ಕೆಲವೊಮ್ಮೆ ಚಿಕನ್ ತಿನ್ಬೇಕು ಅಂತಾ ತುಂಬಾ ಆಸೆ ಆಗುತ್ತೆ. ಅದು ಕೂಡ ಮನೆಯಲ್ಲಿ ಮಾಡಿದ್ದೇ ಆಗಿರಬೇಕು ಅಂತಾನೂ ಅನಿಸುತ್ತೆ. ಕೆಲವೊಮ್ಮೆ ಮಾಡೋಕೆ ಬೇಜಾರು… ಕೆಲವೊಮ್ಮೆ ಸಮಯ ಇರಲ್ಲ. ಇದೆಲ್ಲದರ ಮಧ್ಯೆ ಕಡಿಮೆ ಸಮಯದಲ್ಲಿಯೂ ಮಾಡ್ಬೋದು ಚಿಕನ್ ಚಿಲ್ಲಿ.. ನಿಜಕ್ಕೂ ತುಂಬಾ ಸುಲಭ ವಿಧಾನ…

ಬೇಕಾಗುವ ಸಾಮಗ್ರಿಗಳು:
ಮ್ಯಾರಿನೇಟ್ ಮಾಡಲು:
ಚಿಕನ್
ಕಾರ್ನ್ ಪ್ಲೋರ್
ಮೈದಾ
ಖಾರದ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಮೊಟ್ಟೆ
ಒಗ್ಗರಣೆಗೆ:
ಎಣ್ಣೆ
ಈರುಳ್ಳಿ
ದೊಡ್ಡ ಮೆಣಸಿಕಾಯಿ
ಟೊಮ್ಯಾಟೋ ಸಾಸ್
ಸೋಯಾ ಸಾಸ್
ಚಿಲ್ಲಿ ಸಾಸ್
ಉಪ್ಪು
ಕಾರ್ನ್ ಫ್ಲೋರ್‌ಗೆ ನೀರು ಸೇರಿಸಿದ ದ್ರವ
ಪೆಪ್ಪರ್ ಪೌಡರ್

ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್‌ಗೆ ಚಿಕನ್, ಅದಕ್ಕೆ ಕಾರ್ನ್ ಫ್ಲೋರ್, ಮೈದಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಉಪ್ಪು ಹಾಗೂ ಒಂದು ಮೊಟ್ಟೆಯನ್ನು ಒಡೆದುಕೊಳ್ಳಬೇಕು. ಚೆನ್ನಾಗಿ ಕಲಸಿ ಚಿಕನ್ ಅನ್ನು ಮ್ಯಾರಿನೇಟ್ ಮಾಡಿಕೊಳ್ಳಬೇಕು. 15 ನಿಮಿಷದ ಬಳಿಕ ಒಂದು ಬಾಣಲಿಗೆ ಎಣ್ಣೆ ಹಾಕಿಕೊಂಡು ಮ್ಯಾರಿನೇಟ್ ಮಾಡಿದ ಚಿಕನ್‌ನ್ನು ಕರಿದುಕೊಳ್ಳಬೇಕು.
ಇನ್ನೊಂದು ಬಾಣಲಿಗೆ ಒಗ್ಗರೆಣೆಗೆ ಸ್ವಲ್ಪ ಎಣ್ಣೆ, ಅದಕ್ಕೆ ಸಣ್ಣದಾಗಿ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ, ಕತ್ತರಿಸಿದ ಈರುಳ್ಳಿ, ದೊಡ್ಡ ಮೆಣಸಿಕಾಯಿ ಹಾಕಬೇಕು. ಚೆನ್ನಾಗಿ ಹುರಿದುಕೊಂಡು ಅದಕ್ಕೆ ಟೊಮ್ಯಾಟೋ ಸಾಸ್, ಸೋಯಾ ಸಾಸ್ ಹಾಗೂ ಚಿಲ್ಲಿ ಸಾಸ್ ಹಾಕಿ, ಮಿಶ್ರಣ ಮಾಡಬೇಕು. ಬಳಿಕ ಉಪ್ಪು, ಕಾರ್ನ್ ಫ್ಲೋರ್‌ಗೆ ನೀರು ಸೇರಿಸಿದ ದ್ರವ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಿಸಿದರೆ ಚಿಲ್ಲಿ ಚಿಕನ್ ತಯಾರಾಗುತ್ತದೆ.
ಇದು ನಿಮಗೆ ನಿಜಕ್ಕೂ ರೆಸ್ಟೋರೆಂಟ್ ಶೈಲಿಯ ರುಚಿ ನೀಡುತ್ತದೆ.


