– ನಾನು ಅಶೋಕ ಎಂದು ಮಂತ್ರಿ ಮಾಡಿಲ್ಲ
ಹಾಸನ: ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದೇನೆ ಎಂಬ ಕಾರಣಕ್ಕೆ ಮಂತ್ರಿ ಮಾಡಿದ್ದಾರೆ ಎಂದು ಹಾಸನದಲ್ಲಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
Advertisement
ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಅಶೋಕ ಎಂದು ಮಂತ್ರಿ ಮಾಡಿಲ್ಲ. ನಾನು ಈ ಸಮುದಾಯದಿಂದ ಬಂದಿದ್ದೇನೆ ಎಂದು ಮಂತ್ರಿ ಮಾಡಿದ್ದಾರೆ. ಈ ಸಮುದಾಯದಿಂದ ಬಂದಿದಕ್ಕೆ ನನಗೆ ಹೆಮ್ಮೆ ಇದೆ. ಈ ಸಮುದಾಯ ಬೆಳೆದರೆ ನಾವು ಬೆಳೆಯುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಇನ್ನು 20 ವರ್ಷ ನಿರುದ್ಯೋಗಿಗಳು: ಕಟೀಲ್
Advertisement
Advertisement
ಅಧಿಕಾರ ಎಂಬುದು ನೀರಿನ ಮೇಲಿನ ಗುಳ್ಳೆ, ಆಗಿನ್ನೂ ಧರ್ಮಸಿಂಘ್ ಸಿಎಂ. 10 ಹಿಂದೆ ಕಾರ್, 10 ಮುಂದೆ ಕಾರಲ್ಲಿ ಬಂದರು. ಆದರೆ ಹೋಗುವಾಗ ಧರ್ಮಸಿಂಗ್ ಒಬ್ಬರೇ ಹೋದರು. ಹೀಗಾಗಿ ಅಧಿಕಾರ ಶಾಶ್ವತವಲ್ಲ. ನಮ್ಮ ಕೆಲಸಗಳಷ್ಟೇ ಶಾಶ್ವತ. ನಾವೆಲ್ಲ ಒಟ್ಟಿಗೆ ಸಮಾಜವನ್ನು ಕಟ್ಟುವ, ಸಮಾಜ ಮುಖಿಯಾದ ಕೆಲಸ ಮಾಡಬೇಕು. ಆದಿಚುಂಚನಗಿರಿ ಮಠ ವಿದ್ಯಾರ್ಥಿಗಳಿಗೆ ವಿದ್ಯೆ, ಹಾಸ್ಟೆಲ್ ಸೇರಿದಂತೆ ಹಲವು ಸಮಾಜಮುಖಿ ಕೆಲಸ ಮಾಡುತ್ತಿದೆ. ಅವರಿಗೆ ನನ್ನ ಗೌರವ ಸಲ್ಲಿಸುತ್ತೇನೆ ಎಂದು ಸಚಿವ ಅಶೋಕ್ ವೇದಿಕೆಯಲ್ಲಿ ಮಾತನಾಡುತ್ತ ತಮ್ಮ ಅಭಿಪ್ರಾಯ ಹಂಚಿಕೊಂಡರು.