Connect with us

Cricket

ರಾಹುಲ್ ದ್ರಾವಿಡ್ ಸಲಹೆಯೇ ಯಶಸ್ಸಿಗೆ ಕಾರಣ: ಜೈಸ್ವಾಲ್

Published

on

ನವದೆಹಲಿ: 2020 ಐಸಿಸಿ ಅಂಡರ್-19 ವಿಶ್ವಕಪ್ ಭಾಗವಾಗಿ ಟೀಂ ಇಂಡಿಯಾ ಪರ ಆಯ್ಕೆಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸಂತಸ ವ್ಯಕ್ತಪಡಿಸಿದ್ದು, ತನ್ನ ಆಯ್ಕೆ ಹಿಂದೆ ಮಾಜಿ ಕೋಚ್, ಎನ್‍ಸಿಎ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಅವರ ಶ್ರಮ ಸಾಕಷ್ಟಿದೆ ಎಂದಿದ್ದಾರೆ.

ಆಡುವ ಪ್ರತಿಯೊಂದು ಎಸೆತದ ಮೇಲೂ ಫೋಕಸ್ ಮಾಡುವಂತೆ ದ್ರಾವಿಡ್ ಯಾವಾಗಲೂ ಹೇಳುತ್ತಿದ್ದರು. ಯಾವ ಎಸೆತವನ್ನು ನಾವು ಎದುರಿಸುತ್ತೇವೆ, ಆದರ ಬಗ್ಗೆ ಗಮನ ನೀಡಿ ಎಂದು ಸಲಹೆ ನೀಡಿದ್ದರು ಎಂದು ಜೈಸ್ವಾಲ್ ತಿಳಿಸಿದ್ದಾರೆ.

 

ತರಬೇತಿಯ ವೇಳೆ ರಾಹುಲ್ ದ್ರಾವಿಡ್ ಅವರು ಆಟಗಾರರ ವೈಫಲ್ಯದ ಬಗ್ಗೆ ಗಮನ ಹರಿಸಿ ಸಲಹೆ ನೀಡುತ್ತಿದ್ದರು. ಅವರು ಹೇಳಿದ ಪ್ರತಿಯೊಂದು ವಿಚಾರ ನನಗೆ ಹೆಚ್ಚು ಉಪಯುಕ್ತವಾಗುತ್ತಿತ್ತು. ನಾನು ಪ್ರತಿ ಪಂದ್ಯವನ್ನು ಒಂದೇ ರೀತಿ ಸ್ವೀಕರಿಸುತ್ತೇನೆ. ಅಲ್ಲದೇ ಆಟದ ಬಗ್ಗೆ ಮಾತ್ರ ಗಮನ ಹರಿಸಿ, ಫಲಿತಾಂಶದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ದಿ ಬೆಸ್ಟ್ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮೂರು ಶತಕಗಳಿಸಿ ಗಮನ ಸೆಳೆದ ಜೈಸ್ವಾಲ್, ದ್ವಿಶತಕದ ಸಾಧನೆಯನ್ನು ಮಾಡಿದ್ದಾರೆ. ಆ ಮೂಲಕ ಅಂಡರ್-19 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಲು ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಅಕ್ಟೋಬರ್ ನಲ್ಲಿ ಜಾರ್ಖಂಡ್‍ನಲ್ಲಿ ನಡೆದಿದ್ದ ಪಂದ್ಯದಲ್ಲಿ ಜೈಸ್ವಾಲ್ 203 ರನ್ ಗಳಿಸಿದ್ದರು. ಅಲ್ಲದೇ ಲಿಸ್ಟ್-ಎ ಪಂದ್ಯದಲ್ಲಿ ಅತಿ ಕಡಿಮೆ ವಯಸ್ಸಿನಲ್ಲಿ (17 ವರ್ಷ 292 ದಿನ) ದ್ವಿಶತಕದ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಇದನ್ನೂ ಓದಿ: ಪಾನಿಪುರಿ ಮಾರುತ್ತಿದ್ದ 17ರ ಪೋರನಿಂದ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಾಧನೆ

Click to comment

Leave a Reply

Your email address will not be published. Required fields are marked *