ನವದೆಹಲಿ: ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ ಗೆ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ವಿಐಪಿ ಗೌರವ ನೀಡಲಾಗಿದೆ.
ಇದಕ್ಕೆ ಸಾಕ್ಷಿಯಾಗಿ ಫೋಟೋಗಳು ಲಭ್ಯವಾಗಿದ್ದು, ವಿವೇಕ್ ವಿಹಾರ್ ಪೊಲೀಸ್ ಠಾಣೆಯಲ್ಲಿ ರಾಧೆ ಮಾ ಸ್ಟೇಷನ್ ಹೌಸ್ ಅಧಿಕಾರಿಯ ಚೇರ್ ಮೇಲೆ ಕುಳಿತಿರುವುದು ಕಾಣಬಹುದಾಗಿದೆ. ಚೇರ್ ಬಿಟ್ಟುಕೊಟ್ಟಿದ್ದಲ್ಲದೆ ಎಸ್‍ಹೆಚ್‍ಓ ಕೈ ಮುಗಿದು ರಾಧೆ ಮಾ ಪಕ್ಕದಲ್ಲಿ ನಿಂತಿದ್ದಾರೆ. ಕುತ್ತಿಗೆಗೆ ಕೆಂಪು ಬಣ್ಣದ ಶಲ್ಯವನ್ನ ಹಾಕಿಕೊಂಡಿದ್ದಾರೆ.
Advertisement
ಮಧ್ಯರಾತ್ರಿ 1 ಗಂಟೆ ವೇಳೆಯಲ್ಲಿ ರಾಧೆ ಮಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಭದ್ರತೆಗೆ ಸಂಬಂಧಿಸಿದಂತೆ ಮಾತನಾಡಲು ಪೊಲೀಸ್ ಠಾಣೆಗೆ ಹೋಗಿದ್ದಾಗಿ ವರದಿಯಾಗಿದೆ. ಪೊಲೀಸರು ರಾಧೆ ಮಾ ಜೊತೆಗೆ ಭಜನೆಗಳನ್ನ ಹಾಡುತ್ತಿರುವ ವಿಡಿಯೋವನ್ನ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಾಧೆ ಮಾ ಗೆ ನೀಡಿದ ಗೌರವದ ಬಗ್ಗೆ ದೆಹಲಿ ಪೊಲೀಸರು ತನಿಖೆಗೆ ಆದೇಸಿಸಿದ್ದು, ಎಸ್‍ಹೆಚ್‍ಓ ರನ್ನು ಡಿಸ್ಟ್ರಿಕ್ಟ್ಸ್ ಲೈನ್ಸ್‍ಗೆ ವರ್ಗಾವಣೆ ಮಾಡಲಾಗಿದೆ.
Advertisement
ವರದಕ್ಷಿಣ ಕಿರುಕುಳ ಸೇರಿದಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರಾಧೆ ಮಾ ಆರೋಪಿ. ನಿಕಿ ಗುಪ್ತಾ ಎಂಬವರು 2016ರಲ್ಲಿ ದಾಖಲಿಸಿರುವ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ತನ್ನ ಹೆಸರನ್ನು ಆರೋಪಿಗಳ ಪಟ್ಟಿಯಿಂದ ತೆಗೆಯುವಂತೆ ರಾಧೆ ಮಾ ಮನವಿ ಮಾಡಿದ್ದು, ಕಳೆದ ತಿಂಗಳು ಮುಂಬೈ ಕೋರ್ಟ್ ಮನವಿಯನ್ನು ತಿರಸ್ಕರಿಸಿತ್ತು.
Advertisement
#WATCH Policemen seen singing with self styled god woman Radhe Ma in Delhi's GTB Enclave pic.twitter.com/XOIAr2vKHf
— ANI (@ANI) October 5, 2017
Advertisement
SHO Vivek Vihar Sanjay Sharma sent to district lines: Joint CP Eastern Range
— ANI (@ANI) October 5, 2017
Self styled god woman Radhe Ma welcomed at Vivek Vihar police station in Delhi, sat on chair of SHO pic.twitter.com/0hbkTLpr5K
— ANI (@ANI) October 5, 2017