ಬಹುಭಾಷಾ ನಟಿ ರಾಶಿ ಖನ್ನಾ ತಮ್ಮ ಬೋಲ್ಡ್ ವ್ಯಕ್ತಿತ್ವದ ಮೂಲಕ ಬಣ್ಣದ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ ರಾಶಿ ಸೌತ್ ಸಿನಿಮಾದಿಂದಲೇ ಬಾಲಿವುಡ್ಗೆ ಹೋಗಿದ್ದರೂ, ತಮ್ಮ ನೆಲದ ಮೇಲೆಯೇ ಗೌರವವಿಲ್ಲ ಎಂಬ ಗಾಸಿಪ್ ಎಲ್ಲಾ ಕಡೆ ಹಬ್ಬಿತ್ತು. ಈ ಗಾಸಿಪ್ಗೆ ರಾಶಿ ತೆರೆ ಎಳೆದಿದ್ದಾರೆ.
Advertisement
ರಾಶಿ ಖನ್ನಾ ತಮ್ಮ ಬಾಲಿವುಡ್ ಸಿನಿಮಾ ‘ರುದ್ರ’ ಪ್ರಚಾರದ ವೇಳೆ ದಕ್ಷಿಣ ಚಲನಚಿತ್ರೋದ್ಯಮದ ಬಗ್ಗೆ ಅಷ್ಟಾಗಿ ಹೋಗಲಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದರು. ಈ ನಟಿಗೆ ತಮ್ಮ ನೆಲದ ಮೇಲೆ ಗೌರವ ಕಮ್ಮಿಯಾಗಿದೆ ಎಂದು ಟ್ರೋಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಶಿ ಮಾತನಾಡಿದ್ದು, ನಾನು ಎಲ್ಲ ಭಾಷೆಗಳನ್ನು, ಚಿತ್ರೋದ್ಯಮವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗರ್ಲ್ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್
Advertisement
???????????? pic.twitter.com/yQa1nOacEY
— Raashii Khanna (@RaashiiKhanna_) April 6, 2022
Advertisement
ರಾಶಿ ಖನ್ನಾ ತಮ್ಮ ಟ್ವಿಟ್ಟರ್ನಲ್ಲಿ, ದಕ್ಷಿಣ ಸಿನಿಮಾಗಳ ಬಗ್ಗೆ ನನಗೆ ಗೌರವವಿಲ್ಲವೆಂದು ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಲಾಗುತ್ತಿದೆ. ನನ್ನ ಬಗ್ಗೆ ತಪ್ಪುಗ್ರಹಿಕೆಯುಳ್ಳ ವಿಷಯಗಳ ಬಗ್ಗೆ ನಾನು ರೌಂಡ್ ಮಾಡುತ್ತಿದ್ದೇನೆ. ಯಾರೇ ಇದನ್ನು ಮಾಡುತ್ತಿದ್ದರೂ ದಯವಿಟ್ಟು ನಿಲ್ಲಿಸಿ ಎಂದು ನಾನು ವಿನಂತಿಸುತ್ತೇನೆ. ನಾನು ಮಾಡುವ ಪ್ರತಿಯೊಂದು ಭಾಷೆ ಮತ್ತು ಚಿತ್ರದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ ಎಂದು ವಿನಂತಿ ಮಾಡಿಕೊಂಡಿದ್ದಾರೆ.
Advertisement
ದಕ್ಷಿಣ ಇಂಡಸ್ಟ್ರಿ ಬಗ್ಗೆ ರಾಶಿ ಅವರಿಗೆ ಗೌರವ ಇಲ್ಲ ಎಂದು ತೆಲುಗು ಪ್ರೇಕ್ಷಕರಲ್ಲಿ ನೆಗೆಟಿವ್ ಇಮೇಜ್ ಕ್ರಿಯೇಟ್ ಆಗಿತ್ತು. ಆದರೆ ಈ ಗಾಸಿಪ್ಗಳಿಗೆ ರಾಶಿ ತೆರೆಎಳೆದಿದ್ದಾರೆ. ಇದನ್ನೂ ಓದಿ: ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ