ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾಗೆ ನಾಳೆ ಮೊದಲನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆ ಭರ್ಜರಿಯಾಗಿ ತಯಾರಿ ನಡೆಸಲಾಗುತ್ತಿದೆ.
Advertisement
ಸದ್ಯ ಈ ಕುರಿತಂತೆ ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಯನ್ ಆಟ ಆಡುತ್ತಿರುವ ವೀಡಿಯೋಗೆ ಪಾರ್ಟಿ ಸಾಂಗ್ ಸೆಟ್ ಮಾಡಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ರಾಯನ್ ಬಾಯಲ್ಲಿ ಬೆರಳು ಹಾಕಿಕೊಂಡು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ಜೊತೆಗೆ ಶೀರ್ಷಿಕೆಯಲ್ಲಿ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಮೇಘನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್
Advertisement
Advertisement
ಮತ್ತೊಂದೆಡೆ ಚಿರು ಆಪ್ತ ಗೆಳೆಯ ಪನ್ನಾಗಭರಣ ಪುತ್ರ ವೇದ್ ಭರಣ ರಾಯನ್‍ಗಾಗಿ ವಿಶೇಷವಾದ ಕೇಕ್ ಅನ್ನು ತಯಾರಿಸುತ್ತಿದ್ದು, ಈ ವೀಡಿಯೋವನ್ನು ಸಹ ಮೇಘನಾ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ವೇದ್ ಭರಣ ಸೌಟ್ ಹಿಡಿದು ಕೇಕ್ ತಯಾರಿಸುತ್ತಿರುವುದನ್ನು ಕಾಣಬಹುದಾಗಿದ್ದು, ನಾನು ರಾಯನ್ ಸರ್ಜಾಗಾಗಿ ಕೇಕ್ ಅನ್ನು ತಯಾರಿಸುತ್ತಿದೇನೆ ಎಂದು ಹೇಳಿದ್ದಾನೆ.
Advertisement
ಕಳೆದ ವರ್ಷ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿದ್ದರು. ಈ ವೇಳೆ ಕತ್ತಲೆ ತುಂಬಿದ್ದ ಮೇಘನಾ ರಾಜ್ ಬದುಕಿನಲ್ಲಿ ಬೆಳಕಂತೆ ರಾಯನ್ ರಾಜ್ ಸರ್ಜಾ 2020ರ ಅಕ್ಟೋಬರ್ 22ರಂದು ಜನಿಸಿದ. ಸದ್ಯ ರಾಯನ್ ಮೂಲಕ ಚಿರುವನ್ನು ಕಾಣುತ್ತಿರುವ ಮೇಘನಾ, ನಾಳೆ ಮಗನ ಹುಟ್ಟುಹಬ್ಬದ ಸಂತಸದಲ್ಲಿದ್ದಾರೆ. ಇದನ್ನೂ ಓದಿ: ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ
ಇತ್ತೀಚೆಗಷ್ಟೇ ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದು ಮತ್ತೆ ಬಣ್ಣಹಚ್ಚುವುದಾಗಿ ಮೇಘನಾ ಘೋಷಿಸಿದ್ದು, ಬೇರೆ ಯಾವ ದಿನವೂ ಉತ್ತಮವಾಗಿರಲಿಲ್ಲ, ಬೇರೆ ಯಾವುದೇ ತಂಡವು ಇಷ್ಟು ಉತ್ತಮವಾಗಿರಲಾರದು, ಇದು ನಿಮ್ಮ ಜನ್ಮದಿನ, ಇದು ನಮ್ಮ ಕನಸು ಆಗಿದೆ. ಇದು ನಿಮಗಾಗಿ ಚಿರು, ಪನ್ನ ಇಲ್ಲದಿದ್ದರೆ ನಾನು ಈ ಬಗ್ಗೆ ಯೋಚಿಸುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ, ಅಧಿಕೃತವಾಗಿ ಹೇಳುತ್ತಿದ್ದೇನೆ ಕ್ಯಾಮರಾ, ರೋಲಿಂಗ್, ಆ್ಯಕ್ಷನ್ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.