ಕೋಲಾರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಿಲ್ಲೆಯ ಮಾಲೂರು ಪಟ್ಟಣದ ಇಂದಿರಾ ಕ್ಯಾಂಟೀನ್ ಬಳಿ ನಾಟಿ ಕೋಳಿ ಸಾರು, ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಗ್ರಾಮೀಣ ಕ್ರೀಡೆ ಹಾಗೂ ಕಲಾ ವೇದಿಕೆ ವತಿಯಿಂದ ಮುದ್ದೆ ತಿನ್ನುವ ಸ್ಪರ್ಧೆ ಅಯೋಜಿಸಿದ್ದ ಈ ಸ್ಪರ್ಧೆಯಲ್ಲಿ 28 ಜನರು ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ 28 ಜನರ ಪೈಕಿ ಗುರಪ್ಪಶೆಟ್ಟಿ, ದೊಡ್ಡಕಡತೂರು ಎಂಬವರು ಬರೋಬ್ಬರಿ 16 ಮುದ್ದೆ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರು. ಕೃಷ್ಣಪ್ಪ ದಾಸರಹಳ್ಳಿ 15 ಮುದ್ದೆ, ಕೃಷ್ಣಪ್ಪ ದೊಡ್ಡಕಡತೂರು 12.5 ಮುದ್ದೆ ತಿನ್ನುವ ಮೂಲಕ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.
250 ಗ್ರಾಂ ತೂಕವುಳ್ಳ ಒಟ್ಟು 4 ಕೆಜಿ ಮುದ್ದೆಯನ್ನು ತಿಂದ ಗುರಪ್ಪ ಶೆಟ್ಟಿ 10,001 ರೂ.. ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ದ್ವಿತೀಯ ಬಹುಮಾನವಾಗಿ 7,500 ಮತ್ತು ತೃತೀಯ ಬಹುಮಾನವಾಗಿ 5 ಸಾವಿರ ನಗದು ಬಹುಮಾನ ನೀಡಲಾಯಿತು. ಹಳ್ಳಿ ಸೊಗಡು ಗ್ರಾಮೀಣ ಕಲೆ ಬಿಂಬಿಸುವ ಜಿಲ್ಲಾ ಮಟ್ಟದ ಮುದ್ದೆ ತಿನ್ನುವ ಸ್ಪರ್ಧೆಗೆ ಇಂದು ಬೆಳಗ್ಗೆ ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡರು ಚಾಲನೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv