ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಹೂಡಿದ್ದಾರೆ.
ಸರ್ಕಾರಿ ಶಾಲೆ, ಪ್ರೈವೆಟ್ ಶಾಲೆ ಎಂಬ ಮೇಲು ಕೀಳು ಇಲ್ಲ. ಸಾಧನೆ ವಿಷಯ ಬಂದರೆ ಬಡವರ ಮಕ್ಕಳು ಶ್ರೀಮಂತರ ಮಕ್ಕಳೆಂಬುವುದಿಲ್ಲ ಎಂಬುವುದಕ್ಕೆ ತಮ್ಮ ಜೀವನವನ್ನು ಉದಾಹರಣೆ ಕೊಟ್ಟರು. ಸರ್ಕಾರಿ ಶಾಲೆಯಲ್ಲಿ ಕಲಿತ ನಾನು ಸಚಿವನಾದೆ. ಐಎಎಸ್, ಐಪಿಎಸ್‍ಗಳು ನನ್ನ ಮಾತನ್ನು ಕೇಳುತ್ತಿದ್ದಾರೆ ಎಂದು ಹಾಸ್ಟೆಲ್ ಮಕ್ಕಳಿಗೆ ಅಶೋಕ್ ಅವರು ಜೀವನ ಪಾಠ ಮಾಡಿದರು.
ಫೈವ್ ಸ್ಟಾರ್ ಹೋಟೆಲ್‍ನ ಅಡುಗೆ ಭಟ್ಟನಿಗೆ ನಾಲ್ಕುವರೆ ಲಕ್ಷ ರೂಪಾಯಿ ಸಂಬಳ ಇದೆ. ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ. ನಾವು ಮಾಡುವ ಉದ್ಯೋಗದಲ್ಲಿ ಉತ್ತುಂಗಕ್ಕೆ ಹೋಗಬೇಕು. ಟಾಪ್ ಮೋಸ್ಟ್ ಕೆಲಸಕ್ಕೆ ಕೈತುಂಬ ಸಂಬಳ, ಗೌರವ ಸಿಗುತ್ತದೆ ಎಂದರು. ಇದನ್ನೂ ಓದಿ: ಕೂಚ್ ಬೆಹಾರ್ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವವರ ಮೊಣಕಾಲು ಮುರಿಯುತ್ತೇವೆ: ಉದಯನ್ ಗುಹಾ
ಕಲಾವಿದನ ಕಲಾಕೃತಿ, ಟೀ ಮಾರುತ್ತಿದ್ದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿದ್ದು, ಬೆಸ್ತರ ಮನೆಯ ಮಗ ಅಬ್ದುಲ್ ಕಲಾಂ ಎಂಬ ರಾಷ್ಟ್ರಪತಿ ಆಗಿದ್ದು, ಪದ್ಮನಾಭ ನಗರದ ಸೊಪ್ಪು ಮಾರುವ ವ್ಯಕ್ತಿಯ ಮಗಳು ರ‍್ಯಾಂಕ್ ಪಡೆದ ಸಾಹಸ ಕಥೆಯನ್ನು ವಸತಿ ಶಾಲೆಯ ಮಕ್ಕಳ ಮುಂದೆ ಹೇಳಿ ಪ್ರೋತ್ಸಾಹ ನೀಡಿದರು.
ಇದೇ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕೊರೊನಾ ನಂತರ ಮತ್ತೆ ಗ್ರಾಮ ವಾಸ್ತವ್ಯ ಲಾಂಚ್ ಆಗಿದೆ. ಉಡುಪಿಯಲ್ಲಿ ಸುಮಾರು 13,500 ಕಡತ ವಿಲೇವಾರಿ ಗ್ರಾಮ ವಾಸ್ತವ್ಯ ಸಂದರ್ಭ ಮಾಡಲಾಯಿತು. ಗ್ರಾಮವಾಸ್ತವ್ಯ ಅಂದರೆ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವುದು. ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಬಗೆಹರಿಸುವುದು. ಇದು ನಾಮ್ ಕೆ ವಾಸ್ತೇ ವಾಸ್ತವ್ಯ ಅಲ್ಲ. ರಾಜಕೀಯ ಜಂಜಾಟಗಳ ನಡುವೆ ಗ್ರಾಮವಾಸ್ತವ್ಯ ಜೀವನ ಪ್ರೀತಿ ಕೊಡುತ್ತದೆ ಎಂದರು
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರ ಶೈಕ್ಷಣಿಕ ಸಾಧನೆಗೆ ಸಚಿವರು ಸನ್ಮಾನಿಸಿದರು. ವಿದ್ಯಾರ್ಥಿನಿ ಸಚಿವರ ಕಾಲಿಗೆ ಬಿದ್ದಾಗ ಸಚಿವರೇ ವಿದ್ಯಾರ್ಥಿನಿ ಕಾಲಿಗೆ ನಮಸ್ಕರಿಸಿದರು ದೊಡ್ಡತನ ಮೆರೆದರು. ಇದನ್ನೂ ಓದಿ: ದೇಶದ ಮೊದಲ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳು ಮೋದಿ ಸರ್ಕಾರದಿಂದ ಪೂರ್ಣ: ಅಮಿತ್ ಶಾ