ರಾಗಿ ಎಲ್ಲಾ ರೀತಿಯಲ್ಲಿ ಆರೋಗ್ಯ ಒಳ್ಳೆಯದು. ಹಿರಿಯರು ಮುದ್ದೆ ತಿನ್ನುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆದರೆ ಮಕ್ಕಳು ಮುದ್ದೆ ತಿನ್ನುವುದಿಲ್ಲ. ಹೀಗಾಗಿ ತಾಯಂದಿರು ಅವರಿಗೆ ರಾಗಿ ದೋಸೆ, ರೊಟ್ಟಿ ಮಾಡಿಕೊಡುತ್ತಾರೆ. ಇದೇ ರೀತಿ ಮಕ್ಕಳಿಗೆ ಆರೋಗ್ಯಕ್ಕೂ ಉತ್ತಮವಾದ ರಾಗಿ ಪಾಯಸ ಮಾಡಿ ಕೊಡಿ. ರಾಗಿ ಪಾಯಸ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು:
ತೆಂಗಿನಕಾಯಿ ತುರಿ – 3 ಚಮಚ
ಗಸಗಸೆ – 2 ಚಮಚ
ಬಾದಾಮಿ – 7-8
ಏಲಕ್ಕಿ – 3
ಹಾಲು – ಕಾಲು ಕಪ್
ಸಕ್ಕರೆ – 3 ಚಮಚ
ರಾಗಿ ಹಿಟ್ಟು- 3-4 ಚಮಚ
ತುಪ್ಪ – 1 ಚಮಚ
Advertisement
Advertisement
Advertisement
ಮಾಡುವ ವಿಧಾನ
* ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಗಸಗಸೆ, ಬಾದಾಮಿ (ನೆನಸಿ ಸಿಪ್ಪೆ ತೆಗೆದಿರಬೇಕು) ಏಲಕ್ಕಿ, ಹಾಲು ಹಾಕಿ ರುಬ್ಬಿಕೊಳ್ಳಿ.
* ಈಗ ಒಂದು ಬಾಣಲೆಗೆ ಒಂದು ಚಮಚ ತುಪ್ಪ, ಕಾಲು ಕಪ್ (3-4 ಚಮಚ) ರಾಗಿ ಹಿಟ್ಟನ್ನು ಹಾಕಿಕೊಂಡು ಕಡಿಮೆ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ 700 ಮಿ.ಲೀಟರ್ ಹಾಲನ್ನು ಒಂದು ಬೌಲ್‍ಗೆ ಹಾಕಿ ಬಿಸಿಯಾಗಲು ಬಿಡಿ, ನಂತರ ಅದಕ್ಕೆ ಫ್ರೈ ಮಾಡಿಕೊಂಡಿದ್ದ ರಾಗಿ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ 5 ಮಿನಿಷ ಕುದಿಸಿರಿ (ಗಂಟು ಬಾರದಂತೆ ತಿರುಗಿಸುತ್ತೀರಿ)
* ನಂತರ ಕಂಡೆನ್ಸ್ ಡ್ ಮಿಲ್ಕ್ (Condensed Milk) ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ 3 ಚಮಚ ಸಕ್ಕರೆ (ಸಕ್ಕರೆ ಬದಲು ಬೆಲ್ಲವನ್ನು ಹಾಕಬಹುದು) ಮತ್ತು ರುಬ್ಬಿಕೊಂಡಿದ್ದ ಪೇಸ್ಟನ್ನು ಹಾಕಿ ತಿರುಗಿಸಿರಿ.
* 3 ರಿಂದ 4 ನಿಮಿಷದವರೆಗೂ ಕುದಿಸಿದರೆ ರುಚಿಯಾದ ರಾಗಿ ಪಾಯಸ ಸವಿಯಲು ಸಿದ್ಧ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k