ಮೈಸೂರು: ಮೈಸೂರು ಭಾಗದ ಜನರ ಮನಸ್ಸಿನಲ್ಲಿ ಧೃವತಾರೆ ಆಗಿರುವ ದಿವಂಗತ ಆರ್.ಧೃವನಾರಾಯಣ್ (R.Dhruvanarayana) ಸೋಲು ಮತ್ತು ಗೆಲುವು ಎರಡಲ್ಲೂ ದಾಖಲೆ ಬರೆದಿದ್ದಾರೆ.
ಈಗ ರದ್ದಾಗಿರುವ ಸಂತೇಮರಹಳ್ಳಿ ಕ್ಷೇತ್ರದಿಂದ ಆರ್.ಧ್ರುವನಾರಾಯಣ 2004 ರಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಪುತ್ರ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಕೇವಲ ಒಂದೇ ಒಂದು ಮತದ ಅಂತರದಿಂದ ಗೆದ್ದು ದಾಖಲೆ ಮಾಡಿದ್ದರು. ಅಲ್ಲಿಂದ ಅವರು ರಾಜಕಾರಣದಲ್ಲಿ ಹಿಂದಿರುಗಿ ನೋಡಿರಲಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯ ಇದ್ದರು ಒಮ್ಮೆಯೂ ಗೆದ್ದಿಲ್ಲ ಜನತಾ ಪರಿವಾರ – ಜನತಾ ಪರಿವಾರದ ಸೋಲಿನ ಚರಿತ್ರೆ
Advertisement
2008 ರಲ್ಲಿ ಕೊಳ್ಳೇಗಾಲದಿಂದ ಶಾಸಕರಾಗಿದ್ದರು. 2009 ಹಾಗೂ 2014 ರಲ್ಲಿ ಚಾಮರಾಜನಗರದಿಂದ ಸಂಸದರಾಗಿದ್ದರು. ಆದರೆ 2019 ರಲ್ಲಿ ಧ್ರುವನಾರಾಯಣ್, ಶ್ರೀನಿವಾಸಪ್ರಸಾದ್ ಎದುರು ಇಡೀ ದೇಶದಲ್ಲಿಯೇ ಅತ್ಯಂತ ಕಡಿಮೆ ಅಂತರ ಅಂದರೆ 1,817 ಮತಗಳ ಅಂತರದಿಂದ ಸೋತಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನಿಂದ ತಪ್ಪಿಸಿಕೊಂಡಿದ್ದಾರೆ.
Advertisement
Advertisement
Advertisement
ಇದೇ ಕ್ಷೇತ್ರದಲ್ಲಿ ಎ.ಸಿದ್ದರಾಜು 1996, 1998 ರಲ್ಲಿ ಗೆದ್ದು, 1999 ರಲ್ಲಿ ಸೋಲುವ ಮೂಲಕ ಹ್ಯಾಟ್ರಿಕ್‌ನಿಂದ ತಪ್ಪಿಸಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಎಸ್.ಎಂ.ಸಿದ್ದಯ್ಯ ಮೊದಲ ಹ್ಯಾಟ್ರಿಕ್, ವಿ. ಶ್ರೀನಿವಾಸಪ್ರಸಾದ್ ನಂತರ ಹ್ಯಾಟ್ರಿಕ್ ಗೆಲವು ದಾಖಲಿಸಿದವರು. ಶ್ರೀನಿವಾಸಪ್ರಸಾದ್ ಹಾಗೂ ಎಸ್.ಎಂ. ಸಿದ್ದಯ್ಯ (ದ್ವಿಸದಸ್ಯ ಕ್ಷೇತ್ರ ಮೈಸೂರು ಸೇರಿ) ಅವರು ಸತತ ನಾಲ್ಕು ಗೆಲುವು ದಾಖಲಿಸಿದವರು. ಇದನ್ನೂ ಓದಿ: ಇಲ್ಲಿ ಎಲ್ಲಾ ಜಾತಿಗೂ ಗೆಲುವು! ಎಲ್ಲಾ ಜಾತಿಗೂ ಸೋಲು!