ಮಡಿಕೇರಿ: ಕನ್ನಡಿಗರ ಪಾಲಿನ ಅನ್ನದಾತೆ. ಕೊಡಗಿನ ಜನರ ಕುಲದೇವತೆ ಜೀವನದಿ ಕಾವೇರಿಯ ಹುಟ್ಟು ನೆಲ ಈಗ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ ಬೆಳವಣಿಗೆಯೊಂದು ಭಕ್ತರು ಮತ್ತು ದೇವಾಲಯ ಆಡಳಿತ ಮಂಡಳಿ ನಡುವಿನ ಜಿದ್ದಿಗೆ ಕಾರಣವಾಗಿದೆ.
ಜೀವನದಿ ಕಾವೇರಿ ತವರಲ್ಲಿ ನೂರಾರು ವರ್ಷ ಹಳೆಯದಾದ, ಅಗಸ್ತ್ಯ ಮುನಿ ಪ್ರತಿಷ್ಠಾಪನೆ ಮಾಡಿದ್ದು ಎನ್ನಲಾದ ಲಿಂಗವೊಂದನ್ನು ಅಗೆದು ತೆಗೆದಿರೋದು ಈಗ ವಿವಾದ ಸೃಷ್ಟಿಸಿದೆ. ಹಳೆಯ ಲಿಂಗದಲ್ಲಿ ದೈವಿಕ ಶಕ್ತಿ ಅಂತಾ ಅದನ್ನು ಮಣ್ಣಿನಡಿ ಹುದುಗಿಸಿ ಇಡಲಾಗಿತ್ತು. ಆದರೆ ಕೆಲವು ತಿಂಗಳ ಹಿಂದೆ ತಲಕಾವೇರಿಯಲ್ಲಿ ಕೇರಳದ ಜ್ಯೋತಿಷಿಗಳಾದ ನಾರಾಯಣ ಪೊದುವಾಳ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆದಿತ್ತು. ಆಗ ಹುದುಗಿಸಲಾಗಿದ್ದ ಹಳೆಯ ಲಿಂಗ ಇಲ್ಲಿನ ಬೆಳವಣಿಗೆಗೆ ತೊಡಕಾಗಿದೆ. ಮಾತ್ರವಲ್ಲದೇ ಅದನ್ನು ತೆಗೆದು ಬಂಗಾಳ ಕೊಲ್ಲಿಯ ಪೂಂಪ್‍ಹಾರ್‍ನಲ್ಲಿ ವಿಸರ್ಜಿಸಿದರೆ ದೋಷ ಪರಿಹಾರವಾಗುತ್ತದೆ ಎಂದು ಸಲಹೆ ನೀಡಿದ್ದರು. ಹೀಗಾಗಿ ದೇವಾಲಯ ಸಮಿತಿ ಮಣ್ಣಿನಡಿ ಹುದುಗಿಸಿದ್ದ ಲಿಂಗವನ್ನು ಅಗೆದು, ತೆಗೆದು ಪೂಂಪ್‍ಹಾರ್ ನಲ್ಲಿ ವಿಸರ್ಜನೆ ಮಾಡಲು ಮುಂದಾಗಿದೆ. ಇದು ಭಕ್ತರನ್ನು ಕೆರಳಿಸಿದೆ.
Advertisement
Advertisement
ಹೊಸದಾಗಿ ಅಧಿಕಾರಕ್ಕೆ ಬಂದ ಆಡಳಿತ ಮಂಡಳಿ ಭಕ್ತರನ್ನು ಗಣನೆಗೆ ತೆಗೆದುಕೊಳ್ಳದೆ ತನ್ನಿಚ್ಛೆಯಂತೆ ತೀರ್ಮಾನ ಕೈಗೊಳ್ಳುತ್ತಿದೆಯಂತೆ. ಕುಂಡಿಕೆ ಬಳಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಸಂಪ್ರದಾಯವಾದ ಕುಂಕುಮಾರ್ಚನೆ ಹಾಗೂ ತೀರ್ಥ ಪ್ರೋಕ್ಷಣೆಯನ್ನು ದೇವಾಲಯದ ಪೌಳಿಗೆ ಸ್ಥಳಾಂತರಿಸಲಾಗಿದೆ. ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ ಹೇರಿದ್ದಕ್ಕೂ ಕಿಡಿಕಾರಿದ್ದಾರೆ. ನಾವು ಜ್ಯೋತಿಷಿಯ ಸಲಹೆಯಂತೆ ಲಿಂಗ ತೆಗೆದಿದ್ದೇವೆ. ಆದರೆ ಕೆಲವರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ಕೆಲವು ವ್ಯಕ್ತಿಗಳ ಕೈವಾಡವೂ ಇದೆ ಅಂತಾ ದೇವಸ್ಥಾನದವರು ಆರೋಪಿಸಿದ್ದಾರೆ.
Advertisement
Advertisement
ದೇವಾಲಯ ವ್ಯವಸ್ಥಾಪನಾ ಸಮಿತಿಯಲ್ಲಿ ರಾಜಕೀಯ ಆಗುತ್ತಿದೆಯಂತೆ. ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ಮುಂದುವರಿಸಬೇಕು. ಸಮಿತಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲೇ ಗೊಂದಲ ಇದೆ. ಅನಾವಶ್ಯಕವಾಗಿ ಆಗಾಗ್ಗೆ ಅಷ್ಟಮಂಗಲ ಪ್ರಶ್ನೆ ನಡೆಸಿ ಭಕ್ತರಲ್ಲಿ ಗೊಂದಲ ಮೂಡಿಸುವ ಕಾರ್ಯ ಆಗುತ್ತಿದೆ ಎಂದು ಜಿಲ್ಲೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv