ದಾವಣಗೆರೆ: ಹೆಣ್ಣು ಯಾವ ಬಟ್ಟೆ ಹಾಕ್ಬೇಕು, ಹೇಗೆ ತಾಯಿ ಆಗ್ಬೇಕು ಅನ್ನೋದು ಅವಳ ಆಯ್ಕೆ ಎಂದು ನಟಿ ರಾಗಿಣಿ ದ್ವಿವೇದಿ (Ragini Dwivedi) ಹೇಳಿದ್ದಾರೆ. ಈ ಮೂಲಕ ನಟಿ ಭಾವನ ರಾಮಣ್ಣ (Bhavana Ramanna) ಅವರು ಐವಿಎಫ್ ತಂತ್ರಜ್ಞಾನದಿಂದ ಗರ್ಭಿಣಿ ಆಗಿರುವುದಕ್ಕೆ ಬೆಂಬಲ ಸೂಚಿಸಿದ್ದಾರೆ.
ಗುರುಪೂರ್ಣಿಮೆ ಹಿನ್ನೆಲೆ ಸೊಕ್ಕೆ ಗ್ರಾಮದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಅವರು ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರತಿಯೊಂದು ಹೆಣ್ಣಿಗೂ ಯಾವ ರೀತಿ ಜೀವನ ಮಾಡಬೇಕು ಎನ್ನುವ ಹಕ್ಕಿದೆ. ಯಾವ ಕೆಲಸ ಮಾಡಬೇಕು, ಯಾವ ಬಟ್ಟೆ ಹಾಕಬೇಕು, ಹೇಗೆ ತಾಯಿ ಆಗಬೇಕು ಎನ್ನುವುದು ಆಕೆಯ ಆಯ್ಕೆ. ತಾಯ್ತನ ಎನ್ನುವುದು ಒಂದು ರೀತಿಯ ಅದ್ಭುತವಾದ ಕೆಲಸ. ಅದು ಹಾಗೇ ಮಾಡಬೇಕು, ಇದನ್ನು ಹೀಗೆ ಮಾಡಬೇಕು ಎನ್ನುವುದು ತಪ್ಪು ಎಂದಿದ್ದಾರೆ. ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಹಗರಣ ಪ್ರಕರಣ; ಪ್ರಣೀತಾ, ಪ್ರಕಾಶ್ ರಾಜ್, ದೇವರಕೊಂಡ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ED ಕೇಸ್
ಭಾವನ ಅಮ್ಮ ಆಗುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ತುಂಬಾ ಖುಷಿ ಇದೆ. ಅದನ್ನು ಜಡ್ಜ್ ಮಾಡಿ, ಟ್ರೋಲ್ ಮಾಡಿ ನೆಗೆಟಿವ್ ಕಾಮೆಂಟ್ ಮಾಡೋದು ತುಂಬಾ ತಪ್ಪು. ಕೂಡಲೇ ಈ ರೀತಿ ನೆಗೆಟಿವ್ ಕಾಮೆಂಟ್ ಮಾಡೋದು ನಿಲ್ಲಿಸಲಿ. ಯಾರೂ ನೆಗೆಟಿವ್ ಕಾಮೆಂಟ್ ಮಾಡದಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.
ಜಗಳೂರು (Jagaluru) ತಾಲೂಕಿನ ಸೊಕ್ಕೆ ಗ್ರಾಮದ ಸಾಯಿಬಾಬಾ ಮಂದಿರಕ್ಕೆ 2ನೇ ವರ್ಷದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ರಾಗಿಣಿ ಭಾಗಿಯಾಗಿದ್ದರು. ಕಾಡುಸಿದ್ದೇಶ್ವರ ಮಠ ನೊಣವಿನಕೆರೆ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು. ಇದನ್ನೂ ಓದಿ: ರಾಮಾಯಣದಲ್ಲಿ ಯಶ್ ಪಾತ್ರ ಬರೀ 15 ನಿಮಿಷ?