-ಡೂಪ್ಲಿಕೇಟ್ ಜಾತಿಗಣತಿ ವರದಿ ಕೊಟ್ಟು, ರಕ್ತ ಕಣ್ಣೀರು ಪಿಕ್ಚರ್ ತೋರಿಸಿದ್ದಾರೆ ಎಂದ ವಿಪಕ್ಷ ನಾಯಕ
ಬೆಂಗಳೂರು: ಅಸಲಿ ಜಾತಿಗಣತಿ ವರದಿ (Caste Census Report) ಸಿಎಂ ಸಿದ್ದರಾಮಯ್ಯನವರ (CM Siddaramaiah) ಮನೆಯಲ್ಲಿದೆ, ಮೂಲ ಪ್ರತಿ ಕಳೆದುಹೋಗಿರುವ ಬಗ್ಗೆ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.ಇದನ್ನೂ ಓದಿ: ರಾಜ್ಯದ 38ನೇ ಡಿಜಿ & ಐಜಿಪಿ ಆಗಿದ್ದ ಓಂ ಪ್ರಕಾಶ್ ಹತ್ಯೆ – ಪತ್ನಿಯಿಂದಲೇ ಕೊಲೆ
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಅಸಲಿ ವರದಿ ಸಿದ್ದರಾಮಯ್ಯನವರ ಮನೆಯಲ್ಲಿದೆ. ಡೂಪ್ಲಿಕೇಟ್ ವರದಿ ವಿಧಾನಸೌಧದಲ್ಲಿದೆ. 2021ರಲ್ಲಿ ಜಯಪ್ರಕಾಶ್ ಹೆಗ್ಡೆಯವರೇ ಜಾತಿ ಜನಗಣತಿ ಮೂಲ ವರದಿ ಕಾಣೆಯಾಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಈಗ ಕೊಟ್ಟಿರುವುದು ಯಾವುದು? ಅಸಲಿನಾ? ನಕಲಿನಾ? ಡೂಪ್ಲಿಕೇಟ್ ಜಾತಿ ಜನಗಣತಿ ವರದಿ ಕೊಟ್ಟು, ರಕ್ತ ಕಣ್ಣೀರು ಪಿಕ್ಚರ್ ತೋರಿಸಲಾಗಿದೆ. ಜಾತಿ ಜನಗಣತಿಯ ಒರಿಜಿನಲ್ ಪ್ರತಿ ಸಿದ್ದರಾಮಯ್ಯ ಮನೆಯಲ್ಲಿದೆ. ಈಗ ಮಂಡಿಸಿರೋದು ಡೂಪ್ಲಿಕೇಟ್ ವರದಿ. ಈಗ ಮೂಲ ಪ್ರತಿ ಸಿಕ್ಕಿಲ್ಲ ಎಂದು ಸರ್ಕಾರ ಅದರ ಬಗ್ಗೆ ತನಿಖೆ ಮಾಡಿಸಲಿ. ಲೋಕಾಯುಕ್ತ ಅವರಿಗೆ ಕೊಟ್ಟರೆ ಮುಚ್ಚಿ ಹಾಕುತ್ತಾರೆ. ಮೂಲ ಹಸ್ತ ಪ್ರತಿ ನಾಪತ್ತೆ ಪ್ರಕರಣ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದರು.
ಇದು ತಾವೇ ಕೂತು ಮಾಡಿರುವ ಸಮೀಕ್ಷೆ. ಸಮೀಕ್ಷೆ ಯರ‍್ಯಾರು ಮಾಡಿದ್ದಾರೆ ಹಾಗೂ ಯಾವ ಶಿಕ್ಷಕರು ಸಮೀಕ್ಷೆಗೆ ಹೋಗಿದ್ದರು ಎಂದು ಅವರ ಹೆಸರು ಕೊಡಲಿ ಎಂದು ಒತ್ತಾಯಿಸಿದರು. ಇನ್ನೂ ಇದು ಡೂಪ್ಲಿಕೇಟ್ ವರದಿಯಾಗಿದ್ದು, ಇದು 169 ಕೋಟಿ ರೂ. ಗುಳುಂ ಮಾಡಿರುವ ದೊಡ್ಡ ಹಗರಣವಾಗಿದೆ. ನಮ್ಮ ಸರ್ಕಾರ ಬಂದಾಗ ಈ ಹಗರಣದ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಜಾತಿಗಣತಿಯಿಂದ ಸಬ್ ಕಾ ವಿಭಜನ್, ಸಬ್ ಕಾ ಶೋಷಣ್ – ವಿಶೇಷ ಅಧಿವೇಶನ ಕರೆದು ಸರ್ಕಾರ ಚರ್ಚಿಸಲಿ: ಸುನಿಲ್ ಕುಮಾರ್