ಇಂಗ್ಲೆಂಡ್ ರಾಣಿ ಎಲಿಜಬೆತ್ (Queen Elizabeth) ನಿನ್ನೆ ತಡರಾತ್ರಿ ವಿಧಿವಶರಾಗಿದ್ದಾರೆ. ಸಾಕಷ್ಟು ವರ್ಷಗಳಿಂದ ರಾಣಿಯಾಗಿದ್ದ ಎಲಿಜಬೆತ್ ಬಗ್ಗೆ ಇದೀಗ ಅಚ್ಚರಿಯ ವಿಚಾರವೊಂದು ಹೊರ ಬಿದ್ದಿದೆ. ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ರಾಣಿ ಎಲಿಜಬೆತ್ ತಮ್ಮ ಅಧಿಕಾರದ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಕಮಲ್ ಹಾಸನ್ (Kamal Hassan) ನಟನೆಯ ಹೊಸ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಭಾರೀ ಟೀಕೆಗೂ ಗುರಿಯಾಗಿದ್ದರು.
Advertisement
1997ರಲ್ಲಿ ಕಮಲ್ ಹಾಸನ್ ನಿರ್ದೇಶಿಸಿ, ನಿರ್ಮಿಸಿ, ನಟಿಸುತ್ತಿದ್ದ `ಮರುದನಯಾಗಂ’ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ರಾಣಿ ಎಲಿಜಬೆತ್ ಭೇಟಿ ನೀಡಿದ್ದರು. ಸುಮಾರು 20 ನಿಮಿಷಗಳ ಕಾಲ ಸಿನಿಮಾ ಸೆಟ್‌ನಲ್ಲಿ ಕಾಲ ಕಳೆದರು. ಕಮಲ್ ಹಾಸನ್ ಹಾಗೂ ಇತರ ಗಣ್ಯರೊಟ್ಟಿಗೆ ಮಾತನಾಡಿದ್ದರು. ಆದರೆ ಈ ಭೇಟಿ ವಿವಾದಕ್ಕೆ ಕಾರಣವಾಗಿತ್ತು. ಸಾಕಷ್ಟು ಟೀಕೆಗೆ ಗುರಿ ಮಾಡಿತ್ತು. ಚೆನ್ನೈನ ಎಂಜಿಆರ್ ಸ್ಟುಡಿಯೋದಲ್ಲಿ ಯುದ್ಧದ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರಾಣಿ ಎಲಿಜಬೆತ್(Queen Elizabeth) ಚಿತ್ರೀಕರಣ ಸೆಟ್‌ಗೆ ಆಗಮಿಸಿ, ಕಮಲ್ ಹಾಸನ್ ಅವರೊಟ್ಟಿಗೆ ಮಾತುಕತೆ ನಡೆಸಿದರು. ಕತೆಯ ಬಗ್ಗೆ ತಿಳಿದುಕೊಂಡರು. ಕಮಲ್‌ರ ಆಗಿನ ಪತ್ನಿ ಸಾರಿಕ ಜೊತೆಗೂ ಮಾತನಾಡಿದರು. ಇದನ್ನೂ ಓದಿ:ಸೆಟ್ಟೇರಿತು ಭಾವನಾ ಮೆನನ್- ವಿಜಯ್ ರಾಘವೇಂದ್ರ ನಟನೆಯ `ಕೇಸ್ ಆಫ್ ಕೊಂಡಾಣ’ ಚಿತ್ರ
Advertisement
ಈ ಭೇಟಿ ಯಾವ ರೀತಿ ಸುದ್ದಿ ಮಾಡಿತ್ತು ಎಂದರೆ, ಬ್ರಿಟಿಷರ ವಿರುದ್ಧ ದ್ವೇಷ ಸಾರುವ ಕಥೆ, ನಮ್ಮವರನ್ನು ಕೆಟ್ಟವರೆಂದು ಬಿಂಬಿಸುವ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ವರದಿಯಾಗಿತ್ತು. ಈ ಸಿನಿಮಾಗೆ ಭೇಟಿ ನೀಡಿರುವುದು ಬ್ರಿಟಿಷರ ಗೌರವಕ್ಕೆ ಎಲಿಜಬೆತ್ ಧಕ್ಕೆ ತಂದಿದ್ದಾರೆ ಎಂದು ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಯಾವುದೇ ಟೀಕೆಗೂ ರಾಣಿ ಎಲಿಜಬೆತ್ ಪ್ರತಿಕ್ರಿಯೆ ನೀಡಿರಲಿಲ್ಲ.
Advertisement
Queen Elizabeth II launched
Kamal Haasan Dream Project Marudhanayagam ! pic.twitter.com/j7XDCy7Rnj
— KamalHaasan – KamalismForever (@KamalismForever) August 11, 2019
Advertisement
ಇನ್ನು ಕಮಲ್ ಹಾಸನ್ ನಟನೆಯ `ಮರುದನಯಾಗಂ’ ಸಿನಿಮಾ 85 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿತ್ತು. ಇನ್ನೂ ಈ ಚಿತ್ರದ ಅತಿಯಾದ ಬಜೆಟ್‌ನಿಂದಲೇ ಈ ಚಿತ್ರ ನಿಂತಿಹೋಗಿತ್ತು.