CinemaBengaluru CityDistrictsKarnatakaLatestMain PostSandalwood

ನಮ್ಮ ಜಗತ್ತು.. ನಮ್ಮ ವಿಶ್ವ.. ಐ ಲವ್ ಯೂ ಕಂದ

ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಯುವ ಸಾಮ್ರಾಟ್ ಚಿರಂಜೀವ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ. ಮಗನ ಹುಟ್ಟುಹಬ್ಬದ ಪ್ರಯುಕ್ತ ಮೇಘನಾ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ.

Junior Chiru Meghana Raj Chiranjeevi 1

ರಾಯನ್ ಸರ್ಜಾ ಹುಟ್ಟಿ ಇಂದಿಗೆ ಒಂದು ವರ್ಷ ಕಳೆದಿದ್ದು, ಮೇಘನಾ ರಾಜ್ ಮಧ್ಯರಾತ್ರಿ 12 ಗಂಟೆಗೆ ಫೋಟೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಪ್ರೀತಿಯ ಮಗನಿಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ನಾಳೆ ರಾಯನ್ ಸರ್ಜಾ ಹುಟ್ಟುಹಬ್ಬ – ಮಗನ ಬರ್ತ್‍ಡೇಗೆ ಮೇಘನಾ ಭರ್ಜರಿ ತಯಾರಿ

junior chiru meghana sarja chiranjeevi sarja 1

ಫೋಟೋದಲ್ಲಿ ಮೇಘನಾ, ರಾಯನ್ ರಾಜ್ ಸರ್ಜಾನನ್ನು ಬಿಗಿದಪ್ಪಿಕೊಂಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ನಮ್ಮ ಮಗು.. ನಮ್ಮ ಜಗತ್ತು.. ನಮ್ಮ ವಿಶ್ವ.. ನಮಗೆ ಎಲ್ಲ.. ಚಿರು ನಮ್ಮ ಪುಟ್ಟ ರಾಜಕುಮಾರನಿಗೆ 1 ವರ್ಷವಾಗಿದೆ. ಅವನು ಅಮ್ಮಾ ನಿಲ್ಲಿಸು ಎಂದು ಹೇಳುವವರೆಗೂ ನಾನು ರೇಗಿಸುತ್ತಲೇ ಇರುತ್ತೇನೆ. ಅವನು ತನ್ನ ಕಣ್ಣುಗಳನ್ನು ನನ್ನ ಕಡೆ ತಿರುಗಿಸಿ ನೋಡುವವರೆಗೂ ಚುಂಬಿಸುತ್ತಲೇ ಇರುತ್ತೇನೆ ಮತ್ತು ನಂತರ ಕೂಡ ಅವನನ್ನು ಚುಂಬಿಸುತ್ತೇನೆ. ಐ ಲವ್ ಯೂ ಕಂದ.. ನೀನು ಬಹಳ ಬೇಗ ಬೆಳೆದೆ. ನಾನು ನಿನ್ನನ್ನು ಶಾಶ್ವತವಾಗಿ ನನ್ನ ತೋಳಿನಲ್ಲಿ ಮುದ್ದಾಡಲು ಬಯಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ರಾಯನ್ ಎಂದು ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

 

View this post on Instagram

 

A post shared by Meghana Raj Sarja (@megsraj)

ಕಳೆದ ವರ್ಷ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿದ್ದರು. ಈ ವೇಳೆ ಕತ್ತಲೆ ತುಂಬಿದ್ದ ಮೇಘನಾ ರಾಜ್ ಬದುಕಿನಲ್ಲಿ ಬೆಳಕಂತೆ ರಾಯನ್ ರಾಜ್ ಸರ್ಜಾ 2020ರ ಅಕ್ಟೋಬರ್ 22ರಂದು ಜನಿಸಿದ. ಸದ್ಯ ರಾಯನ್ ಮೂಲಕ ಚಿರುವನ್ನು ಕಾಣುತ್ತಿರುವ ಮೇಘನಾ, ಮಗನ ಹುಟ್ಟುಹಬ್ಬವನ್ನು ಇಂದು ಸಡಗರದಿಂದ ಆಚರಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *