ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದಲ್ಲಿ ಆಡಳಿತ – ವಿಪಕ್ಷಗಳ ಶಾಸಕರ ಫೋನ್ ಟ್ಯಾಪ್ (Phone Tapping) ಅಗ್ತಿರೋದು 100% ಸತ್ಯ. ನನ್ನದು ಮತ್ತು ಕುಮಾರಸ್ವಾಮಿಯವರ (H.D Kumaraswamy) ಫೋನ್ ಈಗಲೂ ಟ್ಯಾಪ್ ಆಗ್ತಿದೆ ಎಂದು ವಿಪಕ್ಷ ನಾಯಕ ಅಶೋಕ್ (R. Ashok) ಆರೋಪಿಸಿದ್ದಾರೆ.
ಶಾಸಕರ ಫೋನ್ ಟ್ಯಾಪ್ ಬಗ್ಗೆ ಸಚಿವ ರಾಜಣ್ಣ ಪುತ್ರ ರಾಜೇಂದ್ರರಿಂದ ಸಿಎಂಗೆ ದೂರು ನೀಡಿರೋ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಕಾಂಗ್ರೆಸ್ ಸರ್ಕಾರದಲ್ಲಿ 100% ಫೋನ್ ಟ್ಯಾಪ್ ಆಗ್ತಿದೆ. ಇದಕ್ಕೆ ಒಂದು ಜಾಲವೇ ಇದೆ. ನಾನು ಮತ್ತು ಕುಮಾರಸ್ವಾಮಿ ಹಿಂದೆಯೇ ಈ ಬಗ್ಗೆ ಹೇಳಿದ್ವಿ. ಈಗ ಕಾಂಗ್ರೆಸ್ ಪಕ್ಷದ ಶಾಸಕರೇ ಇದನ್ನ ಹೇಳ್ತಿದ್ದಾರೆ. ರಾಜಕೀಯವಾಗಿ ಬಗ್ಗುಬಡಿಯಲು ಈ ಫೋನ್ ಟ್ಯಾಪ್ ಆಗ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಒಳಮೀಸಲಾತಿ, ವಾರದೊಳಗೆ ನಾಗಮೋಹನ್ ದಾಸ್ ಮಧ್ಯಂತರ ವರದಿ: ಮಹದೇವಪ್ಪ
ನಮ್ಮಿಬ್ಬರ ಫೊನ್ ಮಾತ್ರ ಅಲ್ಲ, ಎಲ್ಲಾ ವಿರೋಧ ಪಕ್ಷದವರ ಫೋನ್ ಟ್ಯಾಪಿಂಗ್ ಆಗ್ತಿದೆ. ಎರಡು ವರ್ಷಗಳಿಂದ ಈ ಟ್ಯಾಪಿಂಗ್ ಅಗ್ತಿದೆ. ಅದಕ್ಕಾಗಿಯೇ ಈ ಟ್ಯಾಪಿಂಗ್ ನಡೆಯುತ್ತಿದೆ. ದೂರು ಕೊಟ್ಟರೆ ಏನು ಪ್ರಯೋಜನ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹನಿಟ್ರ್ಯಾಪ್ ವಿಚಾರ ಕೇಳುತ್ತಿದ್ದಂತೆ ಕೈ ಮುಗಿದು ನನ್ನನ್ನು ಕ್ಷಮಿಸಿ ಎಂದ ಸಚಿವ ಜಾರ್ಜ್!