ವಿನೂತನ ಶ್ರೀರ್ಷಿಕೆ ಹೊಂದಿರುವ ’ಧ್ರುವ 369’ ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ರಮೇಶ್‌ಭಟ್ ಕ್ಲಾಪ್ ಮಾಡಿದರೆ, ’ಟಕ್ಕರ್’ ಖ್ಯಾತಿಯ ನಟ ಮನೋಜ್‌ಕುಮಾರ್ ಕ್ಯಾಮಾರ ಆನ್ ಮಾಡಿದರು. ಅಚಿಂತ್ಯ: ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಮಂಗಳೂರಿನ ಶ್ರೀಕೃಷ್ಣ ಕಾಂತಿಲ ಗ್ರಾಫಿಕ್ಸ್ ಡಿಸೈನರ್ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಶಂಕರ್‌ನಾಗ್.ಎಸ್.ಎಸ್. ಅವರಿಗೆ ಎರಡನೇ ಅವಕಾಶ. ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ರಾಘವೇಂದ್ರರಾಜ್‌ಕುಮಾರ್ ಶುಭ ಸಂದೇಶವನ್ನು ವಿಡಿಯೋ ಮೂಲಕ ರವಾನಿಸಿದ್ದರು.
Advertisement
ವಿಜ್ಞಾನ ಮತ್ತು ಪುರಾಣ ಮಿಶ್ರಣಗೊಂಡ ಅಂಶಗಳು ಇರಲಿದೆ. ಭೂಮಿಯಿಂದ ತುಂಬಾ ಚೆನ್ನಾಗಿ ಪರಿಪೂರ್ಣವಾಗಿ ಕಾಣಿಸುವುದು ಧ್ರುವ ನಕ್ಷತ್ರ. 369 ಸಂಖ್ಯೆ ಎಂಬುದು ಸಾರ್ವತ್ರಿಕವಾಗಿದೆ. ಅದಕ್ಕೆ ಆದಂತ ಆಯಾಮವಿದೆ. ಮತ್ತೋಂದು ಕಡೆ ಮ್ಯಾಜಿಕ್ ನಂಬರ್ ಅಂತಲೂ ಕರೆಯಬಹುದು. ಕಥೆಯಲ್ಲಿ ಇವರೆಡು ಸೇರಿದರೆ ಏನು ಆಗುತ್ತದೆ ಎಂಬುದನ್ನು ಹೇಳಲಾಗುತ್ತಿದೆ. ಸಾಧನೆ ಮಾಡಬೇಕು ಅಂದುಕೊಂಡರೆ ಏನು ಬೇಕಾದರೂ ಮಾಡಬಹುದು. ದೂರದ ಲೋಕಕ್ಕೆ ಹೋಗಿ ಹನುಮಂತ ಹಣ್ಣು ತೆಗೆದುಕೊಂಡು ಬಂದಿದ್ದ ಅಂತ ಹೇಳಲಾಗಿದೆ. ಅದೇ ರೀತಿ ಚಿತ್ರವು ಫ್ಯಾಂಟಸಿ ತರಹ ಸಾಗುತ್ತದೆ. ಪುರಾತನ ಕಾಲದ ಕಥೆಗಳೆ ನಿರ್ದೇಶಕರಿಗೆ ಕಥೆ ಬರೆಯಲು ಪ್ರೇರಣೆಯಾಗಿದೆ. ಸನ್ನಿವೇಶಕ್ಕೆ ಅನುಗುಣವಾಗಿ ಸಂಸ್ಕ್ರತ ಶ್ಲೋಕಗಳು ಬರಲಿದೆ. ಇದನ್ನೂ ಓದಿ: ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು, ಬೀದಿಗೆ ತರಬಾರದು: ಅನಿರುದ್ಧ್
Advertisement
Advertisement
ಪ್ರಥಮಬಾರಿ ರಾಜ್ಯಪಾಲರಾಗಿ ರಾಘವೇಂದ್ರರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ತಾರಗಣದಲ್ಲಿ ರಮೇಶ್‌ಭಟ್, ಪ್ರತಿಭಾ, ಅತೀಶ್.ಎಸ್.ಶೆಟ್ಟಿ, ಪ್ರೇಮ್ ಕನ್ನಡರಾಜು, ಅರವಿಂದ್‌ಸಾಗರ್, ರೋಹನ್ ಮೂಡಬಿದ್ರೆ, ದೀಪಕ್‌ಶೆಟ್ಟಿ, ಕೆ.ಸುಬ್ಬಣ್ಣಭಟ್, ಚಂದನ, ರಮ್ಯಾ, ಚಂದ್ರಿಕಾ, ಭಾಸ್ಕರ್‌ಮಣಿಪಾಲ್ ನಟಿಸುತ್ತಿದ್ದಾರೆ. ಮೂರು ಹಾಡುಗಳಿಗೆ ಸತೀಶ್‌ಬಾಬು ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಹರ್ಷಪದ್ಯಾಣ ಚಿತ್ರಕ್ಕಿದೆ. ಶೇಕಡ ನಲವತ್ತರಷ್ಟು ಸಿಜಿ ಕೆಲಸ ಇರಲಿದೆ. ಬೆಂಗಳೂರು, ಮಂಗಳೂರು, ಉಡುಪಿ, ಮುಡೆಶ್ವರ, ಕೋಲಾರ, ಚಿಕ್ಕಬಳ್ಳಾಪುರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.