್ಲೆಟ್ ಎಂದು ಸೂಚಿಸಲು ಯಾವುದೇ ನಾಮಫಲಕ ಇರಲಿಲ್ಲ ಎಂದು ವರದಿಯಾಗಿದೆ. ಆದ್ರೂ ಗುಜರಾತಿ ಭಾಷೆಯಲ್ಲಿ ‘ಮಹಿಳಾವೋ ಮಾತೆ ಶೌಚಾಲಯ’ ಎಂದು ಪೋಸ್ಟರ್ ಹಾಕಿದ್ದರು.
Advertisement
Advertisement
ಮೂಲಗಳು ಪ್ರಕಾರ ಗುಜರಾತಿ ಭಾಷೆ ಓದಲು ಬರದ ಕಾರಣ ರಾಹುಲ್ ಲೇಡಿಸ್ ಟಾಯ್ಲೆಟ್ ಗೆ ಹೋಗಿದ್ದಾರೆ ಎನ್ನಲಾಗಿದೆ. ರಾಹುಲ್ ಮಾಡಿದ ಎಡವಟ್ಟಿನ ವಿಷಯ ತಿಳಿದು ಮಾಧ್ಯಮದವರು ಟಾಯ್ಲೆಟ್ ಮುಂದೆ ಜಮಾಯಿಸಿದ್ದರು. ಆದ್ರೆ ರಾಹುಲ್ ಗಾಂಧಿ ಜೊತೆಗಿದ್ದ ಎಸ್‍ಪಿಜಿ ಅಲ್ಲಿದ್ದ ಮಾಧ್ಯಮದವರನ್ನು ಮತ್ತು ಜನರನ್ನು ಚದುರಿಸಿದರು.
Advertisement
ಇದನ್ನೂ ಓದಿ: ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟರೆ 6 ತಿಂಗಳಲ್ಲಿ ದೇಶದ ಸಮಸ್ಯೆಗೆ ಪರಿಹಾರ: ರಾಹುಲ್ ಗಾಂಧಿ
Advertisement
ರಾಹುಲ್ ಗಾಂಧಿ ಮಹಿಳೆಯರ ಶೌಚಾಲಯದಿಂದ ಹೊರಬಂದಾಗ ಅಲ್ಲಿದ್ದ ಜನರು ನಗಲಾರಂಭಿಸಿದ್ರು ಎಂದು ಸ್ಥಳಿದಲ್ಲಿದ್ದವರು ಹೇಳಿದ್ದಾರೆ. ಅಲ್ಲಿದ್ದ ಮಾಧ್ಯಮದವರು ಘಟನೆಯ ವಿಡಿಯೋವನ್ನ ರೆಕಾರ್ಡ್ ಮಾಡಿದ್ದಾರೆ.
ಇದನ್ನೂ ಓದಿ:ಎತ್ತಿನ ಗಾಡಿ ಏರಿ ಗುಜರಾತ್ ನಲ್ಲಿ ರಾಹುಲ್ ಗಾಂಧಿ ಪ್ರಚಾರ