ಕಿರುತೆರೆಯ ಬ್ಯೂಟಿ, ಕರಾವಳಿ ನಟಿ ರಾಧಿಕಾ ರಾವ್ (Radhika Rao) ಅವರು ಜುಲೈ 5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು (Baby Boy) ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ಕಣ್ಣು ಕುಕ್ಕುವಂತೆ ಪಡ್ಡೆಹುಡುಗರ ನಿದ್ದೆಗೆಡಿಸಿದ ಸೇಸಮ್ಮ ನಯಾ ಲುಕ್
Advertisement
ಮಂಗ್ಳೂರ್ ಹುಡ್ಗಿ ಹುಬ್ಳಿ ಹುಡ್ಗ, ರಾಧಾ ಕಲ್ಯಾಣ (Radha Kalyana) ಸೀರಿಯಲ್‌ನಲ್ಲಿ ಗಮನ ಸೆಳೆದ ನಟಿ ರಾಧಿಕಾ ಅವರು ಕನ್ನಡ ಮತ್ತು ಸಾಕಷ್ಟು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಿಗೆ ರಾಧೆಯಾಗಿ ಮನಗೆದ್ದಿದ್ದಾರೆ. ಯಾವುದೇ ಪಾತ್ರವಾಗಿದ್ರು, ಆ ಪಾತ್ರವೇ ತಾವಾಗಿ ರಾಧಿಕಾ ನಟಿಸುತ್ತಿದ್ದರು.
Advertisement
Advertisement
ಮಂಗಳೂರಿನ ಆಕರ್ಷ್ ಭಟ್ (Akarsh) ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್- ಮೈಂಡ್ ರೀಡರ್ ಆಗಿದ್ದಾರೆ. ಆಕರ್ಷ್ ಜೊತೆ ರಾಧಿಕಾ ರಾವ್ 2020ರಲ್ಲಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ ವಿಚಾರ ತಿಳಿಸಿ ಒಪ್ಪಿಸಿ ಮದುವೆ ಆದರು. ಕೆಲ ತಿಂಗಳುಗಳ ಹಿಂದೆ ಸಾಂಪ್ರದಾಯಿಕ ಲುಕ್ ಮತ್ತು ಮಾಡ್ರನ್ ಗೌನ್ ಧರಿಸಿ ವಿವಿಧ ರೀತಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು.
Advertisement
ರಾಧಿಕಾ ಕುಟುಂಬದಲ್ಲಿ ಇದೀಗ ಸಂತಸ ಮನೆ ಮಾಡಿದೆ. ಗಂಡು ಮಗನ ಆಗಮನ ಕುಟುಂಬಕ್ಕೆ ಖುಷಿ ಕೊಟ್ಟಿದೆ. ಜುಲೈ 5ರಂದು ಹೊಸ ಅತಿಥಿಯ ಎಂಟ್ರಿಯಾಗಿದೆ. ತಾಯಿ, ಮಗು ಇಬ್ಬರೂ ಕ್ಷೇಮವಾಗಿದ್ದಾರೆ.