ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್‍ಗೆ ಪತ್ನಿ ರಾಧಿಕಾ ಪಂಡಿತ್ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ರಾಧಿಕಾ ಪಂಡಿತ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಯಶ್ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗಿರುವ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಾಧಿಕಾ ತಮ್ಮ ತೋಳಿನಲ್ಲಿ ಯಥಾರ್ವ್ ಎತ್ತಿಕೊಂಡಿದ್ದರೆ, ಮತ್ತೊಂದು ಕಡೆ ಐರಾ ಕ್ಯೂಟ್ ಆಗಿ ಫೋಟೋಗೆ ಸ್ಮೈಲ್ ನೀಡುತ್ತಿದ್ದರೆ, ಯಶ್ ರಾಧಿಕ ಮಡಿಲ ಮೇಲೆ ಮಲಗಿಕೊಂಡು ಫೋಟೋ ಕ್ಲಿಕ್ಕಿಸಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ನಮ್ಮ ಪ್ರಪಂಚವಾಗಿರುವ ಯಶ್‍ಗೆ ಹುಟ್ಟುಹಬ್ಬದ ಶುಭಾಶಯಗಳು. ವಿ ಲವ್ ಯೂ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪನ Birthdayಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಐರಾ, ಯಥರ್ವ್
View this post on Instagram
36ನೇ ವಸಂತಕ್ಕೆ ಕಾಲಿಟ್ಟಿರುವ ಯಶ್ ಅವರು, ಕುಟುಂಬದೊಂದಿಗೆ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನೂ ಸೆಲೆಬ್ರೇಶನ್ ಫೋಟೋಗಳನ್ನು ಯಶ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಜನ್ಮದಿನಗಳಿಗೆ ನಾನು ಎಂದಿಗೂ ಉತ್ಸುಕವನಾಗಿಲ್ಲ. ಆದರೆ ಈ ಸಂತೋಷವನ್ನು ನನ್ನ ಸುತ್ತಲಿರುವವರ ಜೊತೆ ನೋಡಿದ್ದೇನೆ. ಈಗ ವಿಶೇಷವಾಗಿ ನನ್ನ ಮಕ್ಕಳೊಂದಿಗೆ, ನನ್ನನ್ನು ಸೇರಿಕೊಳ್ಳುವ ಹಾಗೇ ಮಾಡಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳಿಗೆ ನಾನು ಚಿರಋಣಿ. ನನ್ನ ಪ್ರತಿಯೊಬ್ಬ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದ. ಎಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 36 ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್
ಅಪ್ಪನ ಬರ್ತ್‍ಡೇಗೆ ಐರಾ ಮತ್ತು ಪುತ್ರ ಯಥರ್ವ್ ಹೃದಯದ ಚಿತ್ರ ಬರೆದು, ಅದರೊಳಗೆ ಐರಾ ಮತ್ತು ಯಥರ್ವ್ ಅಂಗೈ ಮುದ್ರೆ ಒತ್ತಿರುವ ಒಂದು ವಿಶೇಷ ಉಡುಗೊರೆ ನೀಡಿದ್ದಾರೆ. ಜೊತೆಗೆ ಹ್ಯಾಪಿ ಬರ್ತ್‍ಡೇ ಡಡ್ಡಾ ಎಂದು ಬರೆದಿದ್ದಾರೆ. ಇನ್ನೂ ಈ ಮುದ್ದಾದ ಉಡುಗೊರೆಯ ಫೋಟೋವನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕುಟುಂಬದೊಂದಿಗೆ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿದ ಯಶ್