ಬೆಂಗಳೂರು: ಆಲಮಟ್ಟಿ ಜಲಾಶಯದಿಂದ (Almatti Dam) ತೆಲಂಗಾಣಕ್ಕೆ (Telangana) ರಾಜ್ಯ ಸರ್ಕಾರ ನೀರು ಬಿಟ್ಟಿದೆ. ನೆಲದ ಜಲದ ವಿಚಾರ ಬಂದಾಗ ಕರ್ನಾಟಕದ ಜನತೆಗೆ ಕಾಂಗ್ರೆಸ್(Congress) ದ್ರೋಹ ಬಗೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ತೆಲಂಗಾಣ ಕಾಂಗ್ರೆಸ್ ಸರ್ಕಾರವನ್ನು ತೃಪ್ತಿಪಡಿಸಲು ಸ್ವಾರ್ಥಕ್ಕಾಗಿ ಡಿಕೆಶಿ (D.K Shivakumar) ನೀರು ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಬರದ ಛಾಯೆ ಶುರುವಾಗಿದೆ. ಬರಗಾಲ ಇದೆ ಅಂತಾ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಭೆ ಮಾಡ್ತಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಡಿಕೆಶಿ ನೀರು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗೋದಲ್ಲಿ ನಿಗೂಢ `ಅಳುವ ರೋಗ’ಕ್ಕೆ 50ಕ್ಕೂ ಹೆಚ್ಚು ಮಂದಿ ಬಲಿ – 400 ಮಂದಿಗೆ ಸೋಂಕು
ನೀರು ಬಿಟ್ಟ ವಿಚಾರವನ್ನು ಎಂ.ಬಿ ಪಾಟೀಲ್ ಅವರ ಬಳಿ ಕೇಳಿದ್ರೆ ನನಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಹೆಚ್ಚು ನೀರಿದ್ದು, ಅದನ್ನು ಬಿಟ್ಟರೆ ಏನು ತಪ್ಪು ಎಂದು ಡಿಕೆಶಿ ಹೇಳ್ತಾರೆ. ನೀರಿನ ವಿಚಾರವಾಗಿ ಅವರ ಸ್ನೇಹಿತರಾದ ತಮಿಳುನಾಡಿನವರನ್ನು ಡಿಕೆಶಿ ಕೇಳಲಿ. ಬರಗಾಲದಲ್ಲಿ ರಾಜ್ಯದ ಜನರಿಗೆ ಅಪಾಯವಾದರೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.
ಇ-ಖಾತಾದ ವಿಚಾರವಾಗಿ ಪ್ರತಿಕ್ರಿಯಿಸಿ, ಅದರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಒಂದು ಇ ಖಾತಾಗೆ 12 ಸಾವಿರ ರೂ. ಕೊಡಬೇಕಾಗಿದೆ. ಬೆಂಗಳೂರು ಪಾರ್ಕ್‌ಗಳಲ್ಲಿ ನಂಬರ್ ಹಾಕಲಾಗಿದೆ. ಇದು ಏಜೆಂಟ್‌ಗಳ ಕಾರುಬಾರು. ಇವರ ಮೇಲೆ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನರ ಮೇಲೆ ಸರ್ಕಾರ ಎಲ್ಲಾ ತೆರಿಗೆ ಹಾಕ್ತಿದೆ. ಇಡೀ ರಾಜ್ಯದ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಭಿಕ್ಷುಕ ಸರ್ಕಾರ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಉಡುಪಿ| ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಯತ್ನ ಕೇಸ್ – ಇಬ್ಬರ ಬಂಧನ