ಲಂಡನ್: ರಾಣಿ ಎಲಿಜಬೆತ್ 2(Queen Elizabeth II) ಬರೆದ ರಹಸ್ಯ ಪತ್ರವನ್ನು ಆಸ್ಟ್ರೇಲಿಯಾದ(Australia) ಸಿಡ್ನಿಯಲ್ಲಿರುವ ರಾಣಿ ವಿಕ್ಟೋರಿಯಾ ಅರಮನೆಯಲ್ಲಿ ಮರೆಮಾಚಲಾಗಿದ್ದು, ಇದನ್ನು 60 ವರ್ಷಗಳ ಬಳಿಕ ತೆರೆಯಲು ರಾಣಿ ಸೂಚಿಸಿದ್ದರು.
ಎಲಿಜಬೆತ್ ರಾಣಿಯು ಈ ಪತ್ರವನ್ನು 1986ರ ನವೆಂಬರ್‌ನಲ್ಲಿ ಸಿಡ್ನಿಯ(Sydney) ಜನರನ್ನು ಉದ್ದೇಶಿಸಿ ಬರೆದಿದ್ದರು. ಆದರೆ ಈ ಪತ್ರವನ್ನು 2085ರಲ್ಲಿ ಮಾತ್ರ ತೆರೆಯಬಹುದು ಎಂದು ರಾಣಿಯು ಷರತ್ತನ್ನು ವಿಧಿಸಿದ್ದರು. ಇದರಿಂದಾಗಿ ಎಲಿಜಬೆತ್ ರಾಣಿಯ ಮುತ್ತಜ್ಜಿ ವಿಕ್ಟೋರಿಯಾ ರಾಣಿಯ ವಜ್ರ ಮಹೋತ್ಸವವನ್ನು ಆಚರಿಸಲು 1898ರಲ್ಲಿ ನಿರ್ಮಿಸಲಾಗಿದ್ದ ಕಟ್ಟಡದಲ್ಲಿ ಮರೆ ಮಾಚಿ ಇಡಲಾಗಿದೆ.
Advertisement
Advertisement
ಆಸ್ಟ್ರೇಲಿಯಾದ ಸ್ಥಳೀಯ ನ್ಯೂಸ್ ಸಂಸ್ಥೆಯ ವರದಿ ಪ್ರಕಾರ, ಅಚ್ಚರಿಯ ವಿಷಯವೆಂದರೆ ಆ ಪತ್ರದಲ್ಲಿ ಏನಿದೆ ಎನ್ನುವುದರ ಬಗ್ಗೆ ಈವರೆಗೂ ರಾಣಿಯ ವೈಯಕ್ತಿಕ ಸಿಬ್ಬಂದಿ ತಿಳಿದಿಲ್ಲ. ಅಷ್ಟೇ ಅಲ್ಲದೇ ಈ ಪತ್ರವು ಯಾರ ಕೈಗೂ ಸಿಗಬಾರದೆಂದು ನಿರ್ಬಂಧಿತ ಪ್ರದೇಶದಲ್ಲಿರುವ ಗಾಜಿನ ಪೆಟ್ಟಿಗೆಯಲ್ಲಿ ಭದ್ರವಾಗಿ ಇಡಲಾಗಿದೆ.
Advertisement
Advertisement
ಎಲಿಜಬೆತ್ ರಾಣಿಯು ಈ ಪತ್ರವನ್ನು ತೆರೆಯುವ ದಿನಾಂಕದ ಬಗ್ಗೆ ಸಿಡ್ನಿಯ ಮೇಯರ್‌ಗೆ ಮತ್ತೊಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ 2085ರಲ್ಲಿ ನೀವೇ ಒಂದು ಸೂಕ್ತ ದಿನವನ್ನು ಆಯ್ಕೆ ಮಾಡಿ ಈ ಲಕೋಟೆಯನ್ನು ತೆರೆದು ಸಿಡ್ನಿ ನಾಗರಿಕರಿಗೆ ನನ್ನ ಸಂದೇಶವನ್ನು ತಿಳಿಸಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಪತ್ರದ ಮೇಲೆ ಎಲಿಜಬೆತ್ ಆರ್ ಎಂದು ಸಹಿ ಹಾಕಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್-2 ಇನ್ನಿಲ್ಲ
ರಾಣಿ ಎಲಿಜಬೆತ್ ಆಸ್ಟ್ರೇಲಿಯಾಕ್ಕೆ 16 ಬಾರಿ ಭೇಟಿ ನೀಡಿದ್ದರು. ರಾಣಿಯ ಮರಣದ ಹಿನ್ನೆಲೆಯಲ್ಲಿ, ಸಿಡ್ನಿಯ ಒಪೇರಾ ಹೌಸ್‍ನಲ್ಲಿ ದೀಪ ಬೆಳಗಿಸಿ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ: 3ನೇ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕೃತ ಘೋಷಣೆ