ಉಡುಪಿ: ಬೆಳಗಾವಿ (Belagavi) ವಿಧಾನಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರ ಅಳವಡಿಸಿರುವುದು ವಿಪಕ್ಷ ಕಾಂಗ್ರೆಸ್‌ಗೆ (Congress) ಇರುಸು ಮುರುಸು ತಂದಿದೆ. ಕೆಲ ಕಾಂಗ್ರೆಸ್ ನಾಯಕರು ಈ ಬಗ್ಗೆ ಸೈಲೆಂಟಾಗಿದ್ರೆ ಕೆಲವರು ತಗಾದೆ ಶುರು ಮಾಡಿದ್ದಾರೆ ಎಂದು ಬಿ.ಕೆ ಹರಿಪ್ರಸಾದ್‌ಗೆ ಉಡುಪಿ (Udupi) ಶಾಸಕ ರಘುಪತಿ ಭಟ್ (Raghupati Bhat) ತಿರುಗೇಟು ನೀಡಿದರು.
ಸಾವರ್ಕರ್ ಬ್ರಿಟೀಷರ ತಟ್ಟೆ ಕಾಸಿಂದ ಜೀವನ ಮಾಡುತ್ತಿದ್ದರು ಎಂದು ನೀಡಿದ್ದ ಹೇಳಿಕೆ ವಿರುದ್ಧ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ಬಿ.ಕೆ ಹರಿಪ್ರಸಾದ್ (BK Hariprasad) ಬಾಲಿಶ ಹೇಳಿಕೆ ಕೊಡುತ್ತಿದ್ದಾರೆ. ಹರಿಪ್ರಸಾದ್ ಇತಿಹಾಸವನ್ನು ಒಮ್ಮೆ ಓದಬೇಕು. ಅಂಡಮಾನ್ ನಿಕೋಬಾರ್ ಜೈಲಿಗೆ ಒಮ್ಮೆ ಹೋಗಿ ಬನ್ನಿ. ಅಂಡಮಾನ್ ಜೈಲಿನ ಪರಿಸ್ಥಿತಿಯನ್ನು ನೋಡಿ ಬನ್ನಿ. ಕಾಲಾಪಾನಿ ಶಿಕ್ಷೆ ಹೇಗಿತ್ತು ಎಂಬುದನ್ನು ಅಲ್ಲಿ ಸೌಂಡ್ ಅಂಡ್ ಲೈಟ್ ಮೂಲಕ ತೋರಿಸಲಾಗುತ್ತದೆ ಎಂದರು.
Advertisement
Advertisement
ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್‌ನವರು ಸಾವರ್ಕರ್ ವಿರೋಧಿಸುತ್ತಾರೆ. ಸಾವರ್ಕರ್ ಹಿಂದೂ ಮಹಾಸಭಾ ನಾಯಕರಾಗಿದ್ದದ್ದೇ ಈ ವಿರೋಧಕ್ಕೆ ಕಾರಣ. ಸ್ವಾತಂತ್ರ ಹೋರಾಟದ ಸಂದರ್ಭ ಸಾವರ್ಕರ್ ಹಿಂದೂಗಳ ಪರವಾಗಿದ್ದರು. ಸಾವರ್ಕರ್ ಹಿಂದೂ ಪರ ಧೋರಣೆ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿವೇಶನ ಮುಗಿದ ಕೂಡಲೇ ಒಂದು ಸಮಿತಿ ರಚನೆ ಮಾಡಿ ಅಂಡಮಾನ್‌ಗೆ ಹೋಗಿ ಎಂದ ಅವರು, ಸಾವರ್ಕರ್ ಯೋಗ್ಯತೆ ಏನು ಅಂತ ದೇಶಕ್ಕೆ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿ
Advertisement
Advertisement
ಸಾವರ್ಕರ್ ದೇಶ ವಿರೋಧಿಯಾಗಿ ಕೊನೆಯವರೆಗೂ ವರ್ತಿಸಿಲ್ಲ. ಸಾವರ್ಕರ್ ದೇಶಪ್ರೇಮ ಕಾಂಗ್ರೆಸ್ಸಿಗೆ ವಿಲನ್‌ನಂತೆ ಕಾಣುತ್ತದೆ. ಅಧಿವೇಶನ ಮುಗಿದ ಕೂಡಲೇ ಅಂಡಮಾನಿಗೆ ಪ್ರವಾಸ ಮಾಡಿ ಬನ್ನಿ. ನಾನು ಯುಪಿಎ ಸರ್ಕಾರ ಇದ್ದಾಗಲೇ ಅಂಡಮಾನಿಗೆ ಭೇಟಿ ಕೊಟ್ಟಿದ್ದೇನೆ. ಸಾವರ್ಕರ್‌ಗೆ ಬೈದರೆ ಮುಸ್ಲಿಂ ವೋಟ್ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಭಾರತದ ಮುಸಲ್ಮಾನರ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ ಈಗ ಬದಲಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾನಸಿಕ ಕಿರುಕುಳಕ್ಕೆ ಬೇಸತ್ತು ತಾಯಿ, ಮಗ, ಸೊಸೆ ಆತ್ಮಹತ್ಯೆ