ಬೀದರ್: ರೌಡಿಶೀಟರ್ (Rowdy Sheeter) ಪೇರೆಡ್‌ನಲ್ಲಿ ರೌಡಿಗಳಿಗೆ ಬೀದರ್ ಎಸ್ಪಿ ಪ್ರದೀಪ್ ಗುಂಟಿ (SP Pradeep Gunti) ಖಡಕ್ ವಾರ್ನಿಂಗ್ ನೀಡಿದ್ದಾರೆ.
ಜಿಲ್ಲೆಯ ಪೊಲೀಸ್ ಪೇರೆಡ್ ಮೈದಾನದಲ್ಲಿ (Police Parade Ground) ನಡೆದ ರೌಡಿ ಪೆರೇಡ್‌ನಲ್ಲಿ ಜಿಲ್ಲೆಯಾದ್ಯಂತ ನೂರಾರು ರೌಡಿಗಳು ಭಾಗಿಯಾಗಿದ್ದು, ಇನ್ನೂ ಎಲ್ಲಾ ಅಪರಾಧ ಕೃತ್ಯಗಳು ಬಂದ್ ಆಗಬೇಕು. ನಾವು ಯಾವಾಗ ಮನೆ ಮೇಲೆ ದಾಳಿ ಮಾಡುತ್ತೇವೆ ಗೊತ್ತಿಲ್ಲ. ಹೀಗಾಗಿ ಮೊದಲೇ ಎಲ್ಲಾ ಅಪರಾಧಗಳನ್ನು ಬಿಟ್ಟು ಬಿಡಿ ಎಂದು ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ | ಜಂಬೂಸವಾರಿ ವೇಳೆ ಬೆದರಿ ಓಡಿದ ಹಿರಣ್ಯ ಆನೆ – ತಪ್ಪಿದ ಭಾರೀ ಅನಾಹುತ
ಇರಾನಿ ಗ್ಯಾಂಗ್‌ನ ಖತರ್ನಾಕ್ ರೌಡಿ ಪೇರೆಡ್‌ಗೆ ಕ್ಯಾಪ್ ಹಾಕೊಂಡು ಬರುತ್ತಿಯಾ, ಮೂರೂ ಕಳ್ಳತನ ಕೇಸ್ ದಾಖಲಾಗಿದ್ದರೂ ಇನ್ನೂ ನೀನು ಪರಿವರ್ತನೆಯಾಗಿಲ್ವಾ ಎಂದು ವಾರ್ನಿಂಗ್ ನೀಡಿದರು.
ಇನ್ನೂ ಗಾಂಜಾ ಕೇಸ್‌ನಲ್ಲಿ ಸಾಮೂಹಿಕವಾಗಿ ಸಿಪಿಐ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ, ನೀವು ಪೊಲೀಸ್ ಮೇಲೆಯೇ ಹಲ್ಲೆ ಮಾಡುತ್ತೀರಾ ಎಂದು ಇವರನ್ನು ರೌಡಿ ಪೇರೆಡ್‌ಗೆ ಕರೆಸಿ ಎಂದು ಸೂಚಿಸಿದ್ದಾರೆ.
ಇಂದು ರೌಡಿ ಪೇರೆಡ್‌ಗೆ ಯಾರು ಹಾಜರಾಗಿ¯್ಲ ಅಂಥವರ ಕೇಸ್ ಕ್ಲೋಸ್ ಮಾಡಲ್ಲ. ಎಲ್ಲಾ ರೌಡಿಗಳು ಪುಲ್ ಆಕ್ಟಿವ್ ಆಗಿರುವುದು ಮಾಹಿತಿ ಬಂದಿದೆ. ನಾವು ಮಧ್ಯರಾತ್ರಿ ಯಾವಾಗ ಮನೆ ಮೇಲೆ ದಾಳಿ ಮಾಡುತ್ತೆವೆ ಗೊತ್ತಿಲ್ಲ. ಹೀಗಾಗಿ ಮೊದಲೇ ಎಲ್ಲಾ ಅಪರಾಧಗಳನ್ನು ಬಿಟ್ಟು ಬಿಡಿ ಎಂದು ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ.ಇದನ್ನೂ ಓದಿ: ಸರಳವಾಗಿ ಜರುಗಿತು ವಿಜಯ್ ದಳಪತಿ, ಪೂಜಾ ಹೆಗ್ಡೆ ನಟನೆಯ ಸಿನಿಮಾ ಮುಹೂರ್ತ