ಲಂಡನ್: ವೇಲ್ಸ್‍ನ ರಾಜಕುಮಾರಿಯಾಗಿರುವ ಕೆಮಿಲಾ ಅವರನ್ನು ಬ್ರಿಟನ್‍ನ ಮುಂದಿನ ರಾಣಿ ಎಂದು ಕ್ವೀನ್ ಎರಡನೇ ಎಲಿಜಬೆತ್ ಘೋಷಿಸಿದ್ದಾರೆ.
ಈ ಮೂಲಕ 70 ವರ್ಷಗಳು ರಾಣಿಯಾಗಿದ್ದ ಎರಡನೇ ಎಲಿಜಬೆತ್ ಅವರು ತಮ್ಮ ಅಧಿಕಾರವನ್ನು ಕೆಮಿಲಾ ಅವರಿಗೆ ಹಸ್ತಾಂತರಿಸಲಿದ್ದಾರೆ. ರಾಜಕುಮಾರ ಚಾರ್ಲ್ಸ್ ಅವರು ರಾಜನ ಪಟ್ಟಕ್ಕೆ ಏರಿದ ಹಿನ್ನೆಲೆಯಲ್ಲಿ ಅವರ ಎರಡನೇ ಪತ್ನಿ ಡಚ್ಚಸ್ ಆಫ್ ಕಾರ್ನ್‍ವಾಲ್ ಆಗಿರುವ ಕೆಮಿಲಾ ರಾಣಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
Advertisement
Advertisement
ತಾವು ರಾಣಿಯಾಗಿ ಅಧಿಕಾರ ವಹಿಸಿ 70 ವರ್ಷಗಳಾಗಿದ್ದು, ಇದೀಗ ತಮ್ಮ ಸೊಸೆ ಕೆಮಿಲಾ ಅವರನ್ನು ರಾಣಿ ಮಾಡುವುದಾಗಿ ಘೋಷಿಸಿದ್ದಾರೆ. ಈ ಕುರಿತು ಖುದ್ದು ಎರಡನೇ ಎಲಿಜಬೆತ್ ಲಿಖಿತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಫೆ.19 ರಿಂದ 28ವರೆಗೆ ದ.ಕ ಜಿಲ್ಲೆಯಲ್ಲಿ ಕಡತ ವಿಲೇವಾರಿ, ಕಂದಾಯ ಮೇಳ
Advertisement
ರಾಜ ಪ್ರಜಾಪ್ರಭುತ್ವದ ಭವಿಷ್ಯವನ್ನು ರೂಪಿಸಲು ಚಾರ್ಲ್ಸ್ ರಾಜನಾಗುತ್ತಿದ್ದಂತೆ ಕೆಮಿಲಾ ಅವರು ರಾಣಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈಕೆಯ ಮೇಲೆ ತಮಗೆ ಹಲವು ನಿರೀಕ್ಷೆಗಳಿವೆ ಎಂದರು. ಇದನ್ನೂ ಓದಿ: ರಾಜ್ಯಾದ್ಯಂತ ಎರಡು ದಿನ ಶೋಕಾಚರಣೆ
Advertisement
ಇಷ್ಟು ವರ್ಷಗಳವರೆಗೆ ನೀವೆಲ್ಲರೂ ನೀಡಿರುವ ಸಹಕಾರಕ್ಕಾಗಿ ಧನ್ಯವಾದಗಳು. ನೀವು ತೋರಿರುವ ಪ್ರೀತಿ ಹಾಗೂ ನಿಷ್ಠೆಗೆ ಆಭಾರಿಯಾಗಿದ್ದೇನೆ. ನಿಮ್ಮ ಈ ಆಶೀರ್ವಾದ ಚಾರ್ಲ್ಸ್ ಹಾಗೂ ಕೆಮಿಲಾ ಮೇಲೂ ಇರಲಿ ಎಂದು ಮನವಿ ಮಾಡಿದ್ದಾರೆ.