ಬೆಂಗಳೂರು: ನಗರದ ಉತ್ತರ ಕ್ಷೇತ್ರದಿಂದ (Bengaluru North) ಶೋಭಾ ಕರಂದ್ಲಾಜೆ (Shobha Karandlaje) ಸ್ಪರ್ಧೆಗೆ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ನಾವು ಹೇಳಿದ್ದು ನಿಜ. ಅವರನ್ನ ಭೇಟಿಯಾಗಿ, ನೀವೇ ನಿಂತುಕೊಳ್ಳಬೇಕು ಎಂದು ಕೇಳಿದ್ದೇವೆ. ಈಗಲೂ ನಾವು ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದೇವೆ. ಉಳಿದದ್ದು ಕೇಂದ್ರ ಹಾಗೂ ದೇವರಿಗೆ ಬಿಟ್ಟಿದ್ದು. ಈಗಲೂ ನಾವು ಸದಾನಂದಗೌಡರಿಗೆ ಟಿಕೆಟ್ ಕೊಡಬೇಕು ಎಂದು ಹೇಳಿದ್ದೇವೆ. ನಾವು ಕೇಂದ್ರದ ನಾಯಕರ ಜೊತೆ ಮಾತಾಡ್ತೀವಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವರು ಕೋಮುಭಾವನೆ ಸೃಷ್ಟಿಸೋಕೆ ಸಿಎಎ ವಿರೋಧ ಮಾಡ್ತಿದ್ದಾರೆ: ಆರ್.ಅಶೋಕ್
Advertisement
Advertisement
ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಬರುವ ವಿಚಾರಕ್ಕೆ ಸ್ಥಳೀಯ ಶಾಸಕರ ವಿರೋಧ ಇದೆ. ಹೊರಗಿನವರಿಗೆ ಟಿಕೆಟ್ ಕೊಡುವುದು ಬೇಡ ಎಂದು ಬೆಂಗಳೂರು ಉತ್ತರದ ಶಾಸಕರು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ನಾಯಕರಿಗೆ ಅದನ್ನು ಹೇಳ್ತೀವಿ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ.
Advertisement
Advertisement
ಸೋಮಣ್ಣ, ರೇಣುಕಾಚಾರ್ಯ, ಪ್ರತಾಪ್ ಸಿಂಹ ಹೇಳಿಕೆ ವಿಚಾರ ಮತ್ತು ಟಿಕೆಟ್ ತಪ್ಪಿದರೆ ಬಿಜೆಪಿಗೆ ಒಳ ಏಟು ಆಗುತ್ತಾ? ಎಂಬ ಪ್ರಶ್ನೆಗೆ, ಮೋದಿ ಅಲೆಯಲ್ಲಿ, ಬಿಜೆಪಿ ಅಲೆಯಲ್ಲಿ ಯಾವುದೇ ಒಳ ಏಟು ವರ್ಕ್ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಿಎಎ ಜಾರಿ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ