`ಸೀತಾರಾಮ್ ಬಿನೋಯ್’ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದೇವಿ ಪ್ರಸಾದ್ ಶೆಟ್ಟಿ (Devi Prasad Shetty) ತಮ್ಮ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ನಟಿಸಿದ್ದ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ದೇವಿ ಪ್ರಸಾದ್ ಶೆಟ್ಟಿ ಈಗ ಮತ್ತೊಮ್ಮೆ ಚಿನ್ನಾರಿ ಮುತ್ತನ ಜೊತೆ ಕೈ ಜೋಡಿಸಿದ್ದಾರೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥ್ ಸ್ವಾಮಿ ದೇಗುಲದಲ್ಲಿ ಸಿನಿಮಾ `ಕೇಸ್ ಆಫ್ ಕೊಂಡಾಣ’ (Case Of Kondana) ಸರಳವಾಗಿ ಮುಹೂರ್ತ ನೆರವೇರಿಸಿದೆ.
View this post on Instagram
Advertisement
ನಟ ವಿಜಯ್ ಮಾತನಾಡಿ, `ಸೀತಾರಾಮ್ ಬಿನೋಯ್’ ಕೇಸ್ ನಂಬರ್ 18ರ ನಂತರ ಇವರು ನನಗೆ ಮತ್ತೊಮ್ಮೆ ನಟಿಸಲು ಅವಕಾಶ ಕೊಟ್ಟಿದ್ದಾರೆ. ಸಾಧಾರಣವಾಗಿ ಒಂದೊಳ್ಳೆ ತಂಡ ಸಿಗುವುದು ಅಪರೂಪ. ದೇವಿ ಡೆಡಿಕೇಷನ್, ಕೆಲಸದ ಬಗ್ಗೆ ಇರುವ ಸೀರಿಯಸ್‌ನೆಸ್ ನೋಡಿದ್ದೇನೆ. ಪ್ರತಿಯೊಬ್ಬರೂ ಈ ಸಿನಿಮಾಗೆ ಪ್ರೋತ್ಸಾಹಿಸಿ ಎಂದರು. ಇದನ್ನೂ ಓದಿ:‘ಯಶೋದಾ’ ಟೀಸರ್ನಲ್ಲಿ ಸಮಂತಾ ಮತ್ತೊಂದು ಮುಖ ಅನಾವರಣ
Advertisement
Advertisement
ಕ್ರೈಮ್ ಸಿನಿಮಾಗಳ ಬಗ್ಗೆ ಹೆಚ್ಚು ಒಲವಿರುವ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈ ಬಾರಿ ತನಿಖಾ ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. 19/2018 ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ (Vijay Raghavendra) ಹಾಗೂ ಭಾವನಾ ಮೆನನ್ (Bhavana Menon) ಇಬ್ಬರು ಪೊಲೀಸ್ ಅಧಿಕಾರಿಗಳಾಗಿ ನಟಿಸಲಿದ್ದಾರೆ. `ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ (Kushee Ravi) ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಮಾಹಿತಿಯನ್ನು ಚಿತ್ರತಂಡ ಶೀಘ್ರವಾಗಿ ನೀಡಲಿದೆ.
Advertisement
ಸಾತ್ವಿಕ್ ಹೆಬ್ಬಾರ್ ಮತ್ತು ದೇವಿ ಪ್ರಸಾದ್ ಶೆಟ್ಟಿ ಜೊತೆಗೆ ಅರವಿಂದ್ ಶೆಟ್ಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ʻಕೇಸ್ ಆಫ್ ಕೊಂಡಾಣ’ಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಸೆಪ್ಟೆಂಬರ್ 28ರಿಂದ ಶೂಟಿಂಗ್ ಆರಂಭವಾಗಲಿದೆ. ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.