ಬೆಂಗಳೂರು: ಕಾಂಗ್ರೆಸ್ (Congress) ಪಕ್ಷ ಆಡಳಿತಕ್ಕೆ ಬರುವುದೇ ಗ್ಯಾರಂಟಿಯಿಲ್ಲ. ಇನ್ನು ಗ್ಯಾರಂಟಿ ಕಾರ್ಡ್‌ನಿಂದ ಏನು ಉಪಯೋಗ ಎಂದು ಸಚಿವ ಆರ್.ಅಶೋಕ್ (R.Ashok) ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ (Basavaraj Bommai) ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ನಮ್ಮ ಸರ್ಕಾರವೇ ಬರುವುದು. ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಬರುವುದಿಲ್ಲ. ನಮ್ಮದು ನ್ಯಾಷನಲ್ ಪಾರ್ಟಿ. ಜಾತಿ ಪಾರ್ಟಿ ಅಲ್ಲ. ಭಾರತೀಯತೆ ಮತ್ತು ಹಿಂದುತ್ವ ಮಾತ್ರವೇ ನಮ್ಮ ನಿಲುವು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ
ಮುನಿರತ್ನ (Munirathna) ಅವರ ಉರಿಗೌಡ ನಂಜೇಗೌಡ ಚಿತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಚಿತ್ರದ ಬಗ್ಗೆ ಸ್ವಾಮೀಜಿಗಳು ಮಾತನಾಡಿದ್ದಾರೆ. ಆದರೆ ಮುನಿರತ್ನ ಅವರ ಜೊತೆ ಸ್ವಾಮೀಜಿಗಳು ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಅದು ಕಾಲ್ಪನಿಕ ಅಲ್ಲ. ಈ ಕುರಿತು ಪುಸ್ತಕ ಇದೆ. ನಮ್ಮ ಸ್ಟ್ಯಾಂಡ್ ಕ್ಲಿಯರ್ ಇದೆ. ಆದರೆ ಸ್ವಾಮೀಜಿಗಳು ಸಿನಿಮಾದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಉರಿಗೌಡ-ನಂಜೇಗೌಡ ಚಿತ್ರ ಮಾಡಬೇಕಾ ಬೇಡವಾ ಎನ್ನುವುದರ ಬಗ್ಗೆ ನನ್ನ ಮತ್ತು ಡಾ.ಅಶ್ವಥ್ ನಾರಾಯಣ್ (C.N.Ashwath Narayan) ಅಭಿಪ್ರಾಯ ಒಂದೇ. ಮುನಿರತ್ನ ಒಬ್ಬ ಸಿನಿಮಾ ನಿರ್ಮಪಕನಾಗಿ ಮಾತನಾಡಿದ್ದಾರೆ. ನಾವು ಮುನಿರತ್ನ ಅವರನ್ನು ಕರೆದು ಮಾತನಾಡುತ್ತೇವೆ ಎಂದರು. ಇದನ್ನೂ ಓದಿ: ಭಾರತದಲ್ಲಿರುವ ಶೇ.90 ರಷ್ಟು ಮುಸ್ಲಿಮರು ಮತಾಂತರ ಆದವ್ರು – ಬಿಹಾರ ಸಚಿವ
ಪದ್ಮನಾಭನಗರದಲ್ಲಿ (Padmanabhanagara) ನಟಿ ರಮ್ಯಾ (Ramya) ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ (Election) ನಿಂತುಕೊಳ್ಳಬಹುದು. ಅದು ಸಂವಿಧಾನದ ಹಕ್ಕು. ರಮ್ಯಾ ಅವರನ್ನು ಸ್ಪರ್ಧೆ ಮಾಡಿಸುವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟದ್ದು. ನಮ್ಮ ಪಕ್ಷದಲ್ಲಿ ಇನ್ನೂ ಅಭ್ಯರ್ಥಿಯನ್ನು ಘೋಷಣೆ ಮಾಡಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ದಾಖಲೆ ಬರೆದ ಸುಳ್ಯದ ಎಸ್ ಅಂಗಾರ