ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಹೊಸ ಬಗೆಯ ಫೋಟೋಸ್ ಮೂಲಕ ಆಗಾಗ ನೆಟ್ಟಿಗರ ಗಮನ ಸೆಳೆಯುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ 500ನೇ ಪೋಸ್ಟ್‌ಗಾಗಿ ವಿಶೇಷ ಫೋಟೋವನ್ನ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
`ಮೊಗ್ಗಿನ ಮನಸ್ಸು’ ಚಿತ್ರದಿಂದ ಸಿನಿಪಯಣ ಶುರು ಮಾಡಿದ್ದ ನಟಿ ಮದುವೆಯ ಬಳಿಕವೂ ಬೆಳ್ಳಿತೆರೆಯಲ್ಲಿ ಮಿಂಚಿದ್ದರು. `ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡರು. ಮತ್ತೆ ರಾಧಿಕಾ ಅವರ ಕಂಬ್ಯಾಕ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಿರುವಾಗ ಅಭಿಮಾನಿಗಳ ಜತೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಸುಂದರ ಫೋಟೋಗಳನ್ನ ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇದೀಗ ರಾಧಿಕಾ ಶೇರ್ ಮಾಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ
View this post on Instagram
ನಟಿಯ ಸೋಷಿಯಲ್ ಮೀಡಿಯಾದಲ್ಲಿ ಖಾತೆಯ 500ನೇ ಪೋಸ್ಟ್ ವಿಶೇಷ ಫೋಟೋನಿಂದ ಶೇರ್ ಮಾಡಿದ್ದಾರೆ. ರಾಧಿಕಾ ಜತೆ ಪತಿ ಯಶ್ ಮತ್ತು ಮುದ್ದಾದ ಇಬ್ಬರು ಮಕ್ಕಳು ಇರುವ ಚೆಂದದ ಫೋಟೋವನ್ನೇ ಶೇರ್ ಮಾಡಿದ್ದಾರೆ. ಮುದ್ದಾದ ಸ್ಮೈಲ್‌ನೊಂದಿಗೆ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿರೋ ಯಶ್ ಕುಟುಂಬ ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಹ್ಯಾಪಿ ಕುಟುಂಬಕ್ಕೆ ಯಾರು ದೃಷ್ಟಿನು ಬೀಳದೇ ಇರಲಿ ಅಂತಾ ಮನಸಾರೆ ಶುಭಹಾರೈಸುತ್ತಿದ್ದಾರೆ. ಈಗ ರಾಧಿಕಾ ಕುಟುಂಬದ ನಯಾ ಫೋಟೋ ಸಖತ್ ವೈರಲ್ ಆಗುತ್ತಿದೆ.