ಬೆಂಗಳೂರು: ಮೀಸಲಾತಿ (Reservation) ಕೊಡೋದಕ್ಕೆ ಗಂಡೆದೆ ಬೇಕು. ನಮ್ಮ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಆ ಗಂಡೆದೆ ಇದೆ ಎಂದು ಸಚಿವ ಆರ್.ಅಶೋಕ್ (R Ashok), ಬೊಮ್ಮಾಯಿ ಅವರ ಗುಣಗಾನ ಮಾಡಿದ್ದಾರೆ.
ರಾಜ್ಯದ ಎಸ್.ಸಿ/ಎಸ್.ಟಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಎಸ್.ಸಿ/ಎಸ್.ಟಿ ಸಮುದಾಯದವರಿಗೆ ಮನೆ ನಿರ್ಮಿಸಲು ₹2 ಲಕ್ಷ ಹಾಗೂ ಭೂಮಿ ಖರೀದಿಸಲು ₹20 ಲಕ್ಷ ಸಹಾಯಧನ ನೀಡುತ್ತಿದೆ. ರಾಜ್ಯದ ಬಡವರು ತಮ್ಮ ಮನೆ ನಿರ್ಮಿಸುವ ಕನಸನ್ನು ನನಸಾಗಿಸಲು 5 ಲಕ್ಷ ಮನೆಗಳನ್ನು ಸಹ ಮಂಜೂರು ಮಾಡಲಾಗಿದೆ. pic.twitter.com/ojyEZwecKK
— Basavaraj S Bommai (@BSBommai) October 22, 2022
Advertisement
ಇಲ್ಲಿ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡೆದೆ ಇರೋದಕ್ಕೆ ಮೀಸಲಾತಿ (Reservation) ಕೊಟ್ಟಿದ್ದಾರೆ. ಯಾರೂ ಮಾಡದ ಕೆಲಸವನ್ನು ಬೊಮ್ಮಾಯಿ ಮಾಡಿದ್ದಾರೆ. ಅವರು ಚಾಣಕ್ಯ ಇದ್ದ ಹಾಗೆ. ಮೀಸಲಾತಿ ಜೇನುಗೂಡು ಎಂದು ಬಹಳ ಜನ ಹಿಂಜರಿಯುತ್ತಿದ್ದರು. ಆದರೆ ಬೊಮ್ಮಾಯಿ ಅವರು ಜೇನುಗೂಡಿಗೆ ಕೈಹಾಕಿದರು. ಜೇನುಗೂಡಿಗೆ ಕಲ್ಲು ಹೊಡೆದು ಎಸ್ಸಿ-ಎಸ್ಟಿ ಸಮುದಾಯದವರಿಗೆ (SCST Reservation) ಮೀಸಲಾತಿಯ ಜೇನು ಕೊಟ್ಟಿದ್ದಾರೆ ಎಂದು ಹೊಗಳಿದ್ದಾರೆ.
Advertisement
Advertisement
ನಮ್ಮ ಮುಖ್ಯಮಂತ್ರಿಗಳು ಚಾಣಕ್ಯ ವಿದ್ಯೆ ಕಲಿತವರು. ಚಾಣಕ್ಯ ತನದಿಂದ ಜೇನುಗೂಡಿಗೆ ಕಲ್ಲು ಹೊಡೆದಂತೆ ಮೀಸಲಾತಿ ಹೆಚ್ಚಿಸುವ ದಿಟ್ಟ ನಿರ್ಧಾರ ತಗೊಂಡಿದ್ದಾರೆ. ಹಿಂದೆ ಬಂದ ಸರ್ಕಾರಗಳು ಯಾರು ಕೂಡ ಮೀಸಲಾತಿಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಒಬ್ಬರು ಏನು ಬ್ರದರ್ ಅಂತಾರೆ, ಇನ್ನೊಬ್ಬರು ನೋಡಿ ಜೇನುಗೂಡಿಗೆ ಕಲ್ಲು ಹೊಡೆದಿದ್ದೀರಿ ನಿಮಗೆ ಮುಂದೆ ಸರಿಯಾಗಿ ಆಗುತ್ತೆ ಅಂದಿದ್ರು. ಆದರೆ ಇವತ್ತು ಏನು ಆಗೇ ಇಲ್ಲ ನೋಡಿ ಎಂದು ಟಾಂಗ್ ನೀಡಿದ್ದಾರೆ.
Advertisement
ಗಂಡೆದೆ ಇರೋರು ಮೀಸಲಾತಿ ಕೊಡೋಕೆ ಸಾಧ್ಯ. ಆ ಗಂಡೆದೆ ತೋರಿಸಿದವರು ಬೊಮ್ಮಾಯಿ ಮಾತ್ರ. ಏನಾದರೂ ಮಾಡೇ ಮಾಡ್ತೀನಿ ಅನ್ನೋರು ಇತಿಹಾಸ ಸೃಷ್ಟಿಸೋರು. ಏನು ಮಾಡೋಕೆ ಆಗಲ್ಲ ಅನ್ನೋರು ಮಣ್ಣು ಸೇರೋರು. ಈಗ ಇತಿಹಾಸ ಸೃಷ್ಟಿಸಿದ್ದು ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ. ಅವರು ಮಾನಸಿಕವಾಗಿ ಪ್ರಿಪೇರ್ ಆಗಿ ಇದನ್ನು ಮಾಡಿದ್ರು. ದೀಪಾವಳಿಗೆ (Diwali) ಗೆಜೆಟ್ ಕಾಪಿ ಕೊಡಬೇಕು ಅಂತಾ ಗೆಜೆಟ್ ತಂದಿದ್ದೇವೆ ಎಂದು ಹೇಳಿದ್ದಾರೆ.