ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರ ವಿರುದ್ಧ ಕಾಂಗ್ರೆಸ್ (Congress) ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಅಶೋಕ್ (R.Ashok) ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ವಿರುದ್ಧ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಕೋರ್ಟ್ ಈ ವಿಚಾರವಾಗಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಚುನಾವಣೆ ಆದ ಕೂಡಲೇ ನೋಟಿಸ್ ಕೊಟ್ಟಿದ್ದಾರೆ. ಇದು ಪಕ್ಕಾ ದ್ವೇಷದ ರಾಜಕಾರಣ. ಇದಕ್ಕೆ ಪೂರಕವಾಗಿ, ನಮ್ಮನ್ನ ಕೋರ್ಟ್‍ಗೆ ಕರೆಸಿದ್ರಿ ಎಂದು ಡಿ.ಕೆ ಶಿವಕುಮಾರ್ (D.K Shivakumar) ಮಾತಾಡಿದ್ದಾರೆ. ಇಂತಹ ದ್ವೇಷದ ರಾಜಕಾರಣ ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.
Advertisement
ತಮಿಳುನಾಡಿನಲ್ಲಿ ಇಂತಹ ದ್ವೇಷದ ರಾಜಕೀಯ ಇತ್ತು. ಈಗ ಕರ್ನಾಟಕಕ್ಕೂ ಇದು ಬಂದಿದೆ. ಪರಮೇಶ್ವರ್ (G.Parameshwar) ಕೂಡಾ ಬಿಎಸ್‍ವೈ ವಿರುದ್ಧ ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಿದ್ದರು. ಚುನಾವಣೆ ಆದ ಮೇಲೆ ಇವರು ನೊಟೀಸ್ ಕೊಟ್ಟು ದ್ವೇಷದ ರಾಜಕೀಯ ಮಾಡ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ಹೆಣ್ಣು-ಹೆಂಡದ ನಶೆ ಹೆಚ್ಚಾಗಿತ್ತು, ಸಂಸ್ಕಾರ ಇರಲಿಲ್ಲ: ಮೊದಲ ಗುರು ಅಡ್ಡಂಡ ಕಾರ್ಯಪ್ಪ
Advertisement
Advertisement
ಸಿಎಂ ಬಿಟ್ಟರೆ ಗೃಹಮಂತ್ರಿ ನಂತರದ ಸ್ಥಾನದಲ್ಲಿ ಇರೋದು, ಅವರೇ ಆಕೆ ಮಾನಸಿಕ ಅಸ್ವಸ್ಥೆ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದರು. ಈಗ ಯಾಕೆ ಉಲ್ಟಾ ಹೊಡೆಯುತ್ತಿದ್ದಾರೆ? ಅವತ್ತು ಹೇಳುವಾಗ ಜ್ಞಾನ ಇರಲಿಲ್ಲವಾ? ಇದೇ ಇವತ್ತು ಚರ್ಚೆ ಆಗ್ತಿರೋದು. 4 ತಿಂಗಳು ಯಾಕೆ ಕಾಯ್ತಾ ಇದ್ರಿ? ಯಡಿಯೂರಪ್ಪ ಇಲ್ಲೇ ಇದ್ದರೂ ಯಾಕೆ ವಿಚಾರಣೆ ಮಾಡಿಲ್ಲ? ವಾಯ್ಸ್ ಸ್ಯಾಂಪಲ್ ಕೊಟ್ಟು ಬಂದರು. ಎಲ್ಲಿ ತಪ್ಪಿಸಿಕೊಂಡು ಹೋಗಿರಲಿಲ್ಲ. ಈಗ ಯಾಕೆ ಬಂಧನ ಮಾಡೋಕೆ ವಾರೆಂಟ್ ಹೊರಡಿಸಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
Advertisement
ನಮ್ಮ ಮೇಲೆ 40% ಆರೋಪ ಮಾಡಿದ್ದ, ನೀವು ಅದನ್ನ ಸಾಬೀತು ಮಾಡಿ. ಅದನ್ನು ಸಾಬೀತು ಮಾಡಬೇಕು ಎಂದು ನಾವು ಕೋರ್ಟ್ ಹೋಗಿರೋದು. ಯತ್ನಾಳ್ 2500 ಕೋಟಿ ಆರೋಪ ಮಾಡಿದ್ರೆ ಅವರಿಗೆ ನೋಟಿಸ್ ಕೊಟ್ಟು ಕರೆಸಿ. ಅವರು ಆ ರೀತಿ ಹೇಳಿದ್ರೋ ಇಲ್ಲವೋ ಗೊತ್ತಾಗುತ್ತದೆ ಎಂದು ಕಾಂಗ್ರೆಸ್‍ಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ