ಬೆಂಗಳೂರು: ಕರ್ನಾಟಕದಲ್ಲಿಂದು ಮೊದಲ ಹಂತದ ಮತದಾನ ಯಶಸ್ವಿಯಾಗಿ ಸಾಗುತ್ತಿದೆ. ಬೆಂಗಳೂರಿನ 4 ಕ್ಷೇತ್ರ ಹೊರತುಪಡಿಸಿ ಉಳಿದ 10 ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದಲೇ ಮತ ಹಾಕುತ್ತಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರೂ (Cricketers) ಸಹ ಸರತಿ ಸಾಲಿನಲ್ಲಿ ಸಾಮಾನ್ಯರೊಂದಿಗೆ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಮತಗಟ್ಟೆಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅವರು ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿ ಯುವ ಜನತೆಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನ ಡಾಲರ್ಸ್ ಕಾಲೋನಿ ಮತಟ್ಟೆಯಲ್ಲಿ ಎಲ್ಲರೊಂದಿಗೆ ಸಾಲಿನಲ್ಲಿ ನಿಂತು ಮತ ಹಾಕಿದ ಟೀಂ ಇಂಡಿಯಾ ಮುಖ್ಯಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮುಂದೆ ಬಂದು ಮತ ಚಲಾಯಿಸಬೇಕೆಂದು ಕರೆ ಕೊಟ್ಟಿದ್ದಾರೆ.
Advertisement
Advertisement
ಮೈಸೂರು ಕೊಡಗು ಲೋಕಸಭಾ ಚುನಾವಣೆಯ ಚುನಾವಣೆ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ನಗರದ ಜ್ಞಾನ ಗಂಗಾ ಪಿಯು ಕಾಲೇಜಿನಲ್ಲಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ: Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್!
Advertisement
ಎಲ್ಲಿ- ಎಷ್ಟು ಮತದಾನ?
ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ 50.93% ಮತದಾನ ನಡೆದಿದೆ. ಬೆಂಗಳೂರಿನ 4 ಕ್ಷೇತ್ರ ಹೊರತು ಪಡಿಸಿದ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಮತದಾನ 50% ಗಡಿ ದಾಟಿದೆ. ಇದನ್ನೂ ಓದಿ: ಮತ್ತೆ ಕಳಪೆ ಸ್ಟ್ರೈಕ್‌ರೇಟ್ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ
Advertisement
ಬೆಂಗಳೂರು ಗ್ರಾಮೀಣ 49.62%, ಬೆಂಗಳೂರು ಉತ್ತರ 41.12%, ಬೆಂಗಳೂರು ಕೇಂದ್ರ 40.10%, ಬೆಂಗಳೂರು ದಕ್ಷಿಣ 40.77% ಮತದಾನ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ 58.76%, ಉಡುಪಿ- ಚಿಕ್ಕಮಗಳೂರು 57.49% ಮತದಾನ ನಡೆದಿದೆ. ಆರಂಭದಿಂದಲೂ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭರ್ಜರಿ ಮತದಾನ ನಡೆಯುತ್ತಿದೆ. ಮಧ್ಯಾಹ್ನವಾದ ಕಾರಣ ಮತಗಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದು, ಸಂಜೆ ಮತದಾನ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆಯಿದೆ.