DavanagereDistrictsKarnatakaLatestMain Post

ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆ ನಡೆದರೂ ಅದಕ್ಕೆ ಕಾಂಗ್ರೆಸ್ ನೇರ ಹೊಣೆ: ಅಶೋಕ್

-ಕಾಂಗ್ರೆಸ್‍ನವರು ಪಾಕಿಸ್ತಾನ, ಅಫ್ಘಾನಿಸ್ತಾನದ ಕಾನೂನು ನಂಬ್ತಾರೆ

ದಾವಣಗೆರೆ: ರಾಜ್ಯದಲ್ಲಿ ಎಲ್ಲಿಯೇ ಕೋಮು ಗಲಭೆಗಳು ನಡೆದರೂ, ಇದರ ಹಿಂದೆ ನೇರವಾಗಿ ಕಾಂಗ್ರೆಸ್ ಕೈವಾಡ ಇರುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪ ಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಕಿಳುಮಟ್ಟದ ರಾಜಕೀಯ ಮಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹುಬ್ಬಳ್ಳಿ, ಡಿಜೆಹಳ್ಳಿ, ಕೆಜೆಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದು ಸ್ಪಷ್ಟವಾಗಿದೆ. ಹುಬ್ಬಳ್ಳಿ ಕೋಮು ಗಲಭೆಯಲ್ಲಿ ಅಲ್ತಾಫ್ ಹಳ್ಳೂರ ಪ್ರಮುಖ ಆರೋಪಿ. ಆದರೆ ಕಾಂಗ್ರೆಸ್‌ ಇವರನ್ನು ವೇದಿಕೆ ಮೇಲೆ ಕುಳಿಸುತ್ತಾರೆ. ಇವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರೆಲ್ಲವೋ ಎಂಬುದನ್ನು ಸ್ಪಷ್ಟ ಪಡಿಸಲಿ. ಬೇಕಿದ್ದರೇ ನಾವು ಅದನ್ನು ಸಾಬೀತು ಪಡೆಸುತ್ತೇವೆ ಎಂದರು.

ಈ ರೀತಿ ಗಲಭೆಗಳನ್ನು ಮಾಡುವುದರಿಂದ ರಾಜ್ಯದಲ್ಲಿ ಬಿಜೆಪಿಗೆ ಕೆಟ್ಟ ಹೆಸರು ತರುವ ಹುನ್ನಾರ ನಡೆಯುತ್ತಿದೆ. ಗಲಾಟೆ ಮಾಡಿದವರನ್ನು ಅಮಾಯಕರು ಎನ್ನುತ್ತಾರೆ ಕಾಂಗ್ರೆಸ್‌ನವರು. ಕಾಂಗ್ರೆಸ್‍ನವರು ನಮ್ಮ ದೇಶದ ಕಾನೂನು ನಂಬಿಲ್ಲ. ಅವರು ಪಾಕಿಸ್ತಾನ, ಅಫ್ಘಾನಿಸ್ತಾನದ ಕಾನೂನು ನಂಬುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೆಂಪಣ್ಣ ಕನಕಪುರದ ಕಾಂಗ್ರೆಸ್ ಏಜೆಂಟ್, ಕಾಂಗ್ರೆಸ್ ದಾಸ: ಈಶ್ವರಪ್ಪ

ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆ ಆಗುತ್ತದೆ. ಹಿಂದೂ ದೇವತೆಗಳ ಮೇಲೆ ಸಾಕಷ್ಟು ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆ. ಆದಕ್ಕೆ ಯಾರು ಕೂಡ ಕಾನೂನು ಕೈಗೆ ತೆಗೆದುಕೊಂಡಿಲ್ಲ. ಕಾನೂನು ಕೈಗೆತ್ತಿಕೊಳ್ಳುವವರಿಗೆ ಕಾನೂನಿನ ಮೇಲೆ ಗೌರವ ಇಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಇಂದು ಸಂಜೆಯೊಳಗೆ ಶರಣಾಗಿ – ನಾಪತ್ತೆಯಾಗಿರುವ 8 ಹುಬ್ಬಳ್ಳಿ ಪುಂಡರಿಗೆ ಡೆಡ್‌ಲೈನ್‌

ಸ್ವಾಮೀಜಿ ಆದವರು ಯಾವುದೇ ಒಂದು ಪಕ್ಷದ ಎಜೆಂಟ್ ರೀತಿಯಲ್ಲಿ ಮಾತಾಡುವುದು ಸರಿಯಲ್ಲ. ಈಗ ನಾವು ಕಾಗಿನೆಲೆ, ಪೇಜಾವರ ಸ್ವಾಮೀಜಿಗಳಿಗೆ ಸರ್ಕಾರ ಅನುದಾನ ನೀಡಲಾಗಿದೆ. ಯಾರಿಗೂ ಇಲ್ಲದ ಕಮಿಷನ್ ಕಾಟ ಇವರೊಬ್ಬರಿಗೆ ಮಾತ್ರ ಏಕೆ. ಕನಿಷ್ಟ ಯಾರಿಗೆ ಕೊಟ್ಟಿದ್ದೀರಾ ಎನ್ನುವುದನ್ನಾದರೂ ಹೇಳಿ. ಈ ರೀತಿ ಸ್ವಾಮೀಜಿಗಳು ರಾಜಕೀಯ ಭಾಷಣ ಮಾಡುವುದು ಸರಿಯಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published.

Back to top button