Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪೆನ್‌ಡ್ರೈವ್ ನನ್ನ ಬಳಿ ಇದೆ – ಸದನದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಹೊಸ ಬಾಂಬ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪೆನ್‌ಡ್ರೈವ್ ನನ್ನ ಬಳಿ ಇದೆ – ಸದನದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಹೊಸ ಬಾಂಬ್‌

Bengaluru City

ಪೆನ್‌ಡ್ರೈವ್ ನನ್ನ ಬಳಿ ಇದೆ – ಸದನದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಹೊಸ ಬಾಂಬ್‌

Public TV
Last updated: February 3, 2026 6:29 pm
Public TV
Share
3 Min Read
R Ashoka 1
SHARE

– ಸಚಿವ ಆರ್.ಬಿ ತಿಮ್ಮಾಪೂರ ತಲೆದಂಡಕ್ಕೆ ಬಿಜೆಪಿ ಬಿಗಿ ಪಟ್ಟು

ಬೆಂಗಳೂರು: ಅಬಕಾರಿ ಇಲಾಖೆಯ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಸಚಿವ ಆರ್.ಬಿ ತಿಮ್ಮಾಪೂರ (RB Timmapur) ತಕೆದಂಡಕ್ಕೆ ಬಿಜೆಪಿ ಪಟ್ಟು ಹಿಡಿದಿದೆ.

ವಿಧಾನಸಭೆಯಲ್ಲಿ ಅಬಕಾರಿ ಅಕ್ರಮ ಆರೋಪ ಕುರಿತು ನಿಯಮ 69 ರಡಿ ಚರ್ಚಿಸಿದ ಆರ್. ಅಶೋಕ್ (R Ashok), ಆರ್.ಬಿ ತಿಮ್ಮಾಪೂರ ರಾಜೀನಾಮೆ ಕೊಡಬೇಕು. ಭ್ರಷ್ಟಾಚಾರ ಪ್ರಕರಣದ (Corruption Case) ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ರು. ಈ ವೇಳೆ ಕಲಾಪದಲ್ಲಿ ಆಡಳಿತ ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ಇದನ್ನೂ ಓದಿ: ವಿಬಿ-ಜಿರಾಮ್‌ಜಿ ಕಾಯ್ದೆ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ – ಸಿಎಂ ಹೇಳಿಕೆಗೆ ಸದನದಲ್ಲಿ ಕೋಲಾಹಲ

Assembly Session

ಸದನದಲ್ಲಿ ಭಾರೀ ಕೋಲಾಹಲ ಉಂಟಾಯಿತು. ಮೊದಲು ಮಾತಾಡಿದ ಅಶೋಕ್, ಅಬಕಾರಿ ಅಕ್ರಮ ಸಂಬಂಧ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಸನ್ನದು ಬೇಕಾದ್ರೆ ಸಚಿವರು ಅಥವಾ ಅವರ ಮಗನನ್ನ ಸಂಪರ್ಕ ಮಾಡಬೇಕು ಅಂತ ಇದೆ. ಈ ಆಡಿಯೋ ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಆಗಿದೆ. ಆಡಿಯೋ ಇರುವ ಪೆನ್‌ಡ್ರೈವ್ ನನ್ನ ಬಳಿ ಇದೆ ಎಂದು ಆರ್.ಅಶೋಕ್ ಸದನದಲ್ಲಿ ಪೆನ್‌ಡ್ರೈವ್ ಪ್ರದರ್ಶಿಸಿದ್ರು. ಇದನ್ನೂ ಓದಿ: ಲೋಕಸಭೆಯಲ್ಲಿ ಗದ್ದಲ, ಸ್ಪೀಕರ್ ಪೀಠಕ್ಕೆ ಅಗೌರವ – 8 ವಿಪಕ್ಷ ಸಂಸದರು ಇಡೀ ಅಧಿವೇಶನದಿಂದ ಅಮಾನತು

ಕೆಲವೊಂದು ದಾಖಲೆಗಳನ್ನ ತೋರಿಸಿದ ಅಶೋಕ್, ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳ ಲೂಟಿ ಬಗ್ಗೆ ವಿವರಿಸಿದ್ರು. ಇದರ ತನಿಖೆ ಆಗಬೇಕು. ತನಿಖಾ ವರದಿ ಬರುವವರೆಗೂ ಸಚಿವ ತಿಮ್ಮಾಪೂರ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಅಬಕಾರಿ ಸಚಿವರು ಸಚಿವರಾಗಲು ಅರ್ಹರಲ್ಲ. ಲೂಟಿ ಹಣ ಎಲ್ಲಿ ಹೋಯ್ತು ಅಂತ ತನಿಖೆ ಆಗಬೇಕು. ಅಲ್ಲಿಯವರೆಗೂ ಸಚಿವರು ರಾಜೀನಾಮೆ ಕೊಡಬೇಕು ಎಂದು ಸದನದಲ್ಲಿ ಸಚಿವ ಆರ್.ಬಿ ತಿಮ್ಮಾಪೂರ ರಾಜೀನಾಮೆಗೆ ಅಶೋಕ್ ಒತ್ತಾಯಿಸಿದರು.

Siddaramaiah 4

ಅಶೋಕ್ ಭಾಷಣ ಮುಗಿಯುವಾಗ ಬಂದ ಸಿಎಂ ಸಿದ್ದರಾಮಯ್ಯ ಸದನಕ್ಕೆ ಆಗಮಿಸಿದರು. ಈ ವೇಳೆ ಸಿದ್ದರಾಮಯ್ಯ ಕಾಲೆಳೆದ ಅಶೋಕ್, ಸಿನಿಮಾದಲ್ಲಿ ಪೊಲೀಸರು ಕೊನೆಗೆ ಬರ್ತಾರೆ, ಹಾಗೆ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಕೊನೆಗೆ ಬಂದು ಕಳ್ಳರ ಬಂಧನ ಮಾಡ್ತಾರೆ. ಹಾಗೆ ಸಚಿವರ ಬಂಧನ ಮಾಡ್ತಾರಾ ನೋಡೋಣ ಎಂದು ಕಾಲೆಳೆದರು. ಇದನ್ನೂ ಓದಿ: ಜೈಲಿನಿಂದ ಬಂದು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಅನಂತ್ ಸಿಂಗ್

ಅಬಕಾರಿ ಇಲಾಖೆಯಲ್ಲಿ ಕಿಕ್ ಲೆವೆಲ್ ಜಾಸ್ತಿಯಾಗಿದೆ. ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ. ನಿಷ್ಕ್ರಿಯ ಪರವಾನಗಿಗೆ ಜೀವ ಕೊಡಲಾಗ್ತಿದೆ. ಹೊಸ ರೀತಿಯ ಭ್ರಷ್ಟಾಚಾರ ನಡೆಯುತ್ತಿದೆ. ಆದರೆ, ಸಿದ್ದರಾಮಯ್ಯ ಮೌನ ಮೂರ್ತಿ ಆಗಿದ್ದಾರೆ. ಅಬಕಾರಿ ಹಗರಣದ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ರು. ಇಷ್ಟೆಲ್ಲಾ ಲೂಟಿ ಆಗಿದೆ, ಸರ್ಕಾರ ಯಾವ ಅಧಿಕಾರಿಯಿಂದಲೂ ಮಾಹಿತಿ ಪಡೆದಿಲ್ಲ. ಅಧಿಕಾರಿಗಳ ಆಡಿಯೋ ಸುಳ್ಳು ಅಂತಾರೆ. ಹಾಗಾದರೆ ಆಡಿಯೋ ಫೊರೆನ್ಸಿಕ್ ಲ್ಯಾಬ್‌ಗೆ ಯಾಕೆ ಕಳಿಸಿಲ್ಲ. ಇಲಾಖೆ ಲೂಟಿ ಹಿಂದೆ ಕಾಣದ ಕೈ ಯಾವುದು ಅಂತ ಗೊತ್ತಾಗಬೇಕಿದೆ ಎಂದು ಅಶೋಕ್ ಆಗ್ರಹಿಸಿದರು.

ಅಶೋಕ್ ಮಾತಿಗೆ ಧ್ವನಿಗೂಡಿಸಿದ ಸುನಿಲ್ ಕುಮಾರ್, ಹಗರಣದ ಬಗ್ಗೆ ಸ್ವಲ್ಪ ಮಾತಾಡಲು ಸಾಧ್ಯವಿಲ್ಲ. ಹಗರಣ ವಿವರ ಇಷ್ಟು ಉದ್ದವಿದೆ. ಹಾಗಾಗಿ ಸಣ್ಣದಾಗಿ ಮಾತಾಡಲು ಸಾಧ್ಯವಿಲ್ಲ. ನರೇಗಾ ವಿಚಾರ ನಾವು ಚರ್ಚೆ ಮಾಡಲು ಸಿದ್ಧ. ಆದರೆ, ಮೊದಲು ನಮಗೆ ಅಬಕಾರಿ ಹಗರಣ ಚರ್ಚೆ ಮಾಡಲು ಅವಕಾಶ ನೀಡ ಎಂದು ಒತ್ತಾಯಿಸಿದರು. ಆರೋಪಗಳಿಗೆ ಸಚಿವರ ಉತ್ತರಕ್ಕೆ ಪ್ರತಿಪಕ್ಷಗಳು ಆಗ್ರಹಿಸಿದವು.

ಗದ್ದಲದ ನಡುವೆಯೇ ವಿಬಿಜಿರಾಮ್‌ಜಿ ವಿರುದ್ಧ ಸಿಎಂ ನಿರ್ಣಯ ಓದಿದದಾಗಲೂ ವಿಪಕ್ಷಗಳು ತಿಮ್ಮಾಪೂರ ರಾಜೀನಾಮೆಗೆ ಪಟ್ಟು ಹಿಡಿದು ಅಡ್ಡಿ ಮಾಡ್ತಿದ್ರು. ಈ ವೇಳೆ ಮಾತಾಡಿದ ಸಿಎಂ, ತಿಮ್ಮಾಪೂರ ಸಂಜೆ ಉತ್ತರ ಕೊಡ್ತಾರೆ, ಅವರ ಮೇಲೆ ಆರೋಪ ಸುಳ್ಳು. ಅವರು ಯಾಕೆ ರಾಜೀನಾಮೆ ಕೊಡಬೇಕು. ನೀವು ಹೇಳಿದ್ದಕ್ಕೆಲ್ಲ ರಾಜೀನಾಮೆ ಕೊಡಬೇಕಾ ಅಂತ ತಿಮ್ಮಾಪೂರರನ್ನ ಸಿಎಂ ಸಮರ್ಥಿಸಿಕೊಂಡ್ರು. ಸ್ಪೀಕರ್ ಮಾತೂ ಕೇಳದೇ ವಿಪಕ್ಷ ಸದಸ್ಯರು ಗದ್ದಲ ಮುಂದುವರೆಸಿದರು. ಬಿಜೆಪಿ ಹಾಗೂ ಜೆಡಿಎಸ್ ಗದ್ದಲ ತೀವ್ರಗೊಂಡರೂ ಸಚಿವ ಆರ್.ಬಿ ತಿಮ್ಮಾಪೂರ ಸೈಲೆಂಟ್ ಆಗಿದ್ದರು. ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಸುಮ್ಮನೇ ಕೂತಿದ್ದು ಅಚ್ಚರಿ ತರಿಸಿತ್ತು.

TAGGED:bengaluruPendriver ashokRB TimmapurVBGRAMGಆರ್. ಅಶೋಕ್‍ಆರ್‌.ಬಿ ತಿಮ್ಮಾಪೂರಪೆನ್‌ ಡ್ರೈವ್‌ಬೆಂಗಳೂರುವಿಬಿಜಿರಾಮ್‌ಜಿ
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

Iran Power Plants
Latest

ಟ್ರಂಪ್‌ಗೆ ಟೆನ್ಷನ್‌ ಕೊಟ್ಟ ಇರಾನ್‌ – ವಿದ್ಯುತ್‌ ಸ್ಥಾವರಗಳ ಸುತ್ತ ಮಾನವ ಸರಪಳಿ ನಿರ್ಮಿಸಲು ದೇಶದ ಯುವ ಸಮೂಹಕ್ಕೆ ಕರೆ

Public TV
By Public TV
11 minutes ago
Illicit Relations
Bengaluru City

ಅನೈತಿಕ ಸಂಬಂಧಕ್ಕೆ ಅಡ್ಡಿ – ಪ್ರೇಯಸಿಯ ಪತಿಯ ಹತ್ಯೆ

Public TV
By Public TV
29 minutes ago
Auto Gas
Bengaluru City

ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

Public TV
By Public TV
1 hour ago
America China AI
Latest

ಯುಎಸ್ ಸೇನೆ ಮಾಹಿತಿ ಇರಾನ್‌ಗೆ ಮಾರಿದ ಚೀನಾ: ಅಮೆರಿಕ

Public TV
By Public TV
1 hour ago
Tolll
Latest

ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್‌!

Public TV
By Public TV
1 hour ago
Chikkamagaluru School 2
Chikkamagaluru

ಮಕ್ಕಳ ಭವಿಷ್ಯಕ್ಕಾಗಿ ಅಡಿಕೆ ತೋಟ ಬೆಳೆಸಿದ ಸರ್ಕಾರಿ ಶಾಲೆ – ವಿದ್ಯಾರ್ಥಿಗಳನ್ನ ವಿಮಾನದಲ್ಲಿ ಕರೆದೊಯ್ಯಬೇಕೆಂಬ ಆಸೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?