DistrictsKarnatakaLatestMain PostMandya

ಚುನಾವಣಾ ಗಿಮಿಕ್‍ಗಾಗಿ ರಥಯಾತ್ರೆಗಳು ನಡೆಯುತ್ತಿವೆ : ಆರ್.ಅಶೋಕ್

ಮಂಡ್ಯ: ಚುನಾವಣಾ ಗಿಮಿಕ್‍ಗಾಗಿ ಈ ತರಹದ ರಥಯಾತ್ರೆಗಳು ನಡೆಯುತ್ತಿವೆ ಎಂದು ಜೆಡಿಎಸ್‍ನ ಪಂಚರತ್ನ ರಥಯಾತ್ರೆಗೆ, ಕಾಂಗ್ರೆಸ್‍ನ (Congress) ಭಾರತ್ ಜೋಡೋಗೆ ಯಾತ್ರೆಯ ಕುರಿತು ಸಚಿವ ಆರ್.ಅಶೋಕ್ (R Ashok) ವ್ಯಂಗ್ಯವಾಡಿದರು.

ಮಂಡ್ಯದಲ್ಲಿ (Mandya) ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನ ರಥಯಾತ್ರೆ ವರ್ಕೌಟ್ ಆಗೋಲ್ಲ, ಜನ ಬುದ್ಧಿವಂತರಾಗಿದ್ದಾರೆ. ಚುನಾವಣಾ ಗಿಮಿಕ್‍ಗಾಗಿ ಈ ತರಹದ ರಥಯಾತ್ರೆಗಳು ನಡೆಯುತ್ತಿವೆ ಅಷ್ಟೇ. ಇಂತಹ ಯಾತ್ರೆಗಳು ಜನರ ಮೇಲೆ ಯಾವುದೇ ಇಂಪ್ಯಾಕ್ಟ್ ಮಾಡುವುದಿಲ್ಲ ಎಂದು ಜೆಡಿಎಸ್‍ನ (JDS) ಪಂಚರತ್ನ ರಥಯಾತ್ರೆ ಹಾಗೂ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಕುರಿತು ಟೀಕಿಸಿದರು. ಇದನ್ನೂ ಓದಿ: ಪುನೀತ್ ಇಲ್ಲ ಅನ್ನೋದು ನೋವಿದೆ, ರಾಜ್ ಕುಟುಂಬಕ್ಕೆ 2 ಕರ್ನಾಟಕ ರತ್ನ ಸಿಗ್ತಿರೋದು ಖುಷಿ ತಂದಿದೆ: ಮುನಿರತ್ನ

ದೇಶದಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ಪೆನಾಯಿಲ್ ಹಾಕಿ ತೊಳೆದು ಬಿಟ್ಟಿದ್ದಾರೆ. ಅವರು ರಾಜ್ಯದಲ್ಲೂ ಅಧಿಕಾರಕ್ಕೆ ಬರಲ್ಲ. ಇನ್ನೂ ಮುಂದಿನ ದಿನದಲ್ಲಿ ಮಂಡ್ಯದ 7 ಕ್ಷೇತ್ರಗಳಲ್ಲಿಯೂ ಕಮಲ ಅರಳುತ್ತೆಂಬ ವಿಶ್ವಾಸವಿದೆ. ಮುಂಬರುವ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ನಾವು ಗೆಲುವು ಪಡೆಯುತ್ತೇವೆ. ರಾಜ್ಯ ಹಾಗೂ ಕೇಂದ್ರದಲ್ಲಿಯೂ ಒಂದೇ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಪ್ರಚಂಡ ಬಹುಮತದಿಂದ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾಲ್‌ನಲ್ಲಿ ಚಾಕಲೇಟ್ ಕದ್ದ ವೀಡಿಯೋ ವೈರಲ್ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

Live Tv

Leave a Reply

Your email address will not be published. Required fields are marked *

Back to top button