-ಸಿಎಂ, ಡಿಸಿಎಂ ಕಚ್ಚಾಟಕ್ಕೆ ಬುದ್ಧಿ ಇಲ್ಲದೇ ಇರೋ ರಾಹುಲ್ ಗಾಂಧಿ ಬುದ್ಧಿ ಹೇಳ್ತಾರಾ?
-ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಇಟ್ಟುಕೊಂಡು ರಾಜ್ಯಾದ್ಯಂತ ಹೋರಾಟ ಮಾಡ್ತೇವೆ
ಬೆಂಗಳೂರು: ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆಗೆ ಎಷ್ಟು ದುಡ್ಡು ಕೊಡ್ತೀರಾ ಅಂತ ಕೇಳಲು ರಾಹುಲ್ ಗಾಂಧಿ (Rahul Gandhi) ಅವರು ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಅವರನ್ನು ಕರೆದಿರಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ (CT Ravi) ಆರೋಪಿಸಿದ್ದಾರೆ.
ಸಿಎಂ-ಡಿಸಿಎಂ ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಕಾಂಗ್ರೆಸ್ ಆಂತರಿಕ ವಿಚಾರ ಹಾಗೂ ಕಚ್ಚಾಟಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮೂಗು ತೋರಿಸಲ್ಲ. ಬುದ್ಧಿ ಇಲ್ಲದೇ ಇರುವ ರಾಹುಲ್ ಗಾಂಧಿ ಇವರ ಕಚ್ಚಾಟಕ್ಕೆ ಬುದ್ಧಿ ಹೇಳುತ್ತಾರೆ ಅಂತ ವಿಶ್ವಾಸ ಇದೆಯಾ? ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕಚ್ಚಾಡುತ್ತಿರುವುದರಿಂದ ರಾಜ್ಯದ ಆಡಳಿತದ ಮೇಲೆ ಕೆಟ್ಟ ಪರಿಣಾಮಗಳು ಬೀಳ್ತಾ ಇದೆ. ಇದಕ್ಕೆಲ್ಲ ರಾಹುಲ್ ಗಾಂಧಿ ಬುದ್ಧಿ ಹೇಳ್ತಾರಾ? ಬುದ್ಧಿ ಇರೋರು ಬುದ್ಧಿ ಹೇಳುತ್ತಾರೆ, ಆದರೆ ಬುದ್ಧಿ ಇಲ್ದೆ ಇರೋರು ಏನ್ ಹೇಳ್ತಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಬೀದಿನಾಯಿಗಳ ಸಮಸ್ಯೆ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲ – ಸುಪ್ರೀಂ ಆಕ್ರೋಶ
ಡಿಸಿಎಂ ಹಾಗೂ ಸಿಎಂ ಇಬ್ಬರನ್ನು ಕರೆದಿದ್ದಾರೆ ಅಂದ್ರೆ ಪಶ್ಚಿಮ ಬಂಗಾಳ, ಅಸ್ಸಾಂ ಚುನಾವಣೆ ಇದೆ. ಎಷ್ಟು ದುಡ್ಡು ಕೊಡ್ತೀರಾ ಅಂತ ಕೇಳೋಕೆ ಇರಬಹುದು. ಕರ್ನಾಟಕದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯದ ಹಿತಾಸಕ್ತಿ ಕಾಪಾಡೋಕೆ ಆಸಕ್ತಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಬಿಜೆಪಿಯವರು ಬಳ್ಳಾರಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಉದ್ದಗಲಕ್ಕೂ ಐದಾರು ಪ್ರಮುಖ ವಿಚಾರ ಇಟ್ಕೊಂಡು ಹೋರಾಟ ಮಾಡಬೇಕು ಎಂದು ಕೋರ್ ಕಮಿಟಿ ನಿರ್ಧಾರ ಮಾಡಿದೆ. ಮೊದಲು ಹೋರಾಟ ಮಾಡ್ತೀವಿ. ಅದರ ನಂತರ ಏನ್ ಮಾಡಬೇಕು ಅಂತ ಪಕ್ಷದ ಕೋರ್ ಕಮಿಟಿ ಸಮಾಲೋಚನೆ ಪಕ್ಷದ ಪ್ರಮುಖರ ಜೊತೆಗೆ ಮಾತುಕತೆ ನಡೆಸಿ, ಮುಂದಿನ ತೀರ್ಮಾನ ಮಾಡ್ತೀವಿ. ಸಾಧಕ ಬಾದಕಗಳನ್ನು ಗಮನಿಸಿ ನಿರ್ಣಯವನ್ನು ಮಾಡ್ತೀವಿ. ಮೊದಲನೇ ಹಂತದಲ್ಲಿ ಬಳ್ಳಾರಿ, ಹುಬ್ಬಳ್ಳಿ, ಮೈಸೂರು, ಕಲಬುರಗಿ ಭಾಗದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕುಮಾರಸ್ವಾಮಿ ಎರಡು ಬಾರಿ ಲೀಸ್ ಬೇಸ್‌ನಲ್ಲಿಯೇ ಸಿಎಂ ಆಗಿದ್ದು: ಸಿದ್ದು ಸಮರ್ಥಿಸಿ ಶಿವಲಿಂಗೇಗೌಡ ಕಿಡಿ

