– ಬಿಜೆಪಿ-ಜೆಡಿಎಸ್ ಹಾಲು ಜೇನಿನಂತೆ ಇದ್ದೇವೆ
ಮಂಡ್ಯ: ಡಿಕೆ ಶಿವಕುಮಾರ್ (DK Shivakumar) ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿ ಗತಿಯಿಲ್ಲದೇ ಬಿಜೆಪಿಯಿಂದ ಕರೆದುಕೊಂಡು ‘ಕೈ’ ಅಭ್ಯರ್ಥಿ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ಚನ್ನಪಟ್ಟಣ ಗೆಲುವಿಗೆ ಬಿಜೆಪಿ ಸಪೋರ್ಟ್ ಕಾರಣ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೆದ್ದಿದ್ದೇವೆ ಎಂದು ಕಾಂಗ್ರೆಸ್‌ನವರು ಬೀಗುತ್ತಿದ್ದಾರೆ. ಈ ಗೆಲುವು ಶಾಶ್ವತ ಅಲ್ಲ. ನಾವು 18 ಬೈ ಎಲೆಕ್ಷನ್ ಕ್ಷೇತ್ರದಲ್ಲಿ ಗೆದ್ದವರು. ಬಳಿಕ ನಡೆದ ಜನರಲ್ ಎಲೆಕ್ಷನ್‌ನಲ್ಲಿ ನಾವು ಸೋತಿದ್ದೇವೆ. ಇವರು 3 ಗೆದ್ದೇ ಹೀಗೆ ಮೆರೆಯುತ್ತಿದ್ದಾರೆ. 18 ಬೈ ಎಲೆಕ್ಷನ್ ಗೆದ್ದ ನಾವು ಹೇಗೆ ಮೆರೆಯಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: IPL Mega Auction | 14 ಕೋಟಿಗೆ ಡೆಲ್ಲಿ ಪಾಲಾದ ರಾಹುಲ್ – ಆರ್‌ಸಿಬಿ ಫ್ಯಾನ್ಸ್‌ಗೆ ಭಾರಿ ನಿರಾಸೆ
ಲೋಕಸಭಾ ಎಲೆಕ್ಷನ್‌ನಲ್ಲಿ ಯಾಕೆ ಮಣ್ಣು ಮುಕ್ಕಿದ್ರಿ? ಡಿಕೆಶಿ, ಸಿದ್ದರಾಮಯ್ಯ ಚುನಾವಣೆ ಅಲ್ಲ. ಇದು ಕಂಟ್ರಾಕ್ಟ್ರ‍್ಗಳ, ಹಣದ ಚುನಾವಣಾ ಗೆಲುವು. ನಿಮ್ಮ ಪರಿಶ್ರಮದಿಂದ ಗೆದ್ದಿಲ್ಲ. ಜೆಡಿಎಸ್-ಬಿಜೆಪಿ ಪೂರ್ತಿ ಮನಸ್ಸಿಂದ ಎಲೆಕ್ಷನ್ ಮಾಡಿದ್ದೇವೆ. ಆದ್ರೆ ನಿಖಿಲ್‌ಗೆ ಅದೃಷ್ಟ ಇರಲಿಲ್ಲ. ನಿಖಿಲ್‌ಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಬೆಳಗ್ಗೆ ಹೆಚ್‌ಡಿಕೆ, ನಿಖಿಲ್‌ಗೆ ಕರೆ ಮಾಡಿ ಧೈರ್ಯ ಹೇಳಿದ್ದೀನಿ. ಮುಂಬರುವ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ. ಡಿಕೆ ಸುರೇಶ್ ಸೋಲೋದಕ್ಕೆ ಸಿದ್ದರಾಮಯ್ಯ ಕಾರಣ ಅಲ್ವಾ? ಅದನ್ನ ಡಿಕೆಶಿ ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: IPL 2025 Auction: ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಪಂತ್ ಸೇಲ್ – 27 ಕೋಟಿಗೆ ಲಕ್ನೋ ಪಾಲು
ಡಿಕೆ ಶಿವಕುಮಾರ್ ತಂದಿಕ್ಕುವ ಕೆಲಸವನ್ನ ಮಾಡಬಾರದು. ಕ್ಯಾಂಡಿಡೇಟ್ ಗತಿ ಇಲ್ಲದೆ ಬಿಜೆಪಿಯಿಂದ ಕರೆದುಕೊಂಡು ಹೋಗಿದ್ದೀರಿ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯಾಗಲು ಯಾರು ಇರಲಿಲ್ವಾ? ನಮ್ಮ ಪಾರ್ಟಿಯಿಂದ ತೆಗೆದುಕೊಂಡು ಕ್ಯಾಂಡಿಡೇಟ್ ಮಾಡಿದ್ದೀರಾ. ಇವತ್ತು ನಮಗೆ ಸವಾಲ್ ಹಾಕ್ತೀರಲ್ಲ. ಡಿಕೆ ಶಿವಕುಮಾರ್ ಹೇಳುತ್ತಿರುವುದೆಲ್ಲಾ ಸುಳ್ಳು. ಡಿಕೆಶಿ, ಸಿದ್ದರಾಮಯ್ಯ ಜಗಳವನ್ನು ಮೊದಲು ತೀರ್ಮಾನ ಮಾಡಿಕೊಳ್ಳಲಿ. ಬಿಜೆಪಿ-ಜೆಡಿಎಸ್ ಹಾಲು ಜೇನಿನಂತೆ ಇದ್ದೇವೆ. ಮುಂದೆ ಬರುವ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಬೈ ಎಲೆಕ್ಷನ್‌ನಲ್ಲಿ ಹಿನ್ನಡೆಯಾಗಿದೆ, ಆದರೆ ಅದು ಆಧಾರವಾಗಲ್ಲ. ಸೋತಿದ್ದೇವೆಂದು ನಾವೂ ಮಲಗಲ್ಲ. ಭ್ರಷ್ಟಾಚಾರ ಹಗರಣಗಳೇನಿದೆ ಅದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸೋಲನ್ನು ಗೆಲುವಾಗಿ ಪರಿವರ್ತನೆ ಮಾಡುತ್ತೇವೆ ಎಂದು ಹರಿಹಾಯ್ದರು. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – 26.75 ಕೋಟಿ ರೂ.ಗೆ ಬಿಕರಿಯಾದ ಶ್ರೇಯಸ್ ಅಯ್ಯರ್