ಮಂಗಳೂರು: ಕೊರೊನಾ ಟೈಮ್‌ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಟ್ಸಾಫ್ ಎಂದು ಚಂದನವನದ ನಟಿ ರಚಿತಾ ರಾಮ್ ಹೇಳಿದರು.
ವೈಯಕ್ತಿಕ ಕಾರ್ಯಕ್ರಮ ಹಿನ್ನೆಲೆ ರಚಿತಾ ರಾಮ್ ಅವರು ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದರು. ಆಗ ಮಂಗಳೂರು ನಗರ ಪೊಲೀಸರ ಜೊತೆ ಒಂದಷ್ಟು ಹೊತ್ತು ಮಾತುಕತೆ ನಡೆಸಿದರು. ಇದನ್ನೂ ಓದಿ: ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ: ಶಿವಣ್ಣ
ಈ ವೇಳೆ ಅವರು, ಈ ಒಂದು ಸಮಾರಂಭಕ್ಕೆ ನಾನು ಆಕಸ್ಮಿಕವಾಗಿ ಬಂದಿದ್ದೇನೆ. ಇಲ್ಲಿಗೆ ಬಂದಿದ್ದು, ತುಂಬಾ ಖುಷಿಯಾಯಿತು. ನಿನ್ನೆಯೇ ನಾವು ಹೊರಡಬೇಕಿತ್ತು. ಆದರೆ ಅಮ್ಮ ಬೇಡ ಎಂದಿದ್ದಕ್ಕೆ ಇವತ್ತು ಹೋಗಲು ನಿರ್ಧರಿಸಿದೆ. ಬೆಳಗ್ಗೆ 10 ಗಂಟೆಗೆ ಹೊರಡಬೇಕು ಎಂದುಕೊಂಡೆ. ಆದರೆ ತಿಂಡಿ ಬರುವುದು ತಡ ಆಯ್ತು. ಅದಕ್ಕೆ ಆ ಪ್ಲಾನ್ ಕೂಡ ಕ್ಯಾನ್ಸಲ್ ಆಯ್ತು. ನಿನ್ನೆಯೇ ನಾನು ಪಬ್ಬಾಸ್‌ಗೆ ಹೋಗಿ ಐಸ್‍ಕ್ರೀಂ ತಿಂದ್ಕೊಂಡು ಬಂದೆ. ಏಕೆಂದರೆ ಅದರಿಂದ ನನಗೆ ಗಂಟಲು ಸರಿಯಾಗುತ್ತೆ ಎಂದು ನಕ್ಕರು.
ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ನನಗೆ ಇಲ್ಲಿಗೆ ಬರುವಂತೆ ಕೇಳಿಕೊಂಡರು. ಆಗ ನಾನು ಬಂದೆ. ಮನೆಗೆ ಹೇಗೆ ಹೊರಟಿದ್ದೇನೋ ಹಾಗೇ ಇಲ್ಲಿಗೆ ಬಂದೆ. ಅದು ಅಲ್ಲದೇ ಈ ರೀತಿ ಸ್ವಾಗತ ಸಿಗುತ್ತೆ ಎಂದು ತಿಳಿದುಕೊಂಡಿರಲಿಲ್ಲ. ಇದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದರು.
ನಿಮ್ಮ ಬಗ್ಗೆ ಮಾತಾಡಿ ಎಂದು ಸರ್ ಹೇಳಿದರು. ಆದರೆ ನಿಮ್ಮ ಬಗ್ಗೆ ಮಾತನಾಡಲು ಒಂದೆರೆಡು ಮಾತುಗಳಿಲ್ಲ. ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದು ಈ ಮಾತುಗಳನ್ನು ಹೇಳುತ್ತಿಲ್ಲ. ನನ್ನ ತುಂಬು ಹೃದಯದಿಂದ ಹೇಳುತ್ತಿದ್ದೇನೆ. ನೀವು ಕೊರೊನಾ ಟೈಮ್ ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಟ್ಸಾಫ್. ನಿಮ್ಮ ಬಗ್ಗೆ ಮಾತನಾಡಬೇಕಾದರೆ ಖುಷಿಯಾಗುತ್ತೆ ಎಂದರು.
ನಿಮ್ಮ ಆರೋಗ್ಯವನ್ನು ಲೆಕ್ಕಿಸದೆ, ನಮಗಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮತ್ತು ಈ ಮೂಲಕ ಡಾಕ್ಟರ್ ಗಳಿಗೂ ತುಂಬಾ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಕೊಟ್ಟ ಆ ದೇವರು ಕಾಪಾಡಲಿ. ನಿಮ್ಮಿಂದ ನಾವು ಇಷ್ಟು ಸುರಕ್ಷಿತವಾಗಿ ಇದ್ದೇವೆ. ಸೈನಿಕರು ಅಲ್ಲಿ ನಮಗಾಗಿ ಹೋರಾಡಿದರೆ, ನೀವು ಇಲ್ಲಿ ಹೋರಾಟ ಮಾಡುತ್ತಿದ್ದೀರಾ ಎಂದು ಧನ್ಯವಾದ ತಿಳಿಸಿದರು.
ನಾನು ಚಿಕ್ಕ ವಯಸ್ಸಿನಲ್ಲಿ ಐಪಿಎಸ್ ಅಧಿಕಾರಿಯಾಗಬೇಕು ಎಂದು ಹೇಳುತ್ತಿದ್ದೆ. ಲಾ ಮಾಡಬೇಕು ಏನಾದರು ಸರ್ಕಾರಿ ವೃದ್ಧೆಯಲ್ಲಿ ಇರಬೇಕು ಎಂದು ನನಗೆ ಅನಿಸಿತ್ತು. ನಮ್ಮ ತಂದೆಗೆ ಸರ್ಕಾರಿ ವಾಹನವನ್ನು ನೋಡಿದಾಗ ನಾನು ಆ ಕಾರಿನಲ್ಲಿ ಬರುತ್ತೇನೆ ಎನ್ನುತ್ತಿದ್ದೆ. ಆದರೆ ನಟಿಯಾಗಿ ಯಾವ ಪಾತ್ರವನ್ನು ಮಾಡಬಹುದು. ಆದರೆ ಈ ಪಾತ್ರ ನನಗೆ ಇನ್ನೂ ಸಿಕ್ಕಿಲ್ಲ ಎಂದು ತಮ್ಮ ಬಾಲ್ಯ ನೆನೆದು ನಕ್ಕರು. ಇದನ್ನೂ ಓದಿ: ನಮಗೆ ನಷ್ಟ ಮಾಡಿಕೊಂಡು, ಇನ್ನೊಬ್ಬರ ಮೇಲೆ ಪ್ರತಿಭಟನೆ ಮಾಡಬಾರದು: ಯಶ್
ನಾನು ಲಾಯರ್ ಆಗಿದ್ದೆ, ಡಾಕ್ಟರ್ ಆಗಿದ್ದೆ, ಆದರೆ ಪೊಲೀಸ್ ಒಂದು ಪಾತ್ರವನ್ನು ನಾನು ಮಾಡಿಲ್ಲ. ಆ ಪಾತ್ರಕ್ಕಾಗಿ ಹುಡುಕುತ್ತಿದ್ದೇನೆ. ಹಿಂದೆ ನನಗೆ ಆ ಪಾತ್ರ ಬಂದಿತ್ತು. ಆದರೆ ಕಾರಣಾಂತರದಿಂದ ಆ ಪಾತ್ರವನ್ನು ಮಾಡಲು ಆಗಿಲ್ಲ ಎಂದರು.